Tagged: Kannada

ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕತೆಗಳು- ತೇಜಸ್ವಿಯವರ ಪುಸ್ತಕದಲ್ಲೊಂದು ಇಣುಕು ನೋಟ

ಹಳ್ಳಿಯಲ್ಲಿ ಕೌತುಕದ ವಿದ್ಯಮಾನಗಳನ್ನು ಗಮನಿಸುತ್ತಾ, ಪಶು, ಪಕ್ಷಿ, ಕ್ರೀಮಿ, ಕೀಟಗಳ ಸ್ವಭಾವ ವೈವಿಧ್ಯತೆಯನ್ನು ಸೂಕ್ಷ್ಮವಾಗಿ ಅಭ್ಯಸಿಸಿ ತೇಜಸ್ವಿಯವರು ಬರೆದ ಸ್ವಾನುಭವಗಳ ಸಂಗ್ರಹವೇ ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕತೆಗಳು ಎಂಬ ಪುಸ್ತಕ.     ಸುಶ್ಮಿತ ಮತ್ತು ಈಶಾನ್ಯೆ ಗೆ (ತೇಜಸ್ವಿಯವರ ಮಕ್ಕಳು) ಬಾಲ್ಯದ ಕೂತುಹಲಗಳು ಗರಿಗೆದರಿ...

ಐರ್ಲೆಂಡಿನ ಈ ಸಂತನ ಸ್ಮರಣೆಗೆ ನದಿ ಹಸಿರಾಗುತ್ತದೆ…..

ಕೆಲಸದ ನಿಮಿತ್ತ ಬ್ಲೂಮಿಂಗ್ಟನ್ ಗೆ ಸ್ಥಳಾಂತರವಾಗುವ ಅನಿವಾರ್ಯತೆ ಬಂದಾಗ ಈ ಹಿಮ ಪ್ರದೇಶದಲ್ಲಿ ಹೇಗಪ್ಪಾ ಕಾಲ ಕಳೆಯೋದು ಅನ್ನುವ ಚಿಂತೆ ಶುರುವಾಗಿತ್ತು. ಪ್ರತಿ ವಾರಾಂತ್ಯದಲ್ಲಿ ಸ್ನೇಹಿತರ ಮನೆಗೋ ಅಥವಾ ಇನ್ನೆಲ್ಲಿಗಾದರು ಸುತ್ತಾಡಲು ಹೋಗುವುದು ನಮಗೆ ಅಭ್ಯಾಸವಾಗಿ ಬಿಟ್ಟಿತ್ತು. ಈ ಊರಿಗೆ ಬಂದ ಮೇಲೆ ಸ್ನೇಹಿತರಿಲ್ಲ ಅನ್ನುವ ಕೊರಗು...

ಮುದ್ದುಮರಿ ಹ್ಯಾಚಿಕೊ ಕತೆ ಒಂದೆರಡು ಹನಿ ಕಣ್ಣೀರಿನೊಂದಿಗೆ…

ನಮ್ಮಲ್ಲಿ ಕೆಲವೊಂದಷ್ಟು ಆಡು ಮಾತುಗಳಿವೆ. ‘ನಾಯಿಗಿಲ್ಲದ ನಿಯತ್ತು’, ‘ನಾಯಿ ಬಾಲ ಯಾವತ್ತಿಗೂ ಡೊಂಕು’, ‘ನಾಯಿ ಮನೆ ಕಾಯಿ’ ಹೀಗೆ ಹಲವು… ನಾಯಿಯೆಂದರೆ ಕೇವಲ ಮನೆ ಕಾಯುವ ಪ್ರಾಣಿ, ಬುದ್ಧಿಯಿಲ್ಲದ, ಮೂಳೆಯನ್ನೆಸೆದರೆ ಸ್ವಾಮಿ ಭೇದ ಮರೆತು ಬಾಲ ಅಲ್ಲಾಡಿಸಿಕೊಂಡು ಹಿಂಬಾಲಿಸುವ ಪ್ರಾಣಿ ಎಂದಷ್ಟೇ ಹಲವರ ಸಿದ್ಧಾಂತ. ಅದಕ್ಕೂ ಜೀವವಿರುತ್ತದೆ,...

ರಂಗಪಂಚಮಿಗೆ ಒಂದು ರಂಗಿನ ನೆನಪು.

