ಅಬಚೂರಿನ ಪೋಸ್ಟಾಫೀಸು (Abachoorina Postoffice).. ಪೂರ್ಣಚಂದ್ರ ತೇಜಸ್ವಿ
ತ್ರಿವೇಣಿ , ಸಾಯಿಸುತೆಯವರ ಕಾದಂಬರಿಗಳನ್ನು ಓದುತ್ತ ಬೆಳೆದ ನಾನು ಇಲ್ಲಿಯವರೆಗೂ ಪೂರ್ಣಚಂದ್ರ ತೇಜಸ್ವಿಯವರ ಒಂದೂ ಕಾದಂಬರಿಯನ್ನು ಓದಿರಲಿಲ್ಲ .ಅವರು ತುಂಬಾ ಗಹನವಾಗಿ ಬರೆಯುತ್ತಾರೆ ನನ್ನ ಬುದ್ದಿಮತ್ತೆ ಸಾಲದು ಅರ್ಥಮಾಡಿಕೊಳ್ಳಲು ಎಂದು ನನಗೆ ನಾನೇ ತೀರ್ಮಾನಿಸಿಕೊಂಡು ಬಿಟ್ಟಿದ್ದೆ . ಇತ್ತೀಚಿಗೆ Quora ನಲ್ಲಿ ಸ್ನೇಹಿತರೊಬ್ಬರು ತೇಜಸ್ವಿಯವರ ಕಾದಂಬರಿಗಳನ್ನು ಓದಲು ಸೂಚಿಸಿದಾಗ ಒಂದು ಸಾರಿ ಪ್ರಯತ್ನಿಸಬಾರದೇಕೆ ಎಂದುಕೊಂಡಾಗ ಮೊದಲು ಹೊಳೆದಿದ್ದೇ ಅಬಚೂರಿನ ಪೋಸ್ಟಾಫೀಸು.
ನನ್ನ ಅಜ್ಜ Post master. ಚಿಕ್ಕವಳಿದ್ದಾಗ ಅಜ್ಜನ ಊರಿಗೆ ಹಬ್ಬಕ್ಕೆ , ರಜ ಕಳೆಯಲು ಹೋಗುತ್ತಿದ್ದ ನನಗೆ ಈ post office ಒಂದು ಅದ್ಬುತ ಜಗತ್ತಿನಂತೆ ತೋರುತ್ತಿತ್ತು . ಕರಿ ಬಣ್ಣದ sealನಿಂದ ದಿನಾಂಕ ಬದಲಿಸಿ ಧಪ ಧಪ ಎಂದು ಹೊಡೆಯುತ್ತಿದ್ದ ಇಮಾಂ uncle , Money order ಬಂದಿದೆಯ ಎಂದು ದಿನಕ್ಕೊಮ್ಮೆ ಬಂದು ವಿಚಾರಿಸಿ ಹೋಗುತ್ತಿದ್ದ ಜನರು , RD ಯೋಜನೆಯ ಲಾಭದ ಬಗ್ಗೆ ಬಂದವರಿಗೆಲ್ಲ ಅಜ್ಜ ಹೇಳುತ್ತಿದ್ದ ಪರಿ , ಗಟ್ಟಿಯಾದ ಕಂದು ಬಣ್ಣದ ಟಪಾಲು ಹೊತ್ತು ತರುತ್ತಿದ್ದ bag ಹೀಗೆ ಎಲ್ಲವು ನನ್ನನ್ನು ವಿಸ್ಮಿತಳನ್ನಾಗಿ ಮಾಡುತ್ತಿದ್ದವು . ಬೆಳಗ್ಗೆ 8.00 ಗಂಟೆಗೆ ಶುರುವಾದರೆ ಟಪಾಲು ಬರುವುದರೊಂದಿಗೆ ಕೊನೆಯಾಗುತ್ತಿತ್ತು Post officeನ ಸಮಯ .
