ನಮ್ಮಲ್ಲಿ ಕೆಲವೊಂದಷ್ಟು ಆಡು ಮಾತುಗಳಿವೆ. ‘ನಾಯಿಗಿಲ್ಲದ ನಿಯತ್ತು’, ‘ನಾಯಿ ಬಾಲ ಯಾವತ್ತಿಗೂ ಡೊಂಕು’, ‘ನಾಯಿ ಮನೆ ಕಾಯಿ’ ಹೀಗೆ ಹಲವು… ನಾಯಿಯೆಂದರೆ ಕೇವಲ ಮನೆ ಕಾಯುವ ಪ್ರಾಣಿ, ಬುದ್ಧಿಯಿಲ್ಲದ, ಮೂಳೆಯನ್ನೆಸೆದರೆ ಸ್ವಾಮಿ ಭೇದ ಮರೆತು ಬಾಲ ಅಲ್ಲಾಡಿಸಿಕೊಂಡು ಹಿಂಬಾಲಿಸುವ ಪ್ರಾಣಿ ಎಂದಷ್ಟೇ ಹಲವರ ಸಿದ್ಧಾಂತ. ಅದಕ್ಕೂ ಜೀವವಿರುತ್ತದೆ,...