Category: ಕನ್ನಡ ಕಾದಂಬರಿಗಳು
ಹಳ್ಳಿಯಲ್ಲಿ ಕೌತುಕದ ವಿದ್ಯಮಾನಗಳನ್ನು ಗಮನಿಸುತ್ತಾ, ಪಶು, ಪಕ್ಷಿ, ಕ್ರೀಮಿ, ಕೀಟಗಳ ಸ್ವಭಾವ ವೈವಿಧ್ಯತೆಯನ್ನು ಸೂಕ್ಷ್ಮವಾಗಿ ಅಭ್ಯಸಿಸಿ ತೇಜಸ್ವಿಯವರು ಬರೆದ ಸ್ವಾನುಭವಗಳ ಸಂಗ್ರಹವೇ ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕತೆಗಳು ಎಂಬ ಪುಸ್ತಕ. ಸುಶ್ಮಿತ ಮತ್ತು ಈಶಾನ್ಯೆ ಗೆ (ತೇಜಸ್ವಿಯವರ ಮಕ್ಕಳು) ಬಾಲ್ಯದ ಕೂತುಹಲಗಳು ಗರಿಗೆದರಿ...
ನಾನು ವಾಲ್ಮೀಕಿ ರಾಮಾಯಣವನ್ನು ಪ್ರತ್ಯಕ್ಷ ಓದಿಲ್ಲ. ಚಿಕ್ಕ ವಯಸ್ಸಿನಿಂದಲೂ ಅಲ್ಲಿ ಇಲ್ಲಿ ಬರುತ್ತಿದ್ದ ರಾಮಾಯಣ, ಮಹಾಭಾರತದ ಕತೆಗಳನ್ನು ಕೇಳುತ್ತಲೇ ಈ ಎರಡು ಮಹಾ ಗ್ರಂಥಗಳ ಪರಿಚಯವಾದದ್ದು. ಎರಡರ ವಿವರವಾದ ಕತೆ ಏನೇ ಇರಲಿ, ಧರ್ಮದಿಂದ ಅಧರ್ಮವನ್ನು ಗೆದ್ದಿದ್ದು, ಕೆಟ್ಟದ್ದರ ಮೇಲೆ ಒಳ್ಳೆಯತನದ ಜಯ ಎಂಬ ಸಾರ್ವಕಾಲಿಕ ಸತ್ಯ...
ಹೊಡೆದಾಟ, ಸಾವು, ಬೆದರಿಕೆ, ಜಾತಿ ವೈಷಮ್ಯ, ಮೇಲು-ಕೀಳು, ದೆವ್ವ ಭೂತಗಳು ಹೀಗೆ ಜನಪ್ರಿಯ ಸಾಹಿತ್ಯದ ಎಲ್ಲ ಅಂಶಗಳನ್ನು ಲಘು ಸಾಹಿತ್ಯದ ಹಾಸ್ಯ ಹಾರಾಟದಂತಹ ಅಂಶಗಳನ್ನು ಯಾವ ಸಂಕೋಚವೂ ಇಲ್ಲದೆ ಸಲೀಸಾಗಿ ಮುಕ್ತವಾಗಿ ಬಳಸಿಕೊಳ್ಳುವ ತೇಜಸ್ವಿ ಅವುಗಳ ಸಕಾಲಿಕ ನಿರಾಕರಣೆಯಲ್ಲಿ ತೋರುವ ಕಲಾತ್ಮಕ ಜಾಣ್ಮೆ ಚಿದಂಬರ ರಹಸ್ಯವನ್ನು...
ಹೊಟ್ಟೆ ಬಟ್ಟೆಯ ಪೋಷಣೆಗಾಗಿ ದುಡಿಯುವವರು ಕೆಲವರು, ಇನ್ನು ಕೆಲವರು ಯಾರದೋ ಬಲವಂತಕ್ಕೆ ತಮಗಿಷ್ಟವಿಲ್ಲದ ವೃತ್ತಿಯನ್ನು ಮಾಡುವ ಪ್ರವೃತ್ತಿಯವರು, ಹಣಕ್ಕೆ ಮರುಳಾಗಿ ಮನಕ್ಕೆ ಬೇಲಿ ಹಾಕಿಕೊಂಡು ಕಾಯಕ ಮಾಡುವವರು ಕೆಲವರಾದರೆ ಇನ್ನು ಕೆಲವರು ತಲೆಮಾರುಗಳಿಂದ ಬಂದಂತಹ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗುವ ಗುಣದವರು, ಈ ಎಲ್ಲ ಕೆಲವರುಗಳ ಮಧ್ಯೆ...
ಧರಣಿಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟ ದೇಶದೊಳಿರುವ ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನೊ ಸತ್ಯವೆ ನಮ್ಮ ತಾಯಿ ತಂದೆ ಸತ್ಯವೆ ನಮ್ಮ ಬಂಧು ಬಳಗ ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು…!! ನಾವೆಲ್ಲ ಈ ಹಾಡು ಕೇಳುತ್ತ ಬೆಳೆದವರು. ಕೊಟ್ಟ ಮಾತಿಗೆ ತಪ್ಪದೆ ಹೆಬ್ಬುಲಿಗೆ ತನ್ನನ್ನೇ...
