ಅಜ್ಜನ ಅಂಬಾರಿ ಸೈಕಲ್ ಎಂಬ ಮಾಯಾರಥ

    ನಿನ್ನೆ ವಿಶ್ವ ಬೈಸಿಕಲ್ ದಿನ ಎಂದು ನೋಡಿದಾಗ ತಟ್ಟನೆ ನೆನಪಾಗಿದ್ದು ನನ್ನಜ್ಜನ ಸೈಕಲ್. ನನಗ್ ನೆನಪಿರುವ ಹಾಗೆ ಅದು ಹೀರೋ ಸೈಕಲ್. ೯೦ ರ ದಶಕದಲ್ಲಿ ಪ್ರತಿಯೊಬ್ಬನ ಮನೆಯ ಅಂಗಳವನ್ನು ಮನದಂಗಳವನ್ನು ಆಳಿದ ಸೈಕಲ್ ಅದು. ಈಗಲೂ ಹಳ್ಳಿಗಳಲ್ಲಿ ಅದರದ್ದೇ ಕಾರುಬಾರು.  ಅಜ್ಜ ಸದಾ...

ಬಿರಿದ ಮಲ್ಲಿಗೆಯ ಕಂಪಿನ ತಂಪು ಅಮ್ಮನ ಮಡಿಲು: ಅಮ್ಮಂದಿರ ದಿನದ ವಿಶೇಷ

  ಹೀಗೊಂದು ದೃಶ್ಯ.. ಅಳುತ್ತಿದ್ದ ಮಗುವನ್ನು ಸಂತೈಸಿ, ಮುದ್ದು ಮಾಡಿ, ಊಟ ಮಾಡಿಸಿ, ಊಟ ಮಾಡುವಾಗ ಕಪಟ ಹಠ ಮಾಡುತ್ತಾ ತಿನ್ನುವುದಿಲ್ಲವೆಂದು ಮುಷ್ಕರ ಹೂಡಿದ ಕಂದನಿಗೆ ಬಾನಲ್ಲಿನ ಚಂದ್ರನನ್ನು ಭುವಿಗೆ ಕರೆಸಿ ಮಾಮನನ್ನಾಗಿ ಪರಿಚಯಿಸಿ , ನಕ್ಷತ್ರಗಳ ಕೈಗಿತ್ತು ಮಾಲೆಗಳ ಪೋಣಿಸಿ, ವೀರ ಶೂರರ ಕತೆ ಹೇಳಿ ದೇಶಾಭಿಮಾನ ಬಿತ್ತಿ,...

ಮಹಿಳಾ ದಿನದ ಏಳು ವಿಶೇಷ ಸಾಧಕಿಯರು #SheInspiresUs: ಹುಲ್ಲಾಗು_ಬೆಟ್ಟದಡಿ (12)

  ವಿಶ್ವ ಮಹಿಳಾ ದಿನಂದಂದು ನಮ್ಮ ಪ್ರಧಾನ ಮಂತ್ರಿ ತಮ್ಮ ಟ್ವಿಟ್ಟರ್ ಖಾತೆಯನ್ನು ಒಂದು ದಿನದ ಮಟ್ಟಿಗೆ ಮಹಿಳೆಯರಿಗೆ ವರ್ಗಾಯಿಸುವುದಾಗಿ ಹೇಳಿಕೊಂಡಿದ್ದರು. ಅದರಂತೆ ಮಾರ್ಚ್ ೮ ರಂದು ೭ ಜನ ಮಹಿಳಾಮಣಿಗಳು, ಸ್ವತಃ ಪ್ರಧಾನ ಮಂತ್ರಿಯಿಂದ ಆರಿಸಲ್ಪಟ್ಟ ಸಾಧಕಿಯರು, ಸಮಾಜದಲ್ಲಿ ಬದಲಾವಣೆಯನ್ನು ತಂದ ಮತ್ತು ಬದಲಾವಣೆಗಾಗಿ ಶ್ರಮಿಸುತ್ತಿರುವ...