ಹೀಗಾಗಿ ನನಗು Post office ಗು ಏನೋ ಅವಿನಾಭಾವ ಸಂಬಧ. ಈ ಕಾದಂಬರಿಯನ್ನು ಓದಲು ಈ ಸಂಬಂಧವೇ ಪ್ರೇರಣೆ.
ಇದೊಂದು ಕಥಾ ಸಂಕಲನವಾಗಿದ್ದು ಒಟ್ಟು 7 ಕಥೆಗಳನ್ನು ಒಳಗೊಂಡಿದೆ . ‘ಹೊಸ ದಿಗಂತದ ಕಡೆಗೆ ‘ ಇದರಲ್ಲಿ ತೇಜಸ್ವಿಯವರು ನವ್ಯ ಸಾಹಿತ್ಯದ ಬಗ್ಗೆ , ಒಳಿತು ಕೆಡಕುಗಳ ಬಗೆಗೆ , ನವ್ಯ ಸಾಹಿತ್ಯದಲ್ಲಿ ಅತ್ಯವಶ್ಯವಾದ ಬದಲಾವಣೆಗಳ ಬಗ್ಗೆ , ತಾವು ಲೋಹಿಯಾ ಅವರಿಂದ ಪ್ರಭಾವಿತರಾದ ಬಗ್ಗೆ ವಿವರಿಸಿದ್ದಾರೆ .
ಮೊದಲ ಕಥೆ ‘ಅಬಚೂರಿನ ಪೋಸ್ಟಾಫೀಸು’;
ಅಬಚೂರೆಂಬ ಸಣ್ಣ ಊರಿನಲ್ಲಿ ‘ಬೋಬಣ್ಣ ‘ ಎಂಬುವವನು Post master ಆಗಿ ಕಾರ್ಯ ನಿರ್ವಹಿಸುತ್ತಿರುತ್ತಾನೆ . ಇಡಿ ಊರಿನಲ್ಲಿ ತಕ್ಕ ಮಟ್ಟಿಗೆ English ಬಂದ ವ್ಯಕ್ತಿ ಈತ . ಮಾಚಮ್ಮ ಎಂಬಾಕೆ ತನ್ನ ಮಗಳು ಕಾವೇರಿಯನ್ನು ಇತನಿಗೆ ಮದುವೆ ಮಾಡಿ ಮನೆ ಅಳಿಯನನ್ನಾಗಿ ಮಾಡಿಕೊಂಡಿರುತ್ತಾಳೆ. ಯಾವುದೇ ಕೆಟ್ಟ ಚಟಗಳಿಲ್ಲದ ಬೋಬಣ್ಣ ಸಭ್ಯ ವ್ಯಕ್ತಿಯೇ . ಆದರೆ ಅವನಿಗೆ Post officeಗೆ ಬಂದ ಪತ್ರಗಳನ್ನೆಲ್ಲ ಓದುವ ಖಯಾಲಿ . ಬಂದ ಪತ್ರಗಳನ್ನೆಲ್ಲ ‘ಜಾಜಿಕಾಯಿ ‘ ಪೆಟ್ಟಿಗೆಯ ಒಳಗೆ ಹಾಕುವ ವ್ಯವಸ್ತೆ . ಬಂದವರೆಲ್ಲ ತಮಗೇನಾದರೂ ಪತ್ರವಿದೆಯ ಎಂದು ಆ ಪೆಟ್ಟಿಗೆಯನ್ನು ತಡಕಾಡಿ ಹಾಗೆ ಬೇರೆಯವರ ಪತ್ರಗಳನ್ನು ಓದಿ ಮಜಾ ತೆಗೆದುಕೊಳ್ಳುವ ಪರಿಪಾಟ. ‘ಅಜೀಜ’ ಎಂಬಾತನಿಗೆ ಬಂದ coverನ್ನು ಒಡೆದು ಅದರಲ್ಲಿದ್ದ ನಗ್ನ ಮಹಿಳೆಯ ಚಿತ್ರವನ್ನು ನೋಡಿ ಬೋಬಣ್ಣನ ಮನಶಾಂತಿ ಕೆಡುತ್ತದೆ . ಅತ್ತೆ ಮಾಚಮ್ಮ , ಅಳಿಯ ತನ್ನಿಂದ ತನ್ನ ಮಗಳನ್ನು ದೂರ ಮಾಡುತ್ತಿದ್ದಾನೆಂದು ತಿಳಿದು ಮಗಳಿಗೆ ಇಲ್ಲ ಸಲ್ಲದ್ದನ್ನು ಹೇಳಿ ಅವನ ಮೇಲೆ ತಿರಸ್ಕಾರ ಬರುವಂತೆ ಮಾಡುತ್ತಾಳೆ. ಇದರ ಮಧ್ಯೆ ಬೆಲಾಯದ ಎಂಬಾತನಿಗೆ ಬಂದ ಪತ್ರದಿಂದ ಬೋಬಣ್ಣ ಫಜೀತಿಗೆ ಇಡಾಗುತ್ತಾನೆ. ಕೊನೆಯಲ್ಲಿ ಜನರ ಥಳಿತಕ್ಕೆ ಒಳಗಾಗಿ ಒಬ್ಬನೇ ಊರು ಬಿಡಬೇಕಾದ ಅನಿವಾರ್ಯ ಪರಿಸ್ತಿತಿ ಬೋಬಣ್ಣನಿಗೆ !!
ಅವನತಿ;
ಇಸ್ಲಾಪುರ , ಇತ್ತಾವರ , ಜೋಗತಿಪೇಟೆ , ಮಾಲೂರು ಈ ನಾಲ್ಕೈದು ಹಳ್ಳಿಗಳ ಸುತ್ತ ನಡೆಯುವ ಕತೆ . ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ , ಯಾವ ಬದಲಾವಣೆಯನ್ನು ಬಯಸದೆ , ಯಾರೊಂದಿಗೂ ದನಿ ಎತ್ತದೆ ಬದುಕುವ ಜನ ಈ ಹಳ್ಳಿಯವರು . ಇಸ್ಲಾಪುರದ ಸೂರಾಚಾರಿ ಮತ್ತು ಇತ್ತಾವರದ ಸುಬ್ಬಣ್ಣನ ಹೆಂಡತಿ ಗೌರಿ ಈ ಕಥೆಯ ಪ್ರಮುಖ ಪಾತ್ರಗಳು .
ಹೆಂಡತಿಗೆ ಪೀಡೆ ತಗುಲಿ ಊರು ಬಿಡಲಾಗದೆ ಬಳಲುತ್ತಿದ್ದ ಸುರಾಚಾರಿ ಒಂದು ಕಡೆ. ಸುತ್ತ ಹಳ್ಳಿಯಲ್ಲೇ ಅತಿ ಸುಂದರಿಯಾಗಿದ್ದರು ತನ್ನ ಸೌಂದರ್ಯದ ಪರಿವಿಲ್ಲದೆ ಸಾಯುತ್ತಿರುವ ತನ್ನ ಹಸು ಮಕ್ಕಳನ್ನು ನೋಡಿ ಮರುಗುತ್ತ ಗಂಡ ಸುಬ್ಬಣ್ಣನ ಜೊತೆ ಬಾಳುತ್ತಿರುವ ಗೌರಿ ಒಂದು ಕಡೆ.
ಹೀಗೆ ಎಲ್ಲರನ್ನು ಇಕ್ಕಟ್ಟಾಗಿ ಜೋಡಿಸಿ ಕತೆ ಹೆಣೆದಿದ್ದಾರೆ ತೇಜಸ್ವಿಯವರು.
