ಕವಲು (Kavalu)– S.L.ಭೈರಪ್ಪ
ಜಯಕುಮಾರ ಒಬ್ಬ ಖ್ಯಾತ ಉದ್ದ್ಯಮಿ. ಚಿಕ್ಕದಾಗಿ ಶುರುವಾಗುವ ಉದ್ಯಮ ಇವರ ಕಾರ್ಯ ಕ್ಷಮತೆ ಮತ್ತು ಹೆಂಡತಿ ವೈಜಯಂತಿಯ ತಾಳ್ಮೆ, ಕಾರ್ಮಿಕರೊಡನೆ ಪ್ರೀತಿಯಿಂದ ವ್ಯವಹರಿಸುವ ಪರಿ, ಎಲ್ಲವನ್ನು ಸಂಭಾಳಿಸಿಕೊಂಡು ಹೋಗುವ ಜಾಣ್ಮೆಯಿಂದ ಬ್ರಹತ ಆಗಿ ಬೆಳೆಯುತ್ತದೆ. ವೈಜಯಂತಿ ಒಬ್ಬ ಸದ್ಗುಣಿ ಮಹಿಳೆ. ಶುರುವಾತಿನಲ್ಲಿ ತನ್ನ ಬಳೆಗಳನ್ನು ಅಡವಿಟ್ಟು ಗಂಡನ ಬಿಸಿನೆಸ್ ಗೆ ಸಹಾಯ ಮಾಡಿರುತ್ತಾಳೆ.
ಕೆಲಸದವರಿಗೆಲ್ಲ ಈಕೆಯನ್ನು ಕಂಡರೆ ಅಪಾರ ಗೌರವ. ಆದರೆ ಒಂದು ದಿನ ಈ ದಂಪತಿಗಳು ತಮ್ಮ ಮಗಳು ಪುಟ್ಟಕ್ಕನೊಡನೆ ಪ್ರಯಾಣಿಸುತ್ತಿದ್ದಾಗ ಕಾರು ಅಪಘಾತಕ್ಕಿಡಾಗಿ ವೈಜಯಂತಿ ಸ್ಥಳದಲ್ಲೇ ದುರ್ಮರಣ ಹೊಂದುತ್ತಾಳೆ. ಜಯಕುಮಾರ ಮತ್ತು ಪುಟ್ಟಕ್ಕ ಪಾರಾದರೂ ಪುಟ್ಟಕ್ಕಳಿಗೆ ತಲೆಗೆ ತೀವ್ರ ಪೆಟ್ಟಾಗಿ Mentally Challenged ಆಗುತ್ತಾಳೆ.
ಈ ಅಪಘಾತ ಜಯಕುಮಾರನ ಜೀವನದಲ್ಲಿ ಬಿರುಗಾಳಿಯನ್ನೇ ಎಬ್ಬಿಸುತ್ತದೆ. ಪ್ರೀತಿಯ ಮಡದಿ ಸತ್ತ ದುಖ ಒಂದೆಡೆಯಾದರೆ, ಮಗಳು ಪುಟ್ಟಕ್ಕನ ಊನ ಇನ್ನೊಂದೆಡೆ. ಎಲ್ಲವನ್ನು ಸರಿಯಾಗಿ ನಿಭಾಯಿಸುತ್ತಿದ್ದ ಮಡದಿ ಸತ್ತಾಗ ಜಯಕುಮಾರಗೆ ದಿಕ್ಕೇ ತೋಚುವುದಿಲ್ಲ. ಅವನ ತಾಯಿ ಇನ್ನೊಂದು ಮದುವೆ ಮಾಡಿಕೊಳ್ಳಲು ಸೂಚಿಸಿದರು ಅವನು ಸುತರಾಂ ಒಪ್ಪುವುದಿಲ್ಲ. ಇವರ ಆಫೀಸ್ನಲ್ಲಿ ಕೆಲಸ ಮಾಡುತ್ತಿರುವ ಮಂಗಳ ಎಂಬಾಕೆಯತ್ತ ದೈಹಿಕವಾಗಿ ಆಕರ್ಷಣೆಗೊಳಗಾಗುತ್ತಾನೆ. ಮಂಗಳ ಕೂಡ ಇವನ ಮನಸನ್ನರಿತು, ತನ್ನ ಲಾಭಗಳನ್ನೆಲ್ಲ ಲೆಕ್ಕ ಹಾಕಿ ಇವನಿಗೆ ಮುನ್ಸೂಚನೆ ಕೊಡುತ್ತಾಳೆ. ಬರಿ ದೈಹಿಕ ಸಂಬಧವನ್ನಷ್ಟೇ ಬಯಸಿದ ಜಯಕುಮಾರಗೆ ಮಂಗಳಾಳ ಜಾಲದ ಅರಿವಾಗುವುದಿಲ್ಲ. ಯಾವಾಗ ಮಂಗಳ ತಾನು ಗರ್ಭವತಿ, ತನ್ನನ್ನು ಮದುವೆ ಆಗದೆ ಹೋದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕುತ್ತಾಳೋ ಆಗ ಜಯಕುಮಾರ ಚಿಂತೆಗೀಡಾಗುತ್ತಾನೆ. ಪ್ರತಿಷ್ಠೆಗೆ ಸೋತು ಅವಳನ್ನು ಮದುವೆ ಆಗುತ್ತಾನೆ. ಇಲ್ಲಿಂದ ಶುರುವಾಗುತ್ತದೆ ಜಯಕುಮಾರನ ಕಷ್ಟಗಳ ಸರಮಾಲೆ. ಕೇವಲ ಅವನ ಆಸ್ತಿ, ಅಂತಸ್ತನ್ನು ನೋಡಿ ಅವನನ್ನು ಮದುವೆಯಾದ ಮಂಗಳ ಅವನಿಗೆ ನುಂಗಲಾರದ ಬಿಸಿ ತುತ್ತಾಗಿ ಕಾಡುತ್ತಾಳೆ. ಮದುವೆಗೂ ಮುಂಚೆ ಇದ್ದ ಲೈಂಗಿಕ ಆಸಕ್ತಿ ಮದುವೆಯಾದ ಮೇಲೆ ಇರುವುದಿಲ್ಲ. ಮಂಗಳ ಅವನನ್ನು ಹತ್ತಿರವೇ ಸೇರಿಸುವುದಿಲ್ಲ. ಪುಟ್ಟಕ್ಕಳನ್ನಂತು ಕಣ್ಣೆತ್ತಿಯೂ ನೋಡುವುದಿಲ್ಲ. ಜಯಕುಮಾರ ತನ್ನ ಮಗಳಿಗೆ ತಿನ್ನಿಸುತ್ತಿದ್ದರೆ ‘ನಿನ್ನ ೧೪ ವರ್ಷದ ಮಗಳ ಮೇಲೆ ನಿನಗೆ ಲೈಂಗಿಕ ಭಾವನೆ’ ಎಂದು ಕೆಟ್ಟ ಮಾತನ್ನಾಡುತ್ತಾಳೆ. ಸಾಧ್ವಿ ಪತ್ನಿಯ ಜೊತೆ ಬಾಳ್ವೆ ಮಾಡಿದ ಜಯಕುಮಾರಗೆ ಮಂಗಳಳ ಮೇಲೆ ಅಸಹ್ಯ ಮೂಡುತ್ತದೆ. ಇತ್ತ ಎಗಲಾರದೆ ಅತ್ತ ಬಿಡಲಾರದೆ ದಿನವು ಕಣ್ಣಿರಿಡುತ್ತಾನೆ.
