Author: Sanjota
ಕಾಡಿನ ಗರ್ಭದೊಳಗೆ ಬಂಧಿಯಾದಾಗ – ಹೀಗೊಂದು ಚಾರಣದ ಅನುಭವ
ಆಗಾಗ ದೂರದ ಪ್ರಯಾಣಕ್ಕೆ ಹೋಗುತ್ತಿದ್ದರೆ ನಮ್ಮಿಬ್ಬರಿಗೂ ಖುಷಿ. ಪ್ರವಾಸದಲ್ಲಿ ಕಂಡಷ್ಟು ಸಂತೋಷ, ಸಂತೃಪ್ತಿಯನ್ನು ಇನ್ನಾವುದರಲ್ಲಿಯೂ ಕಂಡಿಲ್ಲ ನಾನು. ಬರವಣಿಗೆ, ಓದಿನಲ್ಲಿ ಸಿಗುವ ಖುಷಿಗಿಂತ ಒಂದು ಮುಷ್ಟಿ ಹೆಚ್ಚೆಂದೇ ಹೇಳಬಹುದು. ಕಾರಣವಿಷ್ಟೇ… ಓದಿನಲ್ಲಾಗಲಿ, ಬರವಣಿಗೆಯಲ್ಲಾಗಲಿ ನನ್ನದೊಂದು ಕಲ್ಪನೆಯ ಲೋಕ ತೆರೆದುಕೊಳ್ಳುತ್ತದೆ. ನಾನೇ ಆ ಲೋಕದ ನಿರ್ಮಾತೃ. ನನಗೆ...