ಸಂಸಾರದಲ್ಲಿ ಸಾಮರಸ್ಯವಿದ್ದಾಗ ಬದುಕು ನಂದನವಾಗುತ್ತದೆ. ದಂಪತಿಗಳು ತಮ್ಮ ಜವಾಬ್ದಾರಿ ಅರಿತು ನಡೆದಾಗ ಮಾತ್ರ ಜೀವನ ಚಕ್ರ ಸುಲಲಿತವಾಗಿ ಉರುಳುತ್ತದೆ. ಇತ್ತೀಚಿಗೆ ಎಲ್ಲರು love marriage ಗಳ ಮೊರೆ ಹೋಗುತ್ತಿರುವುದನ್ನು ನೋಡುತ್ತಿದ್ದೇವೆ. ನಿಜವಾದ ಪ್ರೀತಿಯಿಂದ ಪ್ರೀತಿಸಿ ಮದುವೆಯ ನಂತರ ಖುಷಿಯ ಜೀವನ ನಡೆಸುತ್ತಿರುವವರು ಒಂದು ಕಡೆಯಾದರೆ, ಆಕರ್ಷಣೆ ಬತ್ತಿದ...