ದಾಟು (Daatu)– S.L.ಭೈರಪ್ಪ
ನನ್ನ ಅತಿ ನೆಚ್ಚಿನ ಕಾದಂಬರಿಕಾರರಲ್ಲಿ S.L.ಭೈರಪ್ಪ ಒಬ್ಬರು. ಅವರ ಕಾದಂಬರಿಯಲ್ಲಿ ಸಾಮಾಜಿಕ ಕಳಕಳಿಯಿರುತ್ತದೆ, ಪ್ರತಿಯೊಂದು ಪದಕ್ಕೂ ತೂಕವಿರುತ್ತದೆ, ಅರ್ಥವಿರುತ್ತದೆ, ನಮ್ಮ ಸುತ್ತ ಮುತ್ತಲಿನ ಪಾತ್ರಗಳೇ ಕಥೆಗಳಾಗಿರುತ್ತವೆ. ಕಾದಂಬರಿ ಓದಿ ಮುಗಿಸಿದ ನಂತರವೂ ಅದರ ಕಥೆ ಮೆದುಳನ್ನು ಚಿಂತನೆಗೆ ತೊಡಗಿಸುತ್ತದೆ. ನಮ್ಮ ಪೀಳಿಗೆಯಲ್ಲಿ ಅವರಂತಹ ಮಹಾನ ಕಾದಂಬರಿಕಾರ ಇರುವುದು ನನ್ನ ಸೌಭಾಗ್ಯ.
ದಾಟು ೪೦೭ ಪುಟಗಳ ಬೃಹತ್ ಕಾದಂಬರಿ. ಓದಲು ತೊಡಗಿದಾಗ ಈ ಶೀರ್ಷಿಕೆ ಯಾಕೆ ಎಂಬ ಪ್ರಶ್ನೆ ಬಂದರೂ ಓದಿದ ನಂತರ ಇಡಿ ಕಥೆಯ ಹೂರಣ ಈ ಶೀರ್ಷಿಕೆಯಲ್ಲಿ ಅಡಗಿದೆ ಎನ್ನಿಸಿತು.
ತಿರುಮಲಾಪುರ ಎನ್ನುವ ಶ್ರೀನಿವಾಸನ ದೇವಸ್ತಾನವಿರುವ ಗ್ರಾಮದಲ್ಲಿ ನಡೆಯುವ ಕಥೆ ಇದು. ಆರಂಭದಲ್ಲಿ ಊರಿನ ರಚನೆಯ ಚಿತ್ರಣವಿದೆ. ದೇವಸ್ತಾನದ ಅರ್ಚಕರಾದ ವಿಧುರ ವೆಂಕಟರಮನಯ್ಯನವರಿಗೆ ವೆಂಕಟೇಶ ಮತ್ತು ಸತ್ಯಭಾಮ ಎಂಬ ಜಾಣ ಮಕ್ಕಳು. ವೆಂಕಟೇಶ ಶಾಲೆಯಲ್ಲಿ fail ಆದರು ರಾಜಕೀಯದ ತೀಕ್ಷ್ಣ ಬುದ್ಧಿ ಹೊಂದಿದವ, ದುಡ್ಡು ಮಾಡಲು ಸುಳ್ಳನ್ನೇ ಸತ್ಯವನ್ನಾಗಿ ಸಾಧಿಸಬಲ್ಲ ಭಂಡ. ಆದರೆ ಸತ್ಯಭಾಮ ಇದಕ್ಕೆ ತದ್ವಿರುದ್ದ. ಓದಿನಲ್ಲಿ ಅತಿ ಬುದ್ಧಿವಂತಳಾದ ಅವಳು ಜಾತಿಯನ್ನು ನಂಬದೆ ಸತ್ಯದ ಆಧಾರದ ಮೇಲೆ ಯಾರ ಮುಂದೆಯಾದರೂ ವಾದಿಸಬಲ್ಲ ದಿಟ್ಟೆ.
ಈ ಗ್ರಾಮದ ಅತಿ ಸಿರಿವಂತಿಕೆಯ ಕುಳ ತಿರುಮಲೆಗೌಡರು. ಕ್ಷತ್ರಿಯರೇ ಬ್ರಾಹ್ಮಣರಿಗಿಂತ ಮೇಲು ಎಂಬ ಅಭಿಪ್ರಾಯವನ್ನು ಹೊಂದಿದವರು. ಇವರ ಮಗ ಮೆಲುಗಿರಿಗೌಡರು ತಮ್ಮ ಮನೆತನದ ಪ್ರಭಾವವನ್ನು ಬಳಸಿ ಮಂತ್ರಿಗಳಾಗಿರುತ್ತಾರೆ . ಇವರಿಗೊಬ್ಬ ಪುಕ್ಕಲು ಮಗ ಶ್ರೀನಿವಾಸ, ಯಾವುದಕ್ಕೂ ಗಟ್ಟಿ ನಿರ್ಧಾರ ತೆಗೆದುಕೊಳ್ಳದೆ ಬೇರೆಯವರ ವಿಚಾರಗಳಲ್ಲಿ ಅತಿ ಸುಲಭವಾಗಿ ಪ್ರಭಾವಗೊಳ್ಳುವ ಹೇಡಿ.
