ಗುಲಾಬಿ ಕಾಲಿನ ಹುಡುಗಿ: ಹುಲ್ಲಾಗು ಬೆಟ್ಟದಡಿ (8)
ಅದು 2010. ಆ ಮನೆಯಲ್ಲಿ ಕ್ಷಣ ಕ್ಷಣಕ್ಕೂ ಚಿಂತೆ ದುಪ್ಪಟ್ಟಾಗುತ್ತಿತ್ತು. ಫೋನಿನಲ್ಲಿ ಅಮ್ಮ ಲಂಡನ್ ನಲ್ಲಿರುವ ಅನಿರ್ಬನ್ ನೊಂದಿಗೆ ಮಾತನಾಡುತ್ತಿದ್ದರು. ಪ್ರತಿ ನಿಮಿಷಕ್ಕೂ ಅವರ ಮುಖದಲ್ಲಿ ಹೆಚ್ಚಾಗುತ್ತಿದ್ದ ಕಳವಳ, ಭೀತಿ. ಅನಿರ್ಬನ್ ಹೆಂಡತಿ ಪಾಯಲ್ ತಮ್ಮ ಎರಡನೇ ಹೆರಿಗೆಗಾಗಿ ಲಂಡನ್ ನ ಹೆರಿಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಒಬ್ಬ ಮಗನಿದ್ದ ಪಾಯಲ್ ಮತ್ತು ಅನಿರ್ಬನ್ ಗೆ ಇದು ಎರಡನೇ ಹೆರಿಗೆಯಾದ್ದರಿಂದ ಮೊದಲ ಹೆರಿಗೆಯಾದಾಗ ಇದ್ದಷ್ಟು ಅಧೈರ್ಯ ಇರಲಿಲ್ಲ.
ಆದರೆ 7 ತಿಂಗಳಿಗೆ ತೀವ್ರವಾದ ಹೆರಿಗೆ ನೋವಿನಿಂದ ಆಸ್ಪತ್ರೆಗೆ ಬಂದ ಪಾಯಲ್ ಳ ಸ್ಥಿತಿ ಬಿಗಡಾಯಿಸಿತು. ಕರುಳ ಬಳ್ಳಿ ಮಗುವಿನ ಬಲಗಾಲಿಗೆ ಬಿಗಿಯಾಗಿ ಸುತ್ತಿಕೊಂಡಿದ್ದರಿಂದ ಬಲಗಾಲಿನ ಬೆಳವಣಿಗೆಯೇ ಆಗಿರಲಿಲ್ಲ. ಮೇಜರ್ ಆಪರೇಷನ್ ಗಳ ನಂತರ ಡಾಕ್ಟರ್ ಹೇಳಿದ್ದು – ಮಗುವಿನ ಪ್ರಾಣ ಉಳಿಯಬೇಕೆಂದರೆ ಬಲಗಾಲನ್ನು ತೆಗೆಯಬೇಕು ಎಂದು. ಅತಿಯಾದ ನೋವು, ಪರದಾಟದ ನಂತರ ಮುದ್ದಾದ ಹೆಣ್ಣು ಮಗು ಜನಿಸುತ್ತದೆ. ಅನಿರ್ಬನ್ ಬದುಕುಳಿದ ಹೆಂಡತಿ ಮತ್ತು ಮಗಳ ಖುಷಿಯಲ್ಲಿ ಸಿಹಿ ಹಂಚಲಿಲ್ಲ. ಕಾರಣ ಜನನದ ನಂತರ ಮಗುವಿನ ಪರಿಸ್ಥಿತಿ ಇನ್ನು ಬಿಗಡಾಯಿಸಿತ್ತು. ಸತತ ಹದಿನೇಳು ತಿಂಗಳುಗಳು ರಿದ್ಧಿ ತೀರ್ವ ನಿಗಾ ಘಟಕದಲ್ಲಿರಬೇಕಾಗುತ್ತದೆ. ಎರಡು ವರ್ಷಗಳ ಕಾಲ ದ್ರವ ಪದಾರ್ಥದ ಮೇಲೆಯೇ ರಿದ್ಧಿ ಬದುಕುತ್ತಾಳೆ.
ಮಗುವಿನ್ನು ಸಶಕ್ತ ಎಂದು ಕಂಡುಕೊಂಡ ವೈದ್ಯರು ರಿದ್ಧಿಯನ್ನು ಮನೆಗೆ ಕಳುಹಿಸುತ್ತಾರೆ. ಒಂದು ಕಾಲು ಮತ್ತು ಎಡಗೈನ ಊನದೊಂದಿಗೆ ಒಂದೂವರೆ ವರ್ಷದ ರಿದ್ಧಿ ಮನೆಗೆ ಅಂಬೆಗಾಲಿಡುತ್ತಾಳೆ.