ನನಗೆ ರಂಗಪಂಚಮಿ ಅಂದ್ರೆ ಚೂರು ಮಮತೆ ಜಾಸ್ತಿ. ಯಾಕಂದ್ರೆ ನಾನು ಹುಟ್ಟಿದ್ದು ರಂಗಪಂಚಮಿ ದಿನ. ಈ ತಿಥಿ, ಘಳಿಗೆ, ಕಾಲ ಅಂತೆಲ್ಲ ಇರುತ್ತಲ್ಲವಾ ಆ ಲೆಕ್ಕದಲ್ಲಿ ನಾನು ಹುಟ್ಟಿದ ದಿನದ ತಿಥಿ ರಂಗಪಂಚಮಿ ಆಗಿತ್ತು. ರಂಗಪಂಚಮಿ ಬಂದ್ರೆ ನಂಗೇನೋ ಖುಷಿ, ನನ್ನ ಹುಟ್ಟಿದ ದಿನ ಹತ್ತಿರ ಆಯ್ತು...

‘ಉತ್ತರಕಾಂಡ’ – ಸೀತೆಯ ದೃಷ್ಟಿಯಲ್ಲಿ ರಾಮಾಯಣ

ನಾನು ವಾಲ್ಮೀಕಿ ರಾಮಾಯಣವನ್ನು ಪ್ರತ್ಯಕ್ಷ ಓದಿಲ್ಲ. ಚಿಕ್ಕ ವಯಸ್ಸಿನಿಂದಲೂ ಅಲ್ಲಿ ಇಲ್ಲಿ ಬರುತ್ತಿದ್ದ ರಾಮಾಯಣ, ಮಹಾಭಾರತದ ಕತೆಗಳನ್ನು ಕೇಳುತ್ತಲೇ ಈ ಎರಡು ಮಹಾ ಗ್ರಂಥಗಳ ಪರಿಚಯವಾದದ್ದು. ಎರಡರ ವಿವರವಾದ ಕತೆ ಏನೇ ಇರಲಿ, ಧರ್ಮದಿಂದ ಅಧರ್ಮವನ್ನು ಗೆದ್ದಿದ್ದು, ಕೆಟ್ಟದ್ದರ ಮೇಲೆ ಒಳ್ಳೆಯತನದ ಜಯ ಎಂಬ ಸಾರ್ವಕಾಲಿಕ ಸತ್ಯ...

ಕನ್ನಡ ಕವಿಗಳ ದೃಷ್ಟಿಯಲ್ಲಿ ‘ಪ್ರೇಮ’- ಒಂದು ಅವಲೋಕನ

ಪ್ರೇಮಿಗಳ ದಿನದ ಗದ್ದಲ ಈಗಷ್ಟೇ ಕಡಿಮೆಯಾಗಿದೆ. ಕೆಲವರಿಗೆ ಹೊಸ ಪ್ರೀತಿ ಸಿಕ್ಕ ಪುಳಕ, ಕೆಲವರಿಗೆ ‘ಪ್ರೀತಿ- ಪ್ರೇಮ’ದ ಮೇಲೆ ವೈರಾಗ್ಯ, ಹಳೆಯ ಪ್ರೀತಿಯ ನೆನಪುಗಳಲ್ಲಿ ಬೇಯುತ್ತಿರುವವರು ಕೆಲವರು, ಮೊದಲ ಬಾರಿಗೆ ಪ್ರೀತಿಯನ್ನು ಅನುಭವಿಸುತ್ತಿರುವ ಒಂದಷ್ಟು ಜನರು, ‘ಇದೆಲ್ಲ ನಮ್ಮ ಸಂಸ್ಕಾರವಲ್ಲ’ ಎಂದು ಗಲಾಟೆ ಎಬ್ಬಿಸುವವರು…. ಹೀಗೆ ಒಂದಲ್ಲ...

ನವೆಂಬರ್ ಕನ್ನಡ ಪ್ರೇಮಿಗಳೇ…. ಇದು ನಿಮಗಾಗಿ

‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು‘, ‘ಸಿರಿಗನ್ನಡಂ ಗೆಲ್ಗೆ‘, ‘ಕನ್ನಡವೇ ಸತ್ಯ ಕನ್ನಡವೇ ನಿತ್ಯ‘, ‘ನಡೆ ಕನ್ನಡ ನುಡಿ ಕನ್ನಡ‘, ‘ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ‘…. ಈ ಕೆಲವೇ ಕೆಲವು ಸಾರ್ವತ್ರಿಕ ಕನ್ನಡ ಘೋಷಣೆಗಳಿಗೆ ಸುಗ್ಗಿಯೋ ಸುಗ್ಗಿ. ಉಸಿರಾಡಲು ಸಾಧ್ಯವಿಲ್ಲದಂತೆ ಈ ಘೋಷಣೆಗಳ ಕ್ಯಾಲೆಂಡರ್...

