ಚದುರಂಗದ ಮನೆ(Chadurangada Mane)– ತ.ರಾ.ಸು
‘ಕಾದಂಬರಿಕಾರರಲ್ಲಿ ಬೇಕಾಗಿರುವುದು ಪ್ರಾಮಾಣಿಕತೆ. ಕೇವಲ ಮಾರಾಟದ ಸರಕಿನಂತೆ ಕಾದಂಬರಿ ಬರೆದರೆ ಅದು ವಾಚಕರಿಗೆ ಮಾಡುವ ವಂಚನೆ. ಕೇವಲ ಮನೋರಂಜನೆಯ ದೃಷ್ಟಿಯಿಂದ ಕಾದಂಬರಿ ಏಕೆ ಬರೆಯಬಾರದು’ ಇವು ಗೋಪಾಲಕೃಷ್ಣ ಅಡಿಗರು ತ.ರಾ.ಸು ಅವರಿಗೆ ಹೇಳುವ ಮಾತುಗಳು.
ಕೇವಲ ಮನೋರಂಜನೆಯ ದೃಷ್ಟಿಯಿಂದ ಕಾದಂಬರಿ ಏಕೆ ಬರೆಯಬಾರದು ಎಂಬ ಅವರ ಮಾತನ್ನು ಗಂಭೀರವಾಗಿ ಪರಿಗಣಿಸಿ ತ.ರಾ.ಸು ಅವರು ಈ ಕಾದಂಬರಿ ಬರೆದಿದ್ದಾರೆ.
ಸುಮಾರು ಆರು ಸಾವಿರ ಜನ ಸಂಖ್ಯೆಯ ಹಳ್ಳಿಗೆ ಹಳ್ಳಿಯೂ ಅಲ್ಲ ಪಟ್ಟಣಕ್ಕೆ ಪಟ್ಟಣವು ಅಲ್ಲ ಎನ್ನುವಂಥ ಇಬ್ಬಂದಿ ಊರು ನಾಗರವಳ್ಳಿ. ‘ನಾಗರ ಹೊಳೆ’ ಎಂಬ ನದಿಯ ದಂಡೆಯ ಮೇಲಿನ ಈ ಊರು ಒಂದು ಕಾಲಕ್ಕೆ ನೂರಾರು ಜನ ವಿದ್ಯಾರ್ಥಿಗಳಿಗೆ ಆವಾಸ ಸ್ತಾನವಾಗಿ ಅಗ್ರಹಾರ ಎಂಬ ಹೆಸರನ್ನು ಪಡೆದುಕೊಂಡಿತ್ತು. ಆದರೆ ನಾಗರವಳ್ಳಿ ಇಂದಿಗೂ ವಿಖ್ಯಾತವಾಗಿ ಉಳಿದಿರುವುದು ‘ಚದುರಂಗದ ಮನೆ’ಯಿಂದಾಗಿ.
ಶಂಕರ ನಾರಾಯಣಸ್ವಾಮಿ ದೇವಾಲಯದ ಸುತ್ತಮುತ್ತಲಿನ ಬ್ರಾಹ್ಮಣರ ಮನೆಗಳ ಮದ್ಯೆ ಎದ್ದು ಕಾಣುತ್ತದೆ ಈ ಮನೆ. ಈ ಮನೆಗೆ ಚದುರಂಗದ ಮನೆ ಎಂಬ ಅನ್ವರ್ಥ ನಾಮ ಬಂದಿದ್ದು ಸ್ವಾರಸ್ಯಕರ. ಈ ಮನೆ, ಈ ಇತಿಹಾಸದ ಮೂಲ ಪುರುಷ ಮಾಧವರಾಯ.
