ಜನನಿ ಜನ್ಮಭೂಮಿ (Janani Janmabhoomi) – ಸಾಯಿಸುತೆ
ಕಾದಂಬರಿಯ ಶೀರ್ಷಿಕೆ ನೋಡಿ ಇದು ಯಾವುದೊ ಸೈನಿಕನ ಅಥವಾ ರಾಜಕೀಯಕ್ಕೆ ಸಂಬಂಧ ಪಟ್ಟ ಕಥೆ ಇರಬಹುದು ಅಂತ ಕೈಗೆತ್ತಿಕೊಂಡೆ. ಆದರೆ ಮುನ್ನುಡಿ ನೋಡಿ ಗೊತ್ತಾಗಿದ್ದು ಇದು ಅಮೆರಿಕಾನಿಂದ ಭಾರತಕ್ಕೆ ತನ್ನ ತಂದೆ ತಾಯಿಯನ್ನು ಹುಡುಕಿಕೊಂಡು ಬರುವ ಹೆಣ್ಣಿನ ಕಥೆ ಅಂತ.
ಕುತೂಹಲವೆನಿಸಿತು… ಅವತ್ತೇ ಓದಲು ಶುರು ಮಾಡಿದೆ. ನನ್ನನ್ನು ಯಾವುದೇ ರೀತಿಯಲ್ಲೂ ನಿರಾಶೆಗೊಳಿಸಲಿಲ್ಲ ಈ ಕಾದಂಬರಿ. ಇದರಲ್ಲಿ ಭವ್ಯ ಭಾರತದ ಬಡತನದ ಚಿತ್ರಣವಿದೆ. ನಾವೆಲ್ಲೇ ಹೋದರು ಎಷ್ಟೇ ಸಿರಿವಂತಿಕೆಯಿಂದ ಬಾಳಿದರೂ ಹುಟ್ಟಿನ ಬೇರು ನಮ್ಮನ್ನು ಮರಳಿ ಭಾರತಕ್ಕೆ ಕರೆ ತರುತ್ತದೆ ಎನ್ನುವುದಕ್ಕೆ ಸಾಕ್ಷಿಯಿದೆ . ಈ ಕಥೆಯ ನಾಯಕಿ ರೂಥ್ ಹಸುಗುಸಿದ್ದಾಗ ಅನಾಥಾಶ್ರಮಕ್ಕೆ ಬಂದ ಮಗು. ಅಲ್ಲಿಂದ ಅಮೆರಿಕನ್ ದಂಪತಿಗಳು ಇವಳನ್ನು ದತ್ತು ತೆಗೆದುಕೊಂಡು ಹೋಗಿ ಸಾಕುತ್ತಾರೆ. ಪಾಲಕರ ಪ್ರೀತಿ ಪೋಷಣೆ ಕೊಟ್ಟು ಸ್ವಾವಲಂಬಿಯನ್ನಾಗಿ ಮಾಡಿ ಇವಳಿಗೆ ಯಾವುದಕ್ಕೂ ಕೊರತೆಯಿಲ್ಲದಂತಹ ಜೀವನ ನಡೆಸಲು ಸಹಕರಿಸುತ್ತಾರೆ. ಸಕಲ ಸೌಲಭ್ಯಗಳಿರುವಂತಹ ಅಪಾರ್ಟ್ ಮೆಂಟ್ ನಲ್ಲಿ , ತನ್ನದೇ ಕಾರಿನಲ್ಲಿ ಓಡಾಡಿಕೊಂಡು , ಕೈ ತುಂಬಾ ಸಂಬಳ ಬರುವ ಕೆಲಸವಿದ್ದರೂ ರೂಥ್ ನಲ್ಲಿ ಏನೋ ಕೊರತೆ .. ತನ್ನ ತಾಯನಾಡನ್ನು ನೋಡುವ ಹಂಬಲ.. ಜನ್ಮಕ್ಕೆ ಕಾರಣರಾದ ತಂದೆ ತಾಯಿಗಳನ್ನು ನೋಡಬೇಕೆನ್ನುವ ಕಾತುರ. ಇದು ಅಸಾಧ್ಯ ಅಂತ ಗೊತ್ತಿದ್ದರು ಅಮೆರಿಕನ್ ತಾಯಿ ತಂದೆಗಳ ಮಾತು ಮೀರಿ ಭಾರತಕ್ಕೆ ಬಂದಿಳಿಯುತ್ತಾಳೆ ಸುಂದರ ಮುಖದ ಕನ್ಯೆ .. ಅವಳ ಕಲ್ಪನೆಯ ಚಿತ್ರಣದ ಭಾರತವೇ ಬೇರೆ .. ನಿಜ ಸ್ವರೂಪದ ಭಾರತವೇ ಬೇರೆ..