ಮಂಗಳಳ ಈ ವರ್ತನೆಗೆ ಬೇರೆಯೇ ಕಾರಣವಿರುತ್ತದೆ. ಅವಳೊಬ್ಬಳು ಸ್ತ್ರೀವಾದಿ, ತನ್ನ ಇಡಿ ಜೀವನವೆಲ್ಲ ಪುರುಷ ಸಮಾಜವನ್ನು ದ್ವೇಷಿಸುತ್ತ ಬಂದವಳು. ಅವಳ ಕಾಲೇಜ್ ನಲ್ಲಿ ಇಳಾ ಎಂಬ ಲೆಕ್ಚರರ್ ಇವಳ ಮೇಲೆ ತುಂಬಾ ಪ್ರಭಾವನ್ನುಂಟು ಮಾಡಿರುತ್ತಾರೆ. ಆಕೆ ಕೂಡ ಸ್ತ್ರೀವಾದಿಯೇ. ಇಳಾ Englandನಲ್ಲಿ ಓದಿ ಅಲ್ಲಿನ ಲೈಂಗಿಕ ಅಭಿಪ್ರಾಯಗಳನ್ನು ಮುಕ್ತವಾಗಿ ಪ್ರಶಂಸಿಸಿ ತನ್ನ ವಿದ್ಯಾರ್ಥಿಗಳಿಗೆ ಅದೇ ತರಹ ಬಾಳಿದರೆ ತಪ್ಪಿಲ್ಲ ಎಂದು ಪಾಠ ಮಾಡುತ್ತಾಳೆ. ಮಂಗಳಾಗೆ ಇಳನಿಂದ ಪ್ರಭಾವಿತಗೊಳ್ಳಲು ಹೆಚ್ಚು ಸಮಯವೇನು ಬೇಕಾಗಿರಲಿಲ್ಲ. ಸ್ತ್ರೀ ಮತ್ತು ಪುರುಷ ಸಮಾನವಾದಿಗಳು, ಇಬ್ಬರಿಗೂ ಲೈಂಗಿಕವಾಗಿ ಮಾತನಾಡಲು ಸ್ವಾತಂತ್ರವಿದೆ. ಹೆಣ್ಣು ತನಗಿಚ್ಚೆ ಬಂದಾಗ ಲೈಂಗಿಕ ಸುಖ ಹೊಂದಬಹುದು ಎಂದೆಲ್ಲ ಭೋದಿಸುತ್ತಾಳೆ ಇಳಾ. ಇದನ್ನು ಕೇಳಿದ ಮಂಗಳ ತಾನು ಕೂಡ ಸ್ತ್ರೀವಾದಿ ಆಗುವ ಕನಸು ಕಾಣತೊಡಗುತ್ತಾಳೆ. ಪ್ರಭಾಕರ ಎಂಬಾತನನ್ನು ಮಂಗಳ ಪ್ರೀತಿಸುತ್ತಿದ್ದು ಇವರಿಬ್ಬರು ಇಡಿ ಕಾಲೇಜ್ ಗೆ ಗೊತ್ತಿರುವ ಪ್ರೇಮ ಪಕ್ಷಿಗಳು. ಇಳಾ ಭೋದನೆಯ ಪರಿಣಾಮ ಇವರಿಬ್ಬರ ನಡುವೆ ದೈಹಿಕ ಸಂಪರ್ಕವಾಗಿ ಮಂಗಳ ಹಾದಿ ತಪ್ಪುತ್ತಾಳೆ. ಮಂಗಳಳ ಹೊಟ್ಟೆಯಲ್ಲಿ ಮಗು ಬೆಳೆಯುತ್ತಿದೆ ಎಂದು ಅರಿವಾದಾಗ ಪ್ರಭಾಕರ abortion ಮಾಡಿಕೊಳ್ಳಲು ಹೇಳಿ ದೂರ ಸರಿಯುತ್ತಾನೆ. ಇಳಾ ಕೂಡ ಮಂಗಳ ಮಾಡಿದ್ದರಲ್ಲಿ ಏನು ತಪ್ಪಿಲ್ಲವೆಂದು, ಅವಳು abortion ಮಾಡಿಕೊಂಡರೆ ಯಾವ ಪಾಪವು ಬರುವುದಿಲ್ಲ ಎಂದು ಹೇಳಿ ಮಂಗಳಳ ಮನಸನ್ನು ಇನ್ನು ಕಲ್ಮಶಗೊಳಿಸುತ್ತಾಳೆ. ಇದರಿಂದ ಮಂಗಳಾಳಿಗೆ ಪುರುಷರ ಮೇಲಿನ ದ್ವೇಷ ಇನ್ನು ದ್ವಿಗುಣವಾಗುತ್ತದೆ. ಆದರೆ ಇದಕ್ಕೆಲ್ಲ ಬಲಿಯಾದವನು ಮಾತ್ರ ಜಯಕುಮಾರ!!