ಪೂನಾದ ಕಡೆಯ ದೇಶಸ್ತ ಬ್ರಾಹ್ಮಣನಾದ ಇತ ನಾಗರವಳ್ಳಿಯ ನಿವಾಸಿಯೇನಲ್ಲ. ಟಿಪ್ಪು ಸುಲ್ತಾನನ ಕಾಲದಲ್ಲಿ ಪರಶುರಾಮ ಭಾವುನ ಸೇನೆಯಲ್ಲಿ ಮಾಧವರಾಯನಿರುತ್ತಾನೆ. ಒಂದು ದಿನ ಈ ಪರಶುರಾಮ ಭಾವುನ ಸೇನೆ ಶೃಂಗೇರಿ ಅಮ್ಮನ ದೇವಸ್ತಾನ ಲೂಟಿ ಮಾಡಿ ದೇವಿ ಮೇಲಿನ ಎಲ್ಲ ಒಡವೆಗಳೊಂದಿಗೆ ಪರಾರಿಯಾಗುತ್ತಾರೆ. ಈ ಲೂಟಿಯಲ್ಲಿ ಮಾಧವರಾಯ ಕೂಡ ಪಾಲುದಾರ. ಆ ಒಡವೆಗಳನ್ನು ನೋಡಿ ಮಾಧವರಾಯನ ಆಸೆ ಹೆಚ್ಚಾಗಿ ಅವುಗಳನ್ನು ದೋಚಿಕೊಂಡು ರಾತ್ರೋ ರಾತ್ರಿ ಪರಶುರಾಮ ಭಾವೊನನ್ನು ಬಿಟ್ಟು ಓಡಿ ಹೋಗುತ್ತಾನೆ. ಅವರ ಸೇನೆಗೆ ತಿಳಿಯದಂತೆ ದೂರದ ಊರು ನಾಗರವಳ್ಳಿಗೆ ಬಂದು ನೆಲೆಸುತ್ತಾನೆ. ದೋಚಿದ್ದ ಒಡವೆಗಳನ್ನು ಕರಗಿಸಿ ಬೇರೆ ಒಡವೆ ಮಾಡಿಸಿ ಇಟ್ಟುಕೊಳ್ಳುತ್ತಾನೆ ಕೆಲವೊಂದನ್ನು ಬಿಟ್ಟು. ಹೀಗೆ ಹಣದಿಂದ ಸುತ್ತ ಮುತ್ತಲೆಲ್ಲ ಹೆಸರುವಾಸಿಯಾಗಿ ಬರು ಬರುತ್ತ ಊರಿನ ಪ್ರಮುಖರಲ್ಲೊಬ್ಬನಾಗುತ್ತಾನೆ.
ಸುಮಾರು ನಲವತ್ತು ನಲವತ್ತೈದು ವರ್ಷ ವಯಸಾದ್ದರಿಂದ ಊರ ಜನರ ಮಾತಿಗೆ ಬೆಲೆ ಕೊಟ್ಟು ವಿಧವೆಯೊಬ್ಬಳ ಮಗಳಿಗೆ ಬಾಳು ಕೊಡುತ್ತಾನೆ. ಶಂಕರಮ್ಮ ತನ್ನ ಜಾಣ್ಮೆ, ತಾಳ್ಮೆ, ಜನರೊಡನೆ ವ್ಯವಹರಿಸುವ ರೀತಿಯಿಂದ ಮಾಧವರಾಯನ ಮನೆ ಮನಗಳನ್ನು ತುಂಬುತ್ತಾಳೆ. ಜೀವಮಾನಕ್ಕಾಗುವಷ್ಟು ದುಡ್ಡು ಇರುವುದರಿಂದ ಮಾಧವರಾಯನಿಗೆ ಚದುರಂಗದ ಅತಿ ಗೀಳು. ಮೂರು ಹೊತ್ತು ಮನೆಯಲ್ಲಿ ಜನರನ್ನು ಸೇರಿಸಿಕೊಂಡು ಆಟ ಆಡುತ್ತಿರುತ್ತಾನೆ. ಬಂದ ಜನಗಳಿಗೆಲ್ಲ ಇವನ ಮನೆಯಲ್ಲೇ ಊಟ ತಿಂಡಿಯ ವ್ಯವಸ್ತೆ.
ನಾಗರವಳ್ಳಿಗೆ ಸುಮಾರು 65-70 ಮೈಲಿಗಳ ದೂರದಲ್ಲಿ ಅಮರಾಪುರ ಎಂಬ ಊರಿನಲ್ಲಿ ಚಂದ್ರಯ್ಯ ಎಂಬ ಅತ್ತ್ಯಂತ ಹೆಸರುವಾಸಿಯಾದ ಚದುರಂಗದ ಆಟಗಾರನಿದ್ದ್ದ. ಮಾಧವರಾಯನ ಬಗ್ಗೆ ಕೇಳಿ ಆತನೊಡನೆ ಆಡಬೇಕೆಂದು ಚಂದ್ರಯ್ಯ ತನ್ನುರಿನಿಂದ ನಾಗರವಳ್ಳಿವರೆಗೂ ಬಂದು ತನ್ನ ಜಾಣ್ಮೆ ಪ್ರದರ್ಶಿಸುತ್ತಾನೆ ಚದುರಂಗದ ಆಟದಲ್ಲಿ. ಕೇವಲ ಆಡುವುದಲ್ಲದೆ ಚೆನ್ನಾಗಿ ಆಡುವವರಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದ ಮಾಧವರಾಯ ಚಂದ್ರಯ್ಯನ ಆಟದ ವೈಖರಿಗೆ ಮನಸೋತು ಆತನಿಗೆ ಕೈ ತುಂಬಾ ವರಹಗಳನ್ನು ಕೊಟ್ಟು ಆತನಿಗೆನೆ ಆಸೆಗಳಿದ್ದರು ತಾನು ಪೂರೈಸುವುದಾಗಿ ಭರವಸೆ ನೀಡುತ್ತಾನೆ. ಇಬ್ಬರು ಅಚ್ಚು ಮೆಚ್ಚಿನವರಾಗಿ ಆಪ್ತ ಮಿತ್ರರಾಗುತ್ತಾರೆ.