ಪ್ರೀತಿ ಮಮತೆಯಲ್ಲಿ ಹೆಂಗರುಳಿಗೆ ಸಾಟಿ ಯಾವುದಿಲ್ಲಿ? – ಮಹಿಳಾ ದಿನದ ವಿಶೇಷ

೨೦೨೦ ರ ಏಣಿಯ ಮೊದಲೆರಡು ಮೆಟ್ಟಿಲನ್ನು ಹತ್ತಿಯಾಗಿದೆ. ಬಾಕಿ ಉಳಿದಿರುವುದು ಇನ್ನು ಹತ್ತು ಮೆಟ್ಟಿಲುಗಳು ಮಾತ್ರ. ಹೊಸ ವರುಷದ ಆರಂಭ “ಅಯ್ಯೋ ಆಗಲೇ ಒಂದು ವರ್ಷ ಕಳೆಯಿತಲ್ಲ, ಅಂದುಕೊಂಡಿದ್ದ ಎಷ್ಟೋ ಕೆಲಸಗಳು, ಸಾಧನೆಗಳು ಕೈಗೂಡಲೇ ಇಲ್ಲ” ಎಂಬ ನಿಟ್ಟುಸಿರಿನಿಂದಲೇ ಶುರುವಾಗುತ್ತದೆ. ಜೊತೆಗೆ ಹೊಸ ವರ್ಷ “ಈ ವರ್ಷವಾದರೂ...

ಕಾಡಿನ ಗರ್ಭದೊಳಗೆ ಬಂಧಿಯಾದಾಗ – ಹೀಗೊಂದು ಚಾರಣದ ಅನುಭವ

  ಆಗಾಗ ದೂರದ ಪ್ರಯಾಣಕ್ಕೆ ಹೋಗುತ್ತಿದ್ದರೆ ನಮ್ಮಿಬ್ಬರಿಗೂ ಖುಷಿ. ಪ್ರವಾಸದಲ್ಲಿ ಕಂಡಷ್ಟು ಸಂತೋಷ, ಸಂತೃಪ್ತಿಯನ್ನು ಇನ್ನಾವುದರಲ್ಲಿಯೂ ಕಂಡಿಲ್ಲ ನಾನು. ಬರವಣಿಗೆ, ಓದಿನಲ್ಲಿ ಸಿಗುವ ಖುಷಿಗಿಂತ ಒಂದು ಮುಷ್ಟಿ ಹೆಚ್ಚೆಂದೇ ಹೇಳಬಹುದು. ಕಾರಣವಿಷ್ಟೇ… ಓದಿನಲ್ಲಾಗಲಿ, ಬರವಣಿಗೆಯಲ್ಲಾಗಲಿ ನನ್ನದೊಂದು ಕಲ್ಪನೆಯ ಲೋಕ ತೆರೆದುಕೊಳ್ಳುತ್ತದೆ. ನಾನೇ ಆ ಲೋಕದ ನಿರ್ಮಾತೃ. ನನಗೆ...

ವಿದ್ಯೆಯ ಹಸಿವನ್ನು ನೀಗಿಸುವತ್ತ: ಹಿಂದಿ ಸಿನಿಮಾ Super 30

    Hotstar ನಲ್ಲಿ Super 30 ಹೆಸರಿನ ಹೃತಿಕ್ ರೋಷನ್ ಅಭಿನಯದ ಸಿನಿಮಾ ಇದೆ. ನಾವು ಈಗಷ್ಟೇ ನೋಡಿ ಮುಗಿಸಿದೆವು. ಏನಂತ ಶುರು ಮಾಡಲಿ.‌.. ನಾನು ಇತ್ತೀಚಿಗೆ ನೋಡಿದ್ದರಲ್ಲಿ ಅತ್ಯಂತ ಉತ್ತಮ ಸಿನಿಮಾಗಳಲ್ಲಿ ಒಂದು. ಆನಂದ ಅವನ ಹೆಸರು. ಅಪ್ಪ ಪೋಸ್ಟಮ್ಯಾನ್. ಮನೆಯಲ್ಲಿ ಎರಡು ಹೊತ್ತಿನ...

ಮನಸಿದ್ದರೆ ಸಾಕು ಕೈ ಚಾಚಿ ಚುಕ್ಕಿ ಚಂದ್ರಮರನ್ನೂ ಮುಟ್ಟಬಹುದು : ಹುಲ್ಲಾಗು ಬೆಟ್ಟದಡಿ (11)

    ಎಲ್ಲರಿಗು ನಮಸ್ಕಾರ,   ತುಂಬಾ ದಿನಗಳ ನಂತರ ಮತ್ತೆ ಬರೆಯುತ್ತಿದ್ದೇನೆ. ಬಹುಶಃ ತಿಂಗಳೇ ಕಳೆಯಿತೇನೋ… ಹಾಗೆ ಏನಾದರೂ ಬರೆಯುತ್ತಿದ್ದೆನೇ ಹೊರತು ನಿಮ್ಮ ಮುಂದೆ ಪ್ರಸ್ತುತ ಪಡಿಸುವಂತಹದ್ದನ್ನು ಬರೆದು ತುಂಬಾ ದಿನಗಳಾಯಿತು. ಬರವಣಿಗೆ ಎಂಬುದು ಗಿಡವಿದ್ದಂತೆ. ಪ್ರತಿದಿನ ನೀರೆರೆದು ಪೋಷಿಸುತ್ತಿದ್ದರೆ ನಳನಳಿಸುತ್ತ, ಚಿಗುರುತ್ತಾ ದಿನ ಕಳೆದಂತೆಲ್ಲ...