ಮನೆಗೆ ಬಂದ ಮೇಲೆ ಹಸುಗೂಸು ರಿದ್ಧಿ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಒಂದು – ಅವಳು ದಿನವೂ ತಪ್ಪದೆ ತೆಗೆದುಕೊಳ್ಳಬೇಕಿದ್ದ ಮಾತ್ರೆ ಔಷಧಿಗಳು, ಇನ್ನೊಂದು ಅಷ್ಟು ಸಣ್ಣ ಜೀವದ ಮೇಲೆ ಆಪರೇಷನ್ ಗಳು ಬೀರಿದ ಪರಿಣಾಮ. ತಂದೆ ತಾಯಿಗೆ ಮಗಳ ಪರಿಸ್ಥಿತಿ ನೋಡಲಾಗದಿದ್ದರೂ ತಮ್ಮ ಕೈಲಾದ ಸೇವೆ ಮಾಡಿದರು. ಅವಳು ಎಲ್ಲರಂತಾಗಲಿ ಎಂದು ಅವರು ತೋರಿಸಿದ ಡಾಕ್ಟರ್ ಗಳೆದಷ್ಟೋ, ಸುರಿಸಿದ ಹಣವೆಷ್ಟೋ ಅವರಿಗೆ ತಿಳಿಯದು. ನಂಬಿದ ದೇವರುಗಳಿಗೆ ಹರಕೆ ಹೊತ್ತುಕೊಂಡಿದ್ದು ಆಯಿತು. ಏನೇ ಆದರೂ ರಿದ್ಧಿಗೆ ಬಲಗಾಲು ಮರಳಿ ಬರಲು ಸಾಧ್ಯವಿರಲಿಲ್ಲ. ಅವಳಿಗೆ ಕೃತಕ ಕಾಲು ಜೋಡಿಸಿದಾಗ 3 ವರ್ಷ ವಯಸ್ಸು .
ಇತರೆ ಮಕ್ಕಳಂತೆ ಕುಣಿದು ಕುಪ್ಪಳಿಸಲು ಆಗದಿದ್ದರೂ ರಿದ್ಧಿ ಅಳಲಿಲ್ಲ. ಹುಟ್ಟಿದಾಗ ಹೇಗೆ ಯಾವುದರ ಅರಿವಿಲ್ಲದೆ ಮುಖದ ತುಂಬಾ ಮಲ್ಲಿಗೆ ಅರಳಿದಂತೆ ನಕ್ಕಿದ್ದಳೋ ಅದೇ ಮುಗ್ಧ ನಗು ಅವಳ ಮುಖದಲ್ಲಿ ಸದಾ. ಜೋಡಿಸಿದ್ದ ಕೃತಕ ಕಾಲು ಅತಿ ಭಾರವಾಗಿತ್ತು. ಹೆಜ್ಜೆಯೆತ್ತಿ ಇಡಲು ಆಗದೆ ರಿದ್ಧಿ ಕಾಲೆಳೆಯುತ್ತಾ ಓಡಾಡುತ್ತಿದ್ದಳು. ಕಾಲನ್ನು ಜೋಡಿಸಿಕೊಳ್ಳಲು, ಕೃತಕ ಕಾಲಿನೊಂದಿಗೆ ಬಟ್ಟೆ ಹಾಕಿಕೊಳ್ಳಲು, ಮಲಗಲು ವಿಪರೀತ ಕಷ್ಟವಾಗುತ್ತಿತ್ತು. ಒಂದು ದಿನವೂ ರಿದ್ಧಿ ತನಗಿಲ್ಲದ ಕಾಲಿನ ಬಗ್ಗೆಯಾಗಲಿ, ಕೃತಕ ಕಾಲಿನ ಹಿಂಸೆಯ ಬಗ್ಗೆಯಾಗಲಿ ಅತ್ತದ್ದಿಲ್ಲವಂತೆ. ಶಾಲೆಗೆ, ಡಾನ್ಸ್ ಕ್ಲಾಸ್ ಗೆ, ಅಣ್ಣ, ಸ್ನೇಹಿತರೊಂದಿಗೆ ಆಟವಾಡಲು ಅದೇ ಮಲ್ಲಿಗೆಯ ನಗೆಯೊಂದಿಗೆ ಹೊರಡುವವಳೇ. ಡಾನ್ಸ್ ಎಂದರೆ ರಿದ್ಧಿಗೆ ಬಲು ಇಷ್ಟ. ಅದು ಅವಳ ಇಷ್ಟದ ಹವ್ಯಾಸ ಮತ್ತು ಕನಸು.