ಚಂದ್ರಯ್ಯನಿಗೊಂದು ಆಸೆ ಇರುತ್ತದೆ. ಶ್ರೀರಂಗಪಟ್ಟಣದಲ್ಲಿ ‘ಚದುರಂಗ ಕೇಸರಿ’ ಎಂಬ ಬಿರುದು ಹೊಂದಿದ ಶಾಮಯ್ಯ ಅಯ್ಯಂಗಾರರ ಜೊತೆ ಒಂದು ಆಟ ಆಡಬೇಕೆಂದು. ಆದರೆ 95 ವರ್ಷ ವಯಸಿನ ಶಾಮಯ್ಯ ಅಯ್ಯಂಗರ್ರರು ತಮ್ಮ ಜೀವಮಾನದ ಕೊನೆಯ ಆಟವನ್ನು ಆಡಿದರೆ ರಾಜ ಅಕ್ಬರನ ಶೈಲಿಯಲ್ಲಿ ಆಡಬೇಕೆಂದು ಬಯಸುತ್ತಿರುತ್ತಾರೆ.
ರಾಜ ಅಕ್ಬರ ದೊಡ್ಡ ಚದುರಂಗದ ಮನೆ ಮಾಡಿಸಿ ಅದರಲ್ಲಿ ಸುಂದರ ಹುಡುಗಿಯರನ್ನು ಚದುರಂಗದ ಕಾಳುಗಳಂತೆ ನಡೆಸಿ ಆಡಿರುತ್ತಾನೆ. ಶಾಮಯ್ಯ ಅಯ್ಯಂಗರ್ರಿಗು ಅದೇ ತರಹ ಆಡಬೇಕೆಂದು ಬಯಕೆ. ಮಾಧವರಾಯ ಇದಕ್ಕೆ ಒಪ್ಪಿ ಎಲ್ಲ ಖರ್ಚನ್ನು ತಾನು ಭರಿಸಿ ಚಂದ್ರಯ್ಯನ ಆಸೆಗೆ ಬೆನ್ನೆಲುಬಾಗುತ್ತಾನೆ. ಶಾಮಯ್ಯ ಅಯ್ಯಂಗರ್ರಿಗೆ ಪರಿಚಯವಿದ್ದ ವೇಶ್ಯೆ ನಾಗರತ್ನ ಎಂಬಾಕೆಯತ್ತ ಹೋಗಿ 32 ಜನ ಸುಂದರ ಹುಡುಗಿಯರು ಬೇಕೆಂದು ಕೇಳುತ್ತಾರೆ 4 ದಿನದ ಮಟ್ಟಿಗೆ. ಇದಕ್ಕಾಗಿ ಮಾಧವರಾಯ ತಾನು ದೋಚಿದ್ದ ದೇವಿಯ ಆಭರಣಗಳನ್ನು ಮಾರುವ ಪರಿಸ್ತಿತಿ ಬರುತ್ತದೆ. ಆದರೆ ಅವಗಳನ್ನು ತಾನು ಮಾರದೆ ನಾಗರತ್ನಳಿಗೆ ಕೊಟ್ಟು ಅವಳ ಮೂಲಕ ಮಾರಿಸುತ್ತಾರೆ. ಆದರೆ ನಾಗರತ್ನ ಎಲ್ಲವನ್ನು ಮಾರದೆ ಜಗಮಗ ಹೊಳೆಯುವ ಮೂಗುತಿಯನ್ನು ತನ್ನ ಬಳಿಯೇ ಇಟ್ಟುಕೊಳ್ಳುತ್ತಾಳೆ . ಇದು ಮಾಧವರಾಯನಿಗೆ ಗೊತ್ತಿರುವುದಿಲ್ಲ.