ಕುಬಿ ಮತ್ತು ಇಯಾಲ;
ಬೈರಪುರದಲ್ಲಿ ಬಾಯಮ್ಮ & ಒಬ್ರಿನರ ಮಗಳು ಇಯಾಲ ಯಾರೋ ದುಷ್ಕರ್ಮಿಗಳ ಅತ್ತ್ಯಚಾರಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುತ್ತಾಳೆ . ಚಿರಯೌವ್ವನದ ಈ ಸುಂದರ ಕನ್ಯೆಯ ಸಾವಿಗೆ ಅತಿ ಸಂಕಟ ಪಟ್ಟವರೆಂದರೆ ಬಾಯಮ್ಮ, ಒಬ್ರಿನ ಮತ್ತು ಕುಬಿ ಡಾಕ್ಟರ. ಕುಬಿ ಡಾಕ್ಟರ ಇಡಿ ಬೈರಪುರದಲ್ಲೇ ಅತಿ ಬುದ್ದಿವಂತ ಹಾಗೆ ಗ್ರಾಮದ ಜನರ ಕಷ್ಟ ಸುಖಗಳನ್ನು, ಅನ್ಯಾಯಗಳನ್ನು ಕಂಡು ಕರುಬುವ ವ್ಯಕ್ತಿ. ‘ಒಳ್ಳೆಯ’ ಕೈ ಗುಣ ಹೊಂದಿದ ಡಾಕ್ಟರ. ಇಯಾಲ ಊರ ರಾಜಕೀಯಕ್ಕೆ ಬಲಿಯಾಗಿದ್ದು ಎಂದು ಹೇಗೋ ಕುಬಿಗೆ ತಿಳಿಯುತ್ತದೆ. ಈ ಕೊಲೆಯನ್ನು ಊರಿನ ಬಡ ಹಮಾಲರ ಮೇಲೆ ಹಾಕುವ ಸಂಚಿನಲ್ಲಿರುತ್ತಾರೆ ಊರ ಹಿರಿಯ ರಾಮರಾಯ. ಸತ್ಯ ತಿಳಿಯುವುದಕ್ಕಿಂತ ಮೊದಲೇ ಹಮಾಲರು ರಾತ್ರೋ ರಾತ್ರಿ ಊರು ಬಿಟ್ಟು ಹೊರಡುತ್ತಾರೆ.
ತುಕ್ಕೋಜಿ;
ತುಕ್ಕೋಜಿ ಒಬ್ಬ ದರ್ಜಿ. ಗುರುಗಳ್ಳಿ ಎಂಬ ಹಳ್ಳಿಯಲ್ಲಿ ದರ್ಜಿಯಾಗಿ ಕೆಲಸ ಮಾಡುವ ಈತ ಕಾಲ ಬದಲಾವಣೆಗೆ ತಕ್ಕಂತೆ ಬಟ್ಟೆಗಳನ್ನು ವಿಭಿನ್ನವಾಗಿ ಹೊಲಿದು ಜನರಿಗೆ ಪ್ರೀತಿ ಪಾತ್ರನಾಗಿರುತ್ತಾನೆ. ಇವನು ಹೊಲಿದ ಬಟ್ಟೆಗಳೆಲ್ಲ ಸರಿಯಾಗಿ ಅಳತೆಗೆ ತಕ್ಕಂತೆ ಜನರಿಂದ ಒಂದು ದೂರು ಇಲ್ಲದಂತೆ ಜನರ ಚರ್ಮದ ಜೊತೆ ಬಟ್ಟೆಗಳು ಹೊಂದಿಕೊಂಡು ಬಿಡುತ್ತಿದ್ದವು. ತನ್ನ ಆಸ್ತಿ, ತಂದೆ ತಾಯಿಯನ್ನು ನಿರ್ಲಕ್ಷಿಸಿ ತುಕ್ಕೋಜಿ ಒಬ್ಬ ವಿಧವೆಯ ಮಗಳಿಗೆ ಬಾಳು ಕೊಡುತ್ತಾನೆ. ಸರೋಜಳ ಅದ್ರಷ್ಟವೋ ಏನೋ ಮದುವೆಯ ನಂತರ ತುಕ್ಕೊಜಿಯ ಹೆಸರು ಇನ್ನು ಪ್ರಸಿದ್ದಿಯಾಗುತ್ತದೆ. ಗಂಡ ಹೆಂಡತಿಗೆ ಮೂರು ಹೊತ್ತು ಹೊಲಿಯುವುದೇ ಕಾಯಕ. ಈ ಸುಖ ಸಂಸಾರಕ್ಕೆ ಮಗು ಬಂದಾಗ ಪರಿಣಾಮ ತುಕ್ಕೊಜಿಯ ಹೊಲಿಗೆ ವ್ಯಾಪಾರದ ಮೇಲೆ ಉಂಟಾಗುತ್ತದೆ. ಮೊದಲಿನಂತೆ ಅವನ ಅಳತೆ ಸರಿಯಾಗಿ ಕೂರದೆ ಜನ ಕಡಿಮೆ ಆಗತೊಡಗುತ್ತಾರೆ. ತುಕ್ಕೋಜಿ ನೋಡಿಕೊಳ್ಳಲಿ ಎಂದು ಸರೋಜಾ, ಸರೋಜಳಿಗೆನು ಕೆಲಸ ಅವಳೇ ನೋಡಿಕೊಳ್ಳಲಿ ಎಂದು ತುಕ್ಕೋಜಿ.. ಹೀಗೆ ಇಬ್ಬರು ಮಗು ಕಿಟ್ಟುವನ್ನು ಅಲಕ್ಷಿಸುತ್ತಾರೆ. ಆದರೆ ಒಂದು ದಿನ ಡ್ರೈವರ್ ಒಬ್ಬ ರಸ್ತೆಯಲ್ಲಿ ಆಡುತಿದ್ದ ಕಿಟ್ಟುನನ್ನು ಕರೆದುಕೊಂಡು ಹೋದಾಗ ಅವರಿಬ್ಬರಿಗೂ ಮಗುವಿನ ಮೇಲಿನ ಪ್ರೇಮ ಮರಳಿ ಬರುತ್ತದೆ.
Dare Devil ಮುಸ್ತಾಫಾ;
ಕೋಮು ಸೌಹಾರ್ದತೆ ಇರದ ಊರಿನ ಕಾಲೇಜ್ ನಲ್ಲಿ ಮುಸ್ತಾಫಾ ಎಂಬ ಯುವಕ ಸೇರಿಕೊಳ್ಳುತ್ತಾನೆ. ಬರಿ ಹಿಂದುಗಳೇ ತುಂಬಿದ್ದ ಆ ಕಾಲೇಜ್ ನಲ್ಲಿ ಮುಸ್ತಾಫಾ ಒಬ್ಬನೇ ಮುಸ್ಲಿಂ. ಗಣೇಶ ಹಬ್ಬ ಮತ್ತು ಮೊಹರಂ ದಿನಗಳಂದು ನಡೆಯುವ ಕೋಮು ಗಲಭೆ ಹಿಂದೂ ಮುಸ್ಲಿಂ ಮಧ್ಯೆ ದೊಡ್ಡ ಕಂದಕವನ್ನು ಉಂಟು ಮಾಡಿರುತ್ತದೆ. ಸ್ವಾಭಾವಿಕವಾಗಿ ಮುಸ್ತಾಫಾನನ್ನು ಎಲ್ಲರು ದೂರ ಇಡಲು ಪ್ರಯತ್ನಿಸುತ್ತಾರೆ. ಆದರೆ ಗಣೇಶನ ಹಬ್ಬದ ದಿನ ಆದ ಘಟನೆಯೊಂದು ಮುಸ್ತಾಫಾನನ್ನು ಎಲ್ಲರ ಹತ್ತಿರ ತರುತ್ತದೆ. ಗಣೇಶನ ಹಬ್ಬದ ದಿನದಂದು ಪಂಜಿನ ಕೊಳ್ಳಿಯಿಂದ ಬಸವನ ಥಡಿಗೆ ಬೆಂಕಿ ತಾಗಿ ಅದು ಹುಚ್ಚು ಹಿಡಿದಂತೆ ಜನಗಳ ಮೇಲೆಲ್ಲಾ ನುಗ್ಗಿ ಮೆರೆವಣಿಗೆಯಲ್ಲಿ ಹಾಹಾಕಾರ ಎಬ್ಬಿಸುತ್ತದೆ. ಇಂತ ಸಮಯದಲ್ಲಿ ಮುಸ್ತಾಫಾ ಮುಂದೆ ನುಗ್ಗಿ ಬಸವನನ್ನು ಹಿಡಿದು ಪರಿಸ್ತಿತಿಯನ್ನು ತಹಂಬದಿಗೆ ತರುತ್ತಾನೆ.