ಹೀಗೆ ಬ್ರಾಹ್ಮಣ ಕ್ಷತ್ರಿಯ ಹೆಚ್ಹು ಕಡಿಮೆಗಳಲ್ಲಿ ನಾವು ಯಾರಿಗೂ ಕಡಿಮೆಯಿಲ್ಲ ಎನ್ನುವ ಹರಿಜನರು ಒಂದು ಕಡೆ. ಈ ಕೇರಿಗೆ ಬೆಟ್ಟಪ್ಪನವರು ನಾಯಕರು. ಇವರ ಮಗ ಮೋಹನದಾಸ ತಂದೆಗೆ ವಿರುದ್ಧ. ಶಾಂತಿ ಸೌಜನ್ಯದಿಂದ ಮಹಾತ್ಮಾ ಗಾಂಧಿಯವರ ತತ್ವಗಳನ್ನು ಅಳವಡಿಸಿಕೊಂಡು, ತಮ್ಮ ಇತಿ ಮಿತಿಗಳನ್ನು ತಿಳಿದು ಬಾಳಬೇಕು ಎಂದು ಬದುಕುತ್ತಿರುವ ತಂದೆಯ ಧೋರಣೆಗೆ ಮೋಹನದಾಸ ಯಾವಾಗಲು ವೀರೋಧಿ. ತಾನಾಯಿತು ತನ್ನ ಓದಾಯಿತು ಎಂಬ ಮಗಳು ಮೀರಾ.
ಹೀಗೆ ಜಾತಿ ಮಧ್ಯೆ ನಡೆಯುವ ವೈಮನಸುಗಳಿವೆ. ಪ್ರೀತಿ ಹೇಗೆ ಜಾತಿಗೆ ಬಲಿಯಾಗಿ ಸಾಯುತ್ತದೆ ಎಂಬ ಸಾಕ್ಷಿ ಇದೆ. ಮಾರಮ್ಮ ಹೇಗೆ ಮಾದಿಗರ ದೇವತೆ ಆಗಿದ್ದು ಅಂತ ಕಥೆ ಇದೆ. ದೇವರನ್ನು ಕೂಡ ಬಿಡದಂತೆ ಜಾತಿ ಎಲ್ಲರನ್ನು ಆವರಿಸಿಕೊಂಡಿರುತ್ತದೆ.
ನನ್ನನ್ನು ಚಿಂತನೆಗೆ ದೂಡಿದ ಕಾದಂಬರಿಯಲ್ಲಿ ನನಗೆ ಇಷ್ಟವಾದ ಕೆಲವು ಸಾಲುಗಳು ” ಕತ್ತೆ ಲಾಯಕ್ಕೆ ಕುದುರೆ ಬಂದರೆ ಕತ್ತೆಗಳು ಸೇರಿಸುವುದಿಲ್ಲ” , “ಕತ್ತೆ ಲಾಯ ಸೇರಿದ ಕುದುರೆ ಓಡಾಕು ಇಲ್ಲ ಹೇರು ಹೊರಕು ಇಲ್ಲ “, “ರೂಢಿ ನಿಜವನ್ನು ಮುಚ್ಚಿ ಹಾಕುತ್ತೆ”…
ಜಾತಿ ದ್ವೇಷಕ್ಕೆ ಬಲಿಯಾಗಿ ಒಂದು ಗ್ರಾಮ ಹೇಗೆ ಪತನಗೊಳ್ಳುತ್ತದೆ ಎನ್ನುವುದನ್ನು ಕಾದಂಬರಿ ಓದಿ ತಿಳಿಯಬೇಕು.
*********************************************************************
S.L Bhairappa is one of my favorite novelist, he studies in depth about the content of the novel and then exhibits it thoroughly.
Daatu means ‘Crossing Boundaries’, after finishing the novel we realize the importance of this title to the novel. Entire novel talks about crossing boundaries of caste thus vanishing the old myths about the caste system.
This story runs around the place Tirumalapura (Tumakuru District) where there is temple of god Shreenivasa. Village contains Brahmins, Gowdas & Dalits. Widower Venkataramanayya is the Purohita (Officiant) of Shreenivasa temple. Venkataramanayya has 2 children, one is Satyabhama (Satya) who is very daring and strongly disagree with the caste system and second one is Venkatesh who is politician minded and can do anything to save himself and his caste honor.
There also exists Gowda family who has very prestigious fame in this village because of Tirumalegowda. Tirumalegowda is head of the family who studied Vedas in 19th century (During this time Vedas study was only meant for Brahmins). Due to this fact he always believes that Kshatriyas are superior to brahmins. His Son Melugirigowda is the Cabinet Minister from the village whose son Srinivasa and Satya will be studying together.
Along with these 2 caste there is also Dalit caste and leader Bettaya is Gandhiji’s Diciple. He expect his children Mohandas & Meera also to follow Gandhiji but Mohanadas turns opposite. He always looks for a chance to degrade Gowdas & Brahmins.
Satya & Sreenivasa love each other but caste difference will not let them to marry. Though Satya is ready to face people but Sreenivasa changes his mind with the influence of his parents & Venkatesha. Mohanadasa tries to prove his caste is not inferior to anyone and thus influence all the Dalits to enter temple (During that time temple entrance was prohibited for Dalits). Satya helps Mohandasa in writing book for Dalits which brings Satya, Mohandasa & Meera together even though they are from different caste.
In the story everyone fights for the existence of their caste, fights to prove superiority of individual caste. I have given brief review about novel but there are many incidents which holds the reader.
Must read Novel 🙂
ದಾಟು ನನ್ನ ನೆಚ್ಚಿನ ಕಾದಂಬರಿಯು ಹೌದು 🙂
🙂