ಕಥೆಯಲ್ಲಿ ಇಳಾಳ ಸಂಸಾರದ ಚಿತ್ರಣವಿದೆ. ಪ್ರಖ್ಯಾತ ವಿನಯ ಚಂದ್ರನನ್ನು ಮದುವೆಯಾದ ಇಳಾ ಆತನ ಮೇಲೆ ತನ್ನ ಧೋರಣೆಗಳನ್ನು ಹಾಕಿ ಅವನು ತನ್ನಂತೆಯೇ ನಡೆಯಬೇಕೆಂದು ಹವಣಿಸುತ್ತಿರುತ್ತಾಳೆ . ಆದರೆ ಇದಕ್ಕೆ ಸೊಪ್ಪು ಹಾಕದ ವಿನಯ ಚಂದ್ರ ಇವಳ ಕಾಟದಿಂದ ತಪ್ಪಿಸಿಕೊಳ್ಳಲು ದೆಹಲಿಗೆ ವರ್ಗ ಮಾಡಿಸಿಕೊಳ್ಳುತ್ತಾನೆ. ಇಳಾಗೆ ಅಹಂಕಾರ ಅಡ್ಡ ಬಂದು ಆತನ ಜೊತೆ ಹೋಗದೆ ತನ್ನ ಮಗಳೊಂದಿಗೆ ಬೇರೆ ಆಗುತ್ತಾಳೆ. ಆತನೇ ತನ್ನ ಕೆಲಸವನ್ನು ಬಿಟ್ಟು ತನ್ನೊಂದಿಗೆ ಬದುಕಲಿ ಎಂಬ ಧೋರಣೆ ಅವಳದು. ಗಂಡನಿಂದ ಬೇರೆಯಾದ ನಂತರ ಇಳಾ ಸ್ವಚ್ಚಂದ್ದ ಹಾರಾಡುವ ಪಕ್ಷಿಯಾಗುತ್ತಾಳೆ. ಒಂದು ದಿನ ಮಂತ್ರಿಯೊಡನೆ ತನ್ನ ತಾಯಿಯನ್ನು ನೋಡಿದ ಮಗಳಿಗೆ ಆಘಾತವಾಗುತ್ತದೆ. ಅಲ್ಲದೆ ಇಳಾ ‘ನೀನು ವಯಸಿಗೆ ಬಂದಿದ್ದಿಯ, ಯಾರಾದರು boyfriend ಹುಡುಕಿಕೊ ‘ ಎಂದು ಹೇಳಿದಾಗ ತತ್ತರಿಸಿ ಮನೆ ಬಿಟ್ಟು ತಂದೆ ವಿನಯ ಚಂದ್ರನಿಗೆ ಎಲ್ಲವನ್ನು ವಿವರಿಸಿ hostel ಸೇರುತ್ತಾಳೆ.
ಇತ್ತ ಜಯಕುಮರನೊಂದಿಗೆ ಒಲ್ಲದ ಜೀವನ ನಡೆಸುತ್ತಿದ್ದ ಮಂಗಳಾಳಿಗೆ ಒಂದು ದಿನ ಅನೀರಿಕ್ಷಿತವಾಗಿ ಪ್ರಭಾಕರ ಸಿಗುತ್ತಾನೆ. ಹಳೆ ಆಕರ್ಷಣೆ ಮತ್ತೆ ಚಿಗುರೊಡೆಯುತ್ತದೆ. ಇಬ್ಬರು ಮತ್ತೆ ಸೇರುತ್ತಾರೆ. ಇವಳ ಬುದ್ದಿ ಅರಿತ ಪ್ರಭಾಕರ ತಾನು ಮದುವೆಯಾದವನೆಂದು , ತಾನು ಹೆಂಡತಿಯನ್ನು ಬಿಟ್ಟು ಬದುಕಲಾರನೆಂದು , ಇದೇನಿದ್ದರೂ ಕೇವಲ ದೈಹಿಕ ಸಂಭಂದ ಮಾತ್ರ ಎಂದು ಎಚ್ಚರಿಸುತ್ತಾನೆ. ಮಂಗಳ ಮತ್ತೆ ದಾರಿ ತಪ್ಪುತ್ತಾಳೆ.