(ಇದನ್ನು ಓದಿದ ನಂತರ ನನಗೆ ಅಬ್ದುಲ್ ಕಲಾಂರ ಜೀವನ ಕತೆ ನೆನಪಾಯಿತು. ಅಬ್ದುಲ್ ಕಲಾಂರ ತಂದೆ ಕೂಡ ಮುಸ್ಲಿಂ ಆಗಿದ್ದರೂ ಸಹ ಹೊಂಡಕ್ಕೆ ಬಿದ್ದ ವಿಗ್ರಹವನ್ನು ಎತ್ತಿ ಊರ ಜನರ ಪ್ರೀತಿಗೆ ಪಾತ್ರರಾಗಿರುತ್ತಾರೆ).
ತಬರನ ಕಥೆ;
ಬ್ರಿಟಿಷ ಆಳ್ವಿಕೆಯ ಸಮಯದಲ್ಲಿ ತಬರನೆಂಬ ವ್ಯಕ್ತಿ ಪದುಗೆರೆ ಊರಿನಲ್ಲಿ ಸರಕಾರೀ ನೌಕರನಾಗಿರುತ್ತಾನೆ. ಸುಂಕ ವಸುಲಿಯ ಕೆಲಸ ತಬರನದು. ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಹೊತ್ತಿಗೆ ತಬರನನ್ನು ಮುನ್ಸಿಪಾಲಿಟಿಯ ಜವಾನನ್ನಾಗಿ ಮಾಡುತ್ತಾರೆ. ಇವನ ಹುದ್ದೆ ಯಾವುದೆಂದು ತೀರ್ಮಾನಿಸುವ ಹೊತ್ತಿಗೆ ತಬರ ನಿವೃತ್ತಿಯ ಸಮೀಪಕ್ಕೆ ಬಂದಿರುತ್ತಾನೆ. ತಬರನ ಹೆಂಡತಿಗೆ ಸಕ್ಕರೆ ಕಾಯಿಲೆ ಬಂದು ಕಾಯಿಲೆ ವಾಸಿಯಾಗಲು ತಬರ ಸುಮಾರು ದುಡ್ಡು ಸುರಿಯಬೇಕಿರುತ್ತದೆ. ಇದಕ್ಕಾಗಿ ಆತ ತನ್ನ ಪ್ರಾವಿಡೆಂಟ್ ಫಂಡ್ ನ್ನು withdraw ಮಾಡಲು ಹೆಣಗುತ್ತಾನೆ. ಬ್ರಿಟಿಷರ ಆಡಳಿತದಲ್ಲಿ ಎಲ್ಲವು ಸರಿಯಾಗಿ ಶಿಸ್ತಿನಿಂದ ಇದ್ದ ಆಡಳಿತ ಸ್ವತಂತ್ರ ಸಿಕ್ಕ ನಂತರ ಬರಗೆಟ್ಟು ಹೋಗುತ್ತದೆ. ತಬರ ದಿನ ರಾತ್ರಿ ಅಲೆದರು ಅರ್ಜಿ ಮೇಲೆ ಅರ್ಜಿ ಹಾಕಿದರು ದುಡ್ಡು ಸಿಗದೇ ಆತನ ಹೆಂಡತಿ ಸತ್ತು ಹೋಗುತ್ತಾಳೆ . ಕೊನೆಗೆ ತಬರ ಹುಚ್ಚನಾಗುತ್ತಾನೆ.
