Tagged: Statue Of Liberty
ನಮ್ಮ ಮದುವೆಯ ಎರಡನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮಕ್ಕೆ ನ್ಯೂಯಾರ್ಕ ಗೆ ಪ್ರಯಾಣ ಬೆಳೆಸಿದ್ದೆವು. ಮೂರು ಗಂಟೆಗಳ ಪ್ರಯಾಣದ ನಂತರ ನಮ್ಮ ವಿಮಾನದ ಕ್ಯಾಪ್ಟನ್ ‘ಇನ್ನು 30 ನಿಮಿಷಗಳಲ್ಲಿ ನ್ಯೂಯಾರ್ಕ ತಲುಪುತ್ತೇವೆ‘ ಎಂದು ಘೋಷಿಸಿದಾಗ ಎಚ್ಚೆತ್ತು ಅರೆ ನಿದ್ದೆಯಲ್ಲಿಯೆ ಅತಿ ಕೌತುಕದಿಂದ ಕೆಳಗೆ ನೋಡತೊಡಗಿದೆ. ಮಧ್ಯದಲ್ಲಿ ಆವ್ರತವಾದ ನೀರು, ಬಹುಶಃ ಹಡಸನ್ ನದಿ...