ಜಯಕುಮಾರನ ಆಸ್ತಿಯನ್ನೆಲ್ಲ ದೋಚಿ ಆತ ಜೈಲಿಗೆ ಹೋಗುವಂತೆ ಮಾಡುತ್ತಾಳೆ ಮಂಗಳ. ಆದರೆ ಹೇಗೋ ಆತ ಹೊರ ಬಂದು ಹೊಸ ಜೀವನವನ್ನು ಶುರು ಮಾಡುತ್ತಾನೆ.
ಮಂಗಳ, ಇಳಾ ಇವರ ಪರಿಸ್ತಿತಿ ಏನಾಗುತ್ತೆಂದು ಅರಿಯಲು ಕಾದಂಬರಿ ಓದಿ 🙂
ಇಂತಹ ಕಾದಂಬರಿ ಬರೆಯಲು ತುಂಬಾ ಧೈರ್ಯ ಬೇಕು. ಅವತ್ತಿನ ಸಮಾಜದ ಸ್ತಿತಿ ಗತಿಯನ್ನು ವಿವರವಾಗಿ ಅಭ್ಯಸಿಸಿ ಈ ಕಾದಂಬರಿ ಕಥೆ ಹೆಣೆದಿದ್ದಾರೆ. ಕಾದಂಬರಿ ಉದ್ದಕ್ಕೂ ಮಂಗಳ ಇಳಾರಂತಹ ಪಾತ್ರಗಳಿರುವುದರಿಂದ ಮೇಲ್ನೋಟಕ್ಕೆ ಇದು ಸ್ತ್ರೀ ವಿರೋಧಿ ಎಂದೆನಿಸಬಹುದು. ಆದರೆ ವೈಜಯಂತಿಯಂತಹ, ಜಯಕುಮಾರನ ತಾಯಿಯಂತಹ ಒಳ್ಳೆಯ ಸ್ತ್ರೀ ಪಾತ್ರಗಳು ಕೂಡ ಇವೆ. ಜಯಕುಮಾರ ಒಬ್ಬ ಅಂಜುಬುರುಕ. ಸದಾ ಸಮಾಜಕ್ಕೆ ಹೆದರಿ ಮಂಗಳಾಳನ್ನು ಸಹಿಸಿಕೊಂಡು ಕೊನೆಗೆ ಬೀದಿ ಪಾಲಾಗುತ್ತಾನೆ. ವಿನಯ ಚಂದ್ರನಂತೆ ಬೆಂಕಿಯಿಂದ ದೂರವಿರುವ ಬುದ್ದಿ ಇರಬೇಕು. ಹಾಗೆ ಪ್ರಭಾಕರ ಮಂಗಳಾಳ ಜೊತೆ ಪ್ರೀತಿ ಪ್ರೇಮದ ನಾಟಕವಾಡಿ ತನಗೆ ಬೇಕಾದ್ದನ್ನು ದಕ್ಕಿಸಿಕೊಂಡು ಕೊನೆಗೆ ತನ್ನ ಹೆಂಡತಿ, ಸಂಸಾರ ಎಂದು ಹಾದಿ ಹಿಡಿಯುತ್ತಾನೆ.