ತ್ಯಕ್ತ:
ಈ ಕತೆಯ ಉದ್ದಕ್ಕೂ ‘ನಾನು’ ಎಂಬಾತ ತನ್ನ ಊರು, ತನ್ನ ಯೋಚನೆಗಳು, ತನಗೂ ಬೇರೆಯವರಿಗೂ ಇರುವ ಅಂತರ, ಬೇರೆಯವರು ತನ್ನನ್ನು ವಿಚಿತ್ರವಾಗಿ ನೋಡುವ ಪರಿ ಎಲ್ಲವನ್ನು ವಿವರಿಸುತ್ತ ಹೋಗುತ್ತಾರೆ. ವಿವರ ತಿಳಿಯಲು ದಯವಿಟ್ಟು ಕಾದಂಬರಿ ಓದಿ. 🙂
ಪೂರ್ಣ ಚಂದ್ರರ ಕಥೆಗಳೇ ಹಾಗೆ ನಿಸರ್ಗದ ಜೊತೆಗೆ ಜನರ ಮನದಲ್ಲಿ ಹೊಕ್ಕು ಅಲ್ಲಿರುವ ಒಳ್ಳೆಯ ಕೆಟ್ಟ ಭಾವನೆಗಳನ್ನೆಲ್ಲಾ ಮೇಳೈಸಿ ಓದುಗನಿಗೆ ಹೊಸ ಹೂರಣ ನೀಡುತ್ತದೆ. ನನಗಂತೂ ಅವರ ಪುಸ್ತಕಗಳೆಂದರೆ ಹಬ್ಬ . ನಂತರ ಹೀಗೆ ಅದರ ಬಗೆಗೆ ಬರೆಯುವಾಗ ಮತ್ತೊಮ್ಮೆ ನೆನೆಸಿ ಕೊಂಡು ಎಲ್ಲದರ ಸಾರಾಂಶವನ್ನು ಜೀರ್ಣಿಸಿಕೊಂಡ ಹಾಗೆ ಅನಿಸುತ್ತದೆ ಅಲ್ಲವೇ ?? ನೀವು ನಿಗೂಢ ಮನುಷ್ಯರು ಕಥಾಸಂಕಲನ ಮತ್ತು ಕರ್ವಾಲೋ ವನ್ನು ದಯವಿಟ್ಟು ಓದಿ … ಅವರ ಯಾವುದೇ ಪುಸ್ತಕ ಸಿಕ್ಕಿದರೂ ಓದಿ
Hmm.. ಈಗ ಮುನಿಶಾಮಿ ಮತ್ತು ಮಾಗಡಿ ಚಿರತೆ ಶುರು ಮಾಡಿದೀನಿ…. ಅವರು ವಿವರಿಸುವ ಶೈಲಿ ಬಲು ಸೊಗಸು..
“http://www.goodreads.com/book/show/124861._Abachurina_Post_Office” ಈ ಸೈಟ್ ಅಲ್ಲಿ ಏರೋ ನಿಮ್ಮ್ ಕಾಮೆಂಟ್ ನೋಡಿ ಇಲ್ಲಿಗೆ ಬಂದೆ .. ನಿಮ್ಮ್ ಬ್ಲಾಗ್ ನೋಡಿ “ಅಬಚೂರಿನ ಪೋಸ್ಟಾಫೀಸು ” ಖಂಡಿತ ಓದುತ್ತೀನಿ .
ಮಹಾ ಪಲಾಯನ was my first novel of ಕೆ ಪಿ ಪೂರ್ಣಚಂದ್ರ ತೇಜಸ್ವಿ .
ಓದಿದ ನಂತರ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.. 🙂