ನಾನು ನೋಡಿದ ನ್ಯೂಯಾರ್ಕ

ನಮ್ಮ ಮದುವೆಯ ಎರಡನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮಕ್ಕೆ ನ್ಯೂಯಾರ್ಕ ಗೆ ಪ್ರಯಾಣ ಬೆಳೆಸಿದ್ದೆವು. ಮೂರು ಗಂಟೆಗಳ ಪ್ರಯಾಣದ ನಂತರ ನಮ್ಮ ವಿಮಾನದ ಕ್ಯಾಪ್ಟನ್ ‘ಇನ್ನು 30 ನಿಮಿಷಗಳಲ್ಲಿ ನ್ಯೂಯಾರ್ಕ ತಲುಪುತ್ತೇವೆ‘ ಎಂದು ಘೋಷಿಸಿದಾಗ ಎಚ್ಚೆತ್ತು ಅರೆ ನಿದ್ದೆಯಲ್ಲಿಯೆ ಅತಿ ಕೌತುಕದಿಂದ ಕೆಳಗೆ ನೋಡತೊಡಗಿದೆ. ಮಧ್ಯದಲ್ಲಿ ಆವ್ರತವಾದ ನೀರು, ಬಹುಶಃ ಹಡಸನ್ ನದಿ...

ಚಿದಂಬರ ರಹಸ್ಯ (Chidanbara rahasya)–K.P.ಪೂರ್ಣಚಂದ್ರ ತೇಜಸ್ವಿ

  ಹೊಡೆದಾಟ, ಸಾವು, ಬೆದರಿಕೆ, ಜಾತಿ ವೈಷಮ್ಯ, ಮೇಲು-ಕೀಳು, ದೆವ್ವ ಭೂತಗಳು ಹೀಗೆ ಜನಪ್ರಿಯ ಸಾಹಿತ್ಯದ ಎಲ್ಲ ಅಂಶಗಳನ್ನು ಲಘು ಸಾಹಿತ್ಯದ ಹಾಸ್ಯ ಹಾರಾಟದಂತಹ ಅಂಶಗಳನ್ನು ಯಾವ ಸಂಕೋಚವೂ ಇಲ್ಲದೆ ಸಲೀಸಾಗಿ ಮುಕ್ತವಾಗಿ ಬಳಸಿಕೊಳ್ಳುವ ತೇಜಸ್ವಿ ಅವುಗಳ ಸಕಾಲಿಕ ನಿರಾಕರಣೆಯಲ್ಲಿ ತೋರುವ ಕಲಾತ್ಮಕ ಜಾಣ್ಮೆ ಚಿದಂಬರ ರಹಸ್ಯವನ್ನು...

ಮೈ ಮನಗಳ ಸುಳಿಯಲ್ಲಿ (Mai Managala Suliyalli)- ಶಿವರಾಮ ಕಾರಂತ

  ಹೊಟ್ಟೆ ಬಟ್ಟೆಯ ಪೋಷಣೆಗಾಗಿ ದುಡಿಯುವವರು ಕೆಲವರು, ಇನ್ನು ಕೆಲವರು ಯಾರದೋ ಬಲವಂತಕ್ಕೆ ತಮಗಿಷ್ಟವಿಲ್ಲದ ವೃತ್ತಿಯನ್ನು ಮಾಡುವ ಪ್ರವೃತ್ತಿಯವರು, ಹಣಕ್ಕೆ ಮರುಳಾಗಿ ಮನಕ್ಕೆ ಬೇಲಿ ಹಾಕಿಕೊಂಡು ಕಾಯಕ ಮಾಡುವವರು ಕೆಲವರಾದರೆ ಇನ್ನು ಕೆಲವರು ತಲೆಮಾರುಗಳಿಂದ ಬಂದಂತಹ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗುವ ಗುಣದವರು, ಈ ಎಲ್ಲ ಕೆಲವರುಗಳ ಮಧ್ಯೆ...

Copy Protected by Chetan's WP-Copyprotect.