ರಾಜ,ಮಂತ್ರಿ, ಕುದುರೆಯಂತೆ ವಸ್ತ್ರ ತೊಟ್ಟು ಅಲಂಕಾರ ಮಾಡಿಕೊಂಡ ಹುಡುಗಿಯರು ಸಿದ್ದರಾಗಿ ಹಿಂದೆಂದು ಕಂಡರಿಯದಂತಹ ಚದುರಂಗದ ಆಟ ನಡೆಯುತ್ತದೆ ಚಂದ್ರಯ್ಯ ಮತ್ತು ಶಾಮಯ್ಯ ಅಯ್ಯಂಗಾರರ ನಡುವೆ. ಚಂದ್ರಯ್ಯ ಸೋತರೂ ಮಾಧವರಾಯನ ಹೆಸರು ಸುತ್ತ ಮುತ್ತಲೂ ಇನ್ನು ಪ್ರಸಿದ್ದಿಯಾಗುತ್ತದೆ. ನಾಗರತ್ನ ತನ್ನ ಮಗಳು ನೀಲಳನ್ನು ಮಾಧವರಾಯನೊಂದಿಗೆ ಗೆಜ್ಜೆ ಪೂಜೆ ಮಾಡಿಸುವ ತವಕದಲ್ಲಿರುತ್ತಾಳೆ. ಆದರೆ ಗೆಜ್ಜೆ ಪೂಜೆ ಆಗುವವರೆಗೂ ಕಾಯದ ಮಾಧವರಾಯ ನೀಲಳನ್ನು ತನ್ನವಳನ್ನಾಗಿ ಮಾಡಿಕೊಂಡು ಅವಳನ್ನು ಬಿಟ್ಟು ಇರದಂತಾಗುತ್ತಾನೆ. ಶಾಮಯ್ಯ ಅಯ್ಯಂಗರ್ರಿಗೆ ನೀಲ ಮತ್ತು ಮಾಧವರಾಯ ಜೊತೆಯಲ್ಲಿರುವುದು ಇಷ್ಟವಿಲ್ಲದಿದುರಿಂದ ನಾಗರತ್ನ ಅವರಿಬ್ಬರನ್ನು ದೂರದ ತನ್ನ ತಂಗಿಯ ಮನೆಗೆ ಕಳುಹಿಸಿ ಕೊಡುತ್ತಾಳೆ.
ಅಲ್ಲಿ ನೀಲ ತನ್ನ ಹತ್ತಿರವಿದ್ದ ಮೂಗುತಿಯನ್ನು ಹೆಮ್ಮೆಯಿಂದ ತನ್ನ ಚಿಕ್ಕಮ್ಮನಿಗೆ ತೋರಿಸುವಾಗ ಆಕೆಗೆ ಸಂಶಯ ಬರುತ್ತದೆ. ಪರೀಕ್ಷಿಸಿದಾಗ ದೇವಿಯ ಫೋಟೋನಲ್ಲಿದ್ದ ಮೂಗುತಿಯೇ ಈ ಮೂಗುತಿ ಎಂದು ಗೊತ್ತಾಗುತ್ತದೆ.
ಕಥೆ ಮುಂದೇನಾಗುತ್ತದೆ??? ಕಾದಂಬರಿ ಓದಿ 🙂
ನಿಮ್ಮ ಬರವಣಿಗೆ ಶೈಲಿ ತುಂಬ ಚೆನ್ನಾಗಿದೆ. ಓದಓದುತ್ತಾ ಕುತೂಹಲ ಹೆಚ್ಚಾಗುತಿತ್ತು. ಹೀಗೆ ಸಾಗಲಿ ನಿಮ್ಮ ಬರವಣಿಗೆ, ನಿಲ್ಲಿಸದಿರಿ.
Which software/app do u use to type in kannada?
Thank you so much 🙂 For mobile I use ‘Just Kannada’ app and for blog I use ‘Kannada Changati’ (English to Kannada conversion)
ತುಂಬಾ ಹಿಂದೆ ಓದಿದ್ದೆ.. ಮತ್ತೊಮ್ಮೆ ನೆನಪಿಸಿತು ನಿಮ್ಮ ಬರಹ. ತರಾಸು ಕಥೆಗಳೆಲ್ಲ ಹಾಗೆ – ಯಾವುದೂ ಓದುಗರಿಗೆ ಮೋಸ ಮಾಡುವುದಿಲ್ಲ. ?
ಹೌದು.. ನನ್ನ ಮೊದಲ ತ.ರಾ.ಸು ಕಾದಂಬರಿ ಇದು..