ಇಂತಹ ಸಮಯದಲ್ಲಿ ಬರ್ಮಿಂಗ್ಹ್ಯಾಮ್ ನ ಏನ್ ಎಚ್ ಎಸ್ ಹೆಲ್ತ್ ಕೇರ್ ಟ್ರಸ್ಟ್ ರಿದ್ಧಿಯ ಸಹಾಯಕ್ಕೆ ಬರುತ್ತದೆ. ಈ ಸಂಸ್ಥೆ ಪ್ರಾಸ್ಥೆಟಿಕ್ ಕಾಲುಗಳು ಅಥವಾ ವೀಲ್ಚೇರ್ ನ ಸಹಾಯದಿಂದ ಬದುಕುತ್ತಿರುವ ಜನರಿಗೆ ಹಗುರವಾದ ಮತ್ತು ಅಳವಡಿಸಿಕೊಳ್ಳಲು ಇನ್ನೂ ಉತ್ತಮವಾದ ಪ್ರೊಸ್ಥೆಟಿಕ್ ಬ್ಲೇಡ್ ಗಳನ್ನು ಜೋಡಿಸಿಕೊಳ್ಳಲು ಸಹಾಯಧನ ಮತ್ತು ವೈದ್ಯಕೀಯ ಸವಲತ್ತುಗಳನ್ನು ಒದಗಿಸುತ್ತಾರೆ.
2017 ರಲ್ಲಿ ಇವರ ಮೂಲಕ ರಿದ್ಧಿಗೆ ಭಾರವಾದ ಕಾಲಿನಿಂದ ಮುಕ್ತಿ ಸಿಕ್ಕು, ಹೊಸ ಗುಲಾಬಿ ಬಣ್ಣದ ಹಗುರವಾದ ಕಾಲಿನ ಜೋಡಣೆಯಾಗುತ್ತದೆ. ಬಹುಶಃ ನೀವೆಲ್ಲ ಈ ವಿಡಿಯೋವನ್ನು ಇಂಟರ್ನೆಟ್ ನಲ್ಲಿ ನೋಡಿರಬಹುದು. ಹೊಸ ಕಾಲಿನೊಂದಿಗೆ ಮೊದಲ ದಿನ ಶಾಲೆಗೇ ಬರುವ ರಿದ್ಧಿ ಓಡುತ್ತ ಹೋಗಿ ಅವಳ ಸ್ನೇಹಿತರನ್ನು ಅಪ್ಪುವ ದೃಶ್ಯ. ಇವಳಿಗೆ ಹೊಸ ಕಾಲು ಬಂದಿದ್ದನ್ನು ನೋಡಿ ಸ್ನೇಹಿತರ ಮುಖದಲ್ಲಿ ಸಂಭ್ರಮ. ಒಬ್ಬಳು ಕೇಳುತ್ತಾಳೆ ‘Is that your new pink leg?’ ಇನ್ನೊಂದು ಚಂದನದ ಗೊಂಬೆ ವಾವ್ ಎಂದು ಉದ್ಗರಿಸುತ್ತ ರಿದ್ಧಿಯನ್ನು ತಬ್ಬಿಕೊಳ್ಳುತ್ತಾಳೆ . ಇವರೆಲ್ಲ ಏಳು ವರುಷದ ಆಸುಪಾಸು. ಹೀಗೆ ಮಾಡಿ ಎಂದು ಯಾರು ಹೇಳಿ ಕೊಟ್ಟದ್ದಲ್ಲ. ಸ್ನೇಹಿತೆಯನ್ನು ಕಂಡಾಗ ಆ ಮುಗ್ಧ ಮಕ್ಕಳು ತೋರಿದ ನಿಷ್ಕಲ್ಮಶ ಪ್ರೀತಿಯಷ್ಟೇ. ಅದಕ್ಕೆ ಹೇಳುವುದು ‘ಮಕ್ಕಳೆಂದರೆ ದೇವರು’.