ಈಸಬೇಕು ಇದ್ದು ಜಯಿಸಬೇಕು ಗೆದ್ದು ಸಾಧಿಸಬೇಕು : ಹುಲ್ಲಾಗು ಬೆಟ್ಟದಡಿ(10)

  ಸಾಧನೆಗೆ ಅಂಗಾಂಗಗಳು ಮುಖ್ಯವಲ್ಲ ಸಾಧಿಸುವ ಛಲ ಮುಖ್ಯ! ನಮಸ್ಕಾರ ಎಲ್ಲರಿಗೆ , ಬಹಳ ದಿನಗಳ ನಂತರ ಹುಲ್ಲಾಗು ಬೆಟ್ಟದಡಿ ಅಂಕಣ ಬರೆಯುತ್ತಿದ್ದೇನೆ. ಕೆಲಸದ ಒತ್ತಡ ಮತ್ತು ಒಂದಿಷ್ಟು ಸೋಮಾರಿತನ. ನೀರಿನ ಫಿಲ್ಟರ್ ಕಂಡು ಹಿಡಿದ ನಿರಂಜನನ ಬಗ್ಗೆ ನಾವೆಲ್ಲಾ ಈಗಾಗಲೇ ಓದಿದ್ದೇವೆ. ಈಗ ಇನ್ನೊಬ್ಬ ನಿರಂಜನನ ಬಗ್ಗೆ...

ಕೌದಿ ಕಲೆಯ ಕಂಪನ್ನು ಪಸರಿಸುತ್ತಿರುವ ತಾಳಿಕೋಟೆಯ ಅಜ್ಜಿ ಗಂಗೂಬಾಯಿ ದೇಸಾಯಿ: ಹುಲ್ಲಾಗು ಬೆಟ್ಟದಡಿ(9)

  ಆಗ ನಾನು ಇಂಜಿನಿಯರಿಂಗ್ ಕಾಲೇಜಿನಲ್ಲಿದ್ದೆ. ಜನ ಹಂತ ಹಂತವಾಗಿ ಆಧುನಿಕತೆಯತ್ತ ಮುಖ ಮಾಡುತ್ತಿದ್ದ ಕಾಲ. ಶ್ರೀಮಂತ ವರ್ಗದವರೆಲ್ಲ ವಿದೇಶಿ ವ್ಯಾಮೋಹಕ್ಕೆ ಬಲಿಯಾಗಿಯಾಗಿತ್ತು. ನಮ್ಮಂತಹ ಮಧ್ಯಮ ವರ್ಗದವರ ಮನೆಗಳಲ್ಲೂ ಮೆಲ್ಲ ಮೆಲ್ಲನೆ ಆಧುನಿಕತೆ ಅಡಿಯಿಡುತ್ತಿತ್ತು. ಅಜ್ಜ ಅಜ್ಜಿಯ ಕಾಲದಿಂದಲೂ ಬಂದ ಸಂಪ್ರದಾಯ, ಆಚಾರ, ವಿಚಾರ, ವಸ್ತುಗಳೆಲ್ಲವೂ ಗೊಡ್ಡು...

ಗುಲಾಬಿ ಕಾಲಿನ ಹುಡುಗಿ: ಹುಲ್ಲಾಗು ಬೆಟ್ಟದಡಿ (8)

  ಅದು 2010. ಆ ಮನೆಯಲ್ಲಿ ಕ್ಷಣ ಕ್ಷಣಕ್ಕೂ ಚಿಂತೆ ದುಪ್ಪಟ್ಟಾಗುತ್ತಿತ್ತು. ಫೋನಿನಲ್ಲಿ ಅಮ್ಮ ಲಂಡನ್ ನಲ್ಲಿರುವ ಅನಿರ್ಬನ್ ನೊಂದಿಗೆ ಮಾತನಾಡುತ್ತಿದ್ದರು. ಪ್ರತಿ ನಿಮಿಷಕ್ಕೂ ಅವರ ಮುಖದಲ್ಲಿ ಹೆಚ್ಚಾಗುತ್ತಿದ್ದ ಕಳವಳ, ಭೀತಿ. ಅನಿರ್ಬನ್ ಹೆಂಡತಿ ಪಾಯಲ್ ತಮ್ಮ ಎರಡನೇ ಹೆರಿಗೆಗಾಗಿ ಲಂಡನ್ ನ ಹೆರಿಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರು....

Copy Protected by Chetan's WP-Copyprotect.