ಅನೇಕರಿಗೆ ಈ ಕಾದಂಬರಿಯಲ್ಲಿ ಬರುವ ವಿಷಯಗಳ ಬಗ್ಗೆ ಮತ್ತು ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಬರೆದಿರುವ ಪರಿ ಇಷ್ಟವಾಗುವುದಿಲ್ಲ ಆದರೆ ಎಷ್ಟೋ ಜನರ ಬಾಳಿನಲ್ಲಿ ಈ ತರಹ ನಡೆದದ್ದಿದೆ.
ಈ ಕಥೆ ಓದಿ ಪೂರ್ತಿ ಕಾದಂಬರಿ ಓದಬೇಕೆನಿಸಿದರೆ ನಾ ಬರೆದದ್ದಕ್ಕೂ ಸಾರ್ಥಕ 🙂
*****************************************************************
Kavalu means ‘Cross Roads’ Or ‘Branch’. Story revolves around Jayakumar, Mangala, Ila, Prabhakar.
Jayakamar is the famous industrialist who worked hard with determination to build big Industry. His wife also helps him in achieving this. Vaijayanti is brilliant lady who can manage whole industry patiently, smartly. She was loved by all the co-workers. But one day she will die in car accident leaving her husband and kid Puttakka. Puttakka becomes mentally challenged due to severe head injury.
This affects Jayakumar and he will not able to maintain the business without his wife. One day he sees Mangala who is personal secretary of him and attracts towards her physically. Vaijayanti only appointed Mangala as secretary by seeing her difficulties in life. Initially Jayakumar thinks it is only sex but later Mangala blackmails him saying she is pregnant. Jayakumar who is scared of society and reputation marries Mangala and thus creates way to his problems. After marriage Mangala never shows interest in him and never cares for Puttakka. One day when Jayakumar is helping his poor daughter, Mangala says he has sexual interest in his 14 years daughter. This shows the low mentality of Mangala.
There is past story for Mangala. She is feminist inspired by her feminist lecturer Ila during her college days. Ila who returned from England ask her female students to participate in one of the forums where they discussed about having sex before marriage. She insisted that, sexual desires are equal for both men and women, and one shouldn’t have a fear or something to talk openly about this. All these speeches inspires Mangala and she dreams about becoming feminist in future.
Prabhakar was also student of Ila and lover of Mangala. Being inspired by Ila’s lecturer they both will have sex before marriage and Mangala becomes pregnant. After Knowing this Prabhakar suggests Mangala to get abort and leaves her. Ila also suggests Mangala the same and she encourages Mangala that there is nothing wrong in this, women can have sex whenever she desires. Mangala start heating males more and more!
Story continues with Ila’s life. Ila is married to famous professor Vinaya Chandra but tries to restrict him with her feminist thoughts. Vinay Chandra takes transfer to Delhi and ask Ila & her daughter to move along with him. Egoist Ila refuses and stays with her daughter. Time Passes, one day Ila’s daughter will be shocked to see her mother along with Minister. When she ask her mother about it, she advise her also to find boyfriend because she is 18. Having understood everything, Sujaya decides to move out from her Mother’s house and calls her dad and explains everything and she moves into a Hostel.
As story continues, Mangala meets Prabhakar in one of the Feminist meetings. She always had been attracted towards him and again shows interest. Smart Prabhakar uses this opportunity and start having sex with Mangala. He even comes to Jayakumar house when there was none at the house. When Mangala forces him to marry her, he says that he is already married and cannot leave his wife.
Mangala snatches everything from Jayakumar and complains domestic violence against him. Jayakumar goes to Jail but learns big lesson in his life. Once after coming from jail he starts new life.
Mangala & Ila will end up their life badly.
Both the stories in this book are quite disturbing and reader will feel disgusted. But if you understand the concept then you will come to know why Bhairappa has chosen such dangerous story. It looks against females by looking at characters Ila, Mangala but he tried to show case the real facts which were happening during 2010. Reader can compare between Jayakumara and Vinaya Chandra. In Jayakumar case, Mangala dominated him but Vinay Chandra dominated over Ila and choose his life to stay away. Also there are people like Prabhakara who are opportunist.
Quite good novel to read!