ಈ ಮೂಲಕ ಸೆನ್ಸೇಷನ್ ಆದ ರಿದ್ಧಿ ಅದೆಷ್ಟೋ ಜನರಿಗೆ ಸ್ಪೂರ್ತಿಯಾದಳು. ಇವಳಂತೆಯೇ ಇನ್ನೂ ಅನೇಕ ಮಕ್ಕಳು ಪ್ರೊಸ್ಥೆಟಿಕ್ ಬ್ಲೇಡ್ ನ್ನು ಹಾಕಿಸಿಕೊಂಡರು. ಈಗ ನಮ್ಮ ಈ ಮುದ್ದು ಗೊಂಬೆ ಬರ್ಮಿಂಗ್ಹ್ಯಾಮ್ ಅಷ್ಟೇ ಏಕೆ ಇಡೀ UK ನಲ್ಲಿ ಪ್ರಸಿದ್ದಳು. ಈ ಬಗ್ಗೆ ಅವಳಿಗೆ ಕೇಳಿದರೆ ‘ನನ್ನ ಸ್ನೇಹಿತರಿಗೆಲ್ಲ ಈಗ ಗುಲಾಬಿ ಬಣ್ಣದ ಕಾಲು ಬೇಕಂತೆ’ ಎಂದು ಅದೇ ಮುಗ್ಧತೆಯಲ್ಲಿ ಉತ್ತರಿಸುತ್ತಾಳೆ.
ಇಷ್ಟೇ ಅಲ್ಲ 2017 ರ Brummies Award ನ್ನು ಗಿಟ್ಟಿಸಿಕೊಳ್ಳುತ್ತಾಳೆ ಈ ಸಕ್ಕರೆ ನಗುವಿನ ಪೋರಿ.
ರಿದ್ಧಿ ಬೇರೆ ಯಾರು ಅಲ್ಲ, ನನ್ನ ಪ್ರಾಜೆಕ್ಟ್ ಮ್ಯಾನೇಜರ್ ಮಗಳು. ಹೆಸರು ಅನುಪುರ್ಬಾ ಆದರೂ ನಮ್ಮ ನಡುವೆ ರಿದ್ಧಿ ಎಂದೇ ಪರಿಚಿತ. ನಾನು ಯುಕೆ ನಲ್ಲಿದ್ದಾಗ ರಿದ್ಧಿಯನ್ನು ಹತ್ತಿರದಿಂದ ನೋಡಿದ್ದೆ. ಅನಿರ್ಬನ್ ದಂಪತಿ ಮೂಲತಃ ಬೆಂಗಾಲಿ . ಆಫೀಸಿನಲ್ಲಿ ನಡೆಯುತ್ತಿದ್ದ ಫ್ಯಾಮಿಲಿ ಇವೆಂಟ್ಸ್ ಗೆ ಅಪ್ಪ, ಅಮ್ಮ, ಅಣ್ಣನೊಂದಿಗೆ ಬರುವ ರಿದ್ಧಿ ಎಲ್ಲರಿಗು ಕಣ್ಮಣಿ. ಏನೇ ಆಟಗಳಿರಲಿ, ಡಾನ್ಸ್ ಇರಲಿ ರಿದ್ಧಿ ಹಾಜರು. ನಾನು ಅವಳೊಂದಿಗೆ ಒಂದಷ್ಟು ಸಮಯ ಕಳೆದಿದ್ದೇನೆ ಅನ್ನುವುದೇ ಖುಷಿ ನನಗೆ. ನನ್ನ ಹುಲ್ಲಾಗು ಬೆಟ್ಟದಡಿ ಅಂಕದಲ್ಲಿ ರಿದ್ಧಿಯ ಬಗ್ಗೆ ಬೇರೆಯಬೇಕೆಂದು ನನ್ನ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ ಅನಿರ್ಬನ್ ಬಳಿ ಕೇಳಿದಾಗ ‘Offcourse you can write, you are her aunt’ ಎಂದು ಹೇಳಿದ್ದಂತೂ ಇನ್ನೂ ಖುಷಿ.
ಎಲ್ಲವು ಇದ್ದು ಅದಿಲ್ಲ ಇದಿಲ್ಲ ಎಂದು ಕೊರಗುವ ನಮ್ಮ ನಡುವೆ ರಿದ್ಧಿಯಂತಹ ಎಷ್ಟೋ ಆತ್ಮವಿಶ್ವಾಸದ ಖನಿಗಳು ನಮ್ಮಲ್ಲಿದ್ದಾರೆ. ಎಲ್ಲ ಕೊರತೆಗಳನ್ನು ಕಾಲಿಂದ ಒದ್ದು ಜೀವನಕ್ಕೆ ಸವಾಲೆಂಬಂತೆ ಎದೆಯೊಡ್ಡಿ ನಿಂತಿದ್ದಾರೆ. ಬದುಕು ಬಲು ದೊಡ್ಡದು ಅದನ್ನು ಇಂಚಿಂಚಾಗಿ ಸವೆಯಬೇಕು ಎಂದು ಕ್ಷುಲ್ಲಕ ಕಾರಣಗಳಿಗಾಗಿ ಕುಗ್ಗುವ ಹಲವು ಜನರಿಗೆ ಜೀವನಪಾಠವಾಗಿದ್ದಾರೆ.
ನಮ್ಮ ರಿದ್ಧಿಯ ಕನಸೆಲ್ಲವೂ ನನಸಾಗಲಿ, ಇನ್ನೂ ಹಲವಾರು ಸಾಧನೆಗಳು ಅವಳಿಂದ ಆಗಲಿ, ನಮ್ಮಂತಹ ಸಾವಿರಾರು ಜನರಿಗೆ ಮಾದರಿಯಾಗಲಿ, ಆ ಮಲ್ಲಿಗೆಯ ನಗು ಬತ್ತದಿರಲಿ.
Girl with a Pink leg
It was 2010. Everyone in the house was worried about the situation. Mom was speaking to Anirban in London over the phone.
Every minute, the fear was increasing on her face. Anirban’s wife, Paayal, was admitted to London’s Maternity Hospital for the delivery of their second child.
Paayal was hospitalized in her 7th month due to severe pain. The intestinal vine was tightly wrapped around the child’s right leg and there wasn’t growth at all. After major operations, the doctor said that the right leg should be removed in order to keep the child alive. After excessive pain & suffering, a cute baby girl was born. The baby’s condition was worsened even more after the birth. For seventeen months baby was kept in intensive care and little Riddhi lived on only liquid food for almost 2 years.
Doctors found that the baby is fine enough to survive without intensive care, sent her home but advised parents to take extra care of her. Thus One-and-a-half-year-old Riddhi entered the house with one leg and foible hand.
It was very difficult for that little baby. One – the number of pills & syrups that she had to take daily, another- effect of surgeries. Riddhi’s parents did their best. They showed every doctor in the town, prayed to all the gods to make their daughter’s life better. However, it was impossible to bring back Riddhi’s natural leg. Only one option was an artificial leg! Riddhi was 3 years old when she got artificial foot attached.
Riddhi was unable to play and dance like other kids but she never cried about it. The same sweet smile which was there on her face when she was born, was there throughout. The artificial foot was heavy. She couldn’t lift her leg and walk around. It was hard to attach, dress up with an artificial leg, and to sleep. Yet Riddhi lives her life without complaints. She goes to school, dance class, play with friends and brother. Dance is her favorite hobby and dream.
During this time Birmingham’s NHS Health Care Trust comes to Riddhi’s help. This organization provides subsidized medical benefits to help people who are living with artificial legs and to the people who are on Wheelchairs. NHS health care trust raise funds to help people get prosthetic blades which are light in weight and easy to use.
In 2017, Riddhi got relief from her heavy prosthetic leg and got a new pink leg. Perhaps you’ve seen this video on the Internet. Video of a girl running in her Pink blade to show it to her friends and the sweet reaction and hugs from her friends. All these kids are about seven years. No one has told them to talk like this or directed them what to do. It is the pure love of the innocent children who love their friend unconditionally. That’s why there is a saying ‘Children are god’.
This video goes viral and Riddhi becomes sensation and inspiration to many people out there. NHS health care trust helps many others to get the prosthetic blade. Now our little baby is not only famous in Birmingham but is a celebrity in the UK. When asked about this, she replied with the same innocence ‘Now even my friends want pink leg’
Riddhi bagged Brummies Award 2017.
Riddhi is my project manager’s daughter. Her name is Anupurba but we all know her as Riddhi. I have spent time with Riddhi when I was in the UK. Anirban & Payal are Bengali origin. During family events, potlucks Riddhi used to come with her parents and brother. She is always ahead when it comes to dance and games. I’m glad that I met her and spent some time with Riddhi.
When I asked Anirban whether I can write about Riddhi in my blog, he said ‘Of course you can write, you are her aunt’.
Even after having everything we have so many complaints in life. Many people are neither satisfied nor happy about their life. People like Riddhi have taken life as a challenge. They are living their life with full of courage and confidence. They are the inspiration to us.
I wish Riddhi to achieve much more success in life. Let her all dreams come true. Let her be an inspiration for thousands of people and most importantly let that smile remain the same sweet and innocent forever.