ಗೃಹಭಂಗ ಕಾದಂಬರಿಯ ಮುಂದುವರೆದ ಭಾಗ. ಒಂದು ರೀತಿಯಲ್ಲಿ ಇದು ನಮ್ಮೆಲ್ಲರ ಕಥೆ. ಸದಾ ಏನನ್ನೋ ಹುಡುಕುತ್ತ, ಗೊತ್ತು ಗುರಿಯಿಲ್ಲದೆ ಓಡುತ್ತಿದ್ದೇವೆ ನಾವು. ನಮಗೆ ಬೇಕಾಗಿರುವುದೇನು ಎಂದು ತಿಳಿಯದೆ ಎಲ್ಲದರ ಬೆನ್ನು ಹತ್ತಿ ಕೊನೆಗೆ ಒಂದು ದಿನ ಸತ್ತು ಹೋಗುವವರು ನಾವೆಲ್ಲ! ಇದು ಗೃಹಭಂಗದ ಮುಂದುವರೆದ ಭಾಗವಾದರು ಈ...
ತನಗಿದ್ದ ಕಷ್ಟಗಳನ್ನು ಮರೆತು ಮಕ್ಕಳಿಗಾಗಿ ಬದುಕಿದ ದಿಟ್ಟ ಮಹಿಳೆಯೊಬ್ಬಳ ಕಥೆ, ತನಗೆ ಸೂರಿಲ್ಲದಿದ್ದರು ಮುಂದೊಂದು ದಿನ ತನ್ನ ಮಕ್ಕಳು ಸುರಕ್ಷಿತವಾಗಿರಲಿ ಎಂದು ಕಷ್ಟು ಪಟ್ಟು ದುಡಿದು ಮನೆ ಕಟ್ಟಿಸಿದ ಮಾತೃ ಹೃದಯದ ಕಥೆ.. ಇಂತಹ ಅದೆಷ್ಟೋ ಮಹಿಳೆಯರು ನಮ್ಮಲ್ಲಿದ್ದಾರೆ. ಗಂಡನ ಆಸರೆ ಇಲ್ಲದೆ, ಯಾರ ಸಹಾಯವು...
ಕಾಡಿನ ಕಥೆಗಳು ಭಾಗ-೪ ಎಂಬ ಅಂಡಸ್ರೆನ್ ಬರೆದ ಕತೆಗಳ ಭಾವಾನುವಾದವೇ ಈ ಪುಸ್ತಕ. ಈ ಪುಸ್ತಕದಲ್ಲಿ ನಾಲ್ಕು ಘಟನೆಗಳು ಬರುತ್ತವೆ. ಎಲ್ಲವು ಪ್ರಾಣಿ ಬೇಟೆಗೆ ಸಂಬಂಧಿಸಿದ್ದು. ಮುನಿಶಾಮಿ ಮತ್ತು ಮಾಗಡಿ ಚಿರತೆ; ಬೆಂಗಳೂರಿನ ವಿವರಣೆಯೊಂದಿಗೆ ಶುರುವಾಗುತ್ತದೆ ಈ ಘಟನೆ. ಹಾಗೆ ಹಿಂದಿದ್ದ ಬೆಂಗಳೂರು ಹಸಿರಿನಿಂದ ಕೂಡಿ...
‘ಕಾದಂಬರಿಕಾರರಲ್ಲಿ ಬೇಕಾಗಿರುವುದು ಪ್ರಾಮಾಣಿಕತೆ. ಕೇವಲ ಮಾರಾಟದ ಸರಕಿನಂತೆ ಕಾದಂಬರಿ ಬರೆದರೆ ಅದು ವಾಚಕರಿಗೆ ಮಾಡುವ ವಂಚನೆ. ಕೇವಲ ಮನೋರಂಜನೆಯ ದೃಷ್ಟಿಯಿಂದ ಕಾದಂಬರಿ ಏಕೆ ಬರೆಯಬಾರದು’ ಇವು ಗೋಪಾಲಕೃಷ್ಣ ಅಡಿಗರು ತ.ರಾ.ಸು ಅವರಿಗೆ ಹೇಳುವ ಮಾತುಗಳು.
ಜಯಕುಮಾರ ಒಬ್ಬ ಖ್ಯಾತ ಉದ್ದ್ಯಮಿ. ಚಿಕ್ಕದಾಗಿ ಶುರುವಾಗುವ ಉದ್ಯಮ ಇವರ ಕಾರ್ಯ ಕ್ಷಮತೆ ಮತ್ತು ಹೆಂಡತಿ ವೈಜಯಂತಿಯ ತಾಳ್ಮೆ, ಕಾರ್ಮಿಕರೊಡನೆ ಪ್ರೀತಿಯಿಂದ ವ್ಯವಹರಿಸುವ ಪರಿ, ಎಲ್ಲವನ್ನು ಸಂಭಾಳಿಸಿಕೊಂಡು ಹೋಗುವ ಜಾಣ್ಮೆಯಿಂದ ಬ್ರಹತ ಆಗಿ ಬೆಳೆಯುತ್ತದೆ. ವೈಜಯಂತಿ ಒಬ್ಬ ಸದ್ಗುಣಿ ಮಹಿಳೆ. ಶುರುವಾತಿನಲ್ಲಿ ತನ್ನ ಬಳೆಗಳನ್ನು ಅಡವಿಟ್ಟು...