ಮೊನ್ನೆ ಅಮೆಜಾನ್ ಪ್ರೈಮ್ ನಲ್ಲಿ ಸರಬ್ಜಿತ್ ಚಿತ್ರ ನೋಡಿದೆ. ಯಾಕೋ ತುಂಬಾ ಬೇಜಾರಾಯಿತು. ನನಗೆ ನಿಜ ಜೀವನದ ಕತೆಗಳು ಸಿನಿಮಾ ಆಗಿ ತೆರೆಯ ಮೇಲೆ ಬಂದಾಗ ಕೂತುಹಲಕ್ಕಿಂತ ಹೆಚ್ಚಾಗಿ ಸತ್ಯ ತಿಳಿಯುವ ಹಂಬಲ. ಎಷ್ಟೋ ಚಿತ್ರಗಳು ಇರುವ ಸತ್ಯವನ್ನು ಮರೆಮಾಚಿ ಇನ್ನೇನನ್ನೋ ತೋರಿಸುತ್ತವೆ. ಕೆಲವು ನಿರ್ದೇಶಕರು ನಿಜ...