ಕಾದಂಬರಿ ಉದ್ದಕ್ಕೂ ನವನೀತ್ , ಅನಿಕೇತ್ ಸುಳಿಯುತ್ತಾರೆ. ತುಂಬಾ ಓದಿಕೊಂಡಿದ್ದರೂ ಬಡತನದ ಕಟ್ಟುಪಾಡಿಗೆ ಬಲಿಯಾಗಿ ಟ್ಯಾಕ್ಸಿ ಓಡಿಸುವ ನವನೀತ್ ಒಂದು ಕಡೆ ಆದರೆ , ಕೋಟ್ಯಂತರ ಆಸ್ತಿಯ ಒಡೆಯ ಅನಿಕೇತ ಒಂದು ಕಡೆ. ಆದರೆ ನವನೀತನ ಬದುಕಿನಲ್ಲಿ ನೆಮ್ಮದಿಯಿದೆ , ತಾಯಿ ತಂಗಿಯರ ವಾತ್ಸಲ್ಯವಿದೆ. ಅನಿಕೇತ್ ಎಲ್ಲ ಇದ್ದರೂ ಪ್ರೀತಿ , ವಾತ್ಸ್ಯಲ್ಲಕ್ಕಾಗಿ ಪರಿತಪಿಸುತ್ತಿರುವ ಜೀವಿ. ಭಾರತಕ್ಕೆ ಬಂದು ರೂಥ್ ಸಖಿ ಆಗಿ ಬದಲಾಗುತ್ತಾಳೆ. ಅವಳಿದ್ದ ಅನಾಥಾಶ್ರಮ ಹಾಳು ರಾಜಕೀಯಕ್ಕೆ ಬಲಿಯಾಗಿ ಸಿನಿಮಾ ಥೀಯೇಟರ್ ಆಗಿ ಮಾರ್ಪಾಡ ಆಗಿರುತ್ತದೆ. ತುಂಬು ಸಮದ್ರದಲ್ಲಿ ದಡ ಸೇರುವ ಬಯಕೆಯಿಂದ ಮುಳುಗಿದ ಸಖಿಗೆ ಸಿಕ್ಕ ಹುಲ್ಲು ಕಡ್ಡಿಗಳೇ ಆಸರೆ.
ಕಡಿಮೆ ಕಾಲಾವಧಿಯಿಟ್ಟುಕೊಂಡು ಬಂದ ಸಖಿಗೆ 2 ತಿಂಗಳು ಕಳೆದರು ಯಾವುದೇ ಮಾಹಿತಿ ಸಿಗುವುದಿಲ್ಲ. ನಿರಾಶಳಾದರು ಎಡ ಬಿಡದೆ ಗುರಿ ಮುಟ್ಟುವ ಛಲ ಅವಳದು . ಹೆಂಡತಿಯಲ್ಲಿ ಸಿಗದ ಆತ್ಮ ಸಂಭಂದವನ್ನು ಅನಿಕೇತ್ ಸಖಿಯಲ್ಲಿ ಕಾಣುತ್ತಾನೆ. ನವನೀತನಿಗೆ ಸತ್ತ ತಂಗಿಯ ನೆನಪನ್ನು ಮರುಕಳಿಸುತ್ತಾಳೆ ಸಖಿ. ಹೀಗೆ ಪ್ರೀತಿಯ ಸಾಮರಸ್ಯವಿದೆ, ಬದುಕಿನಲ್ಲಿ ಎಲ್ಲವೂ ಏಕ ಕಾಲಕ್ಕೆ ಸಿಗುವುದಿಲ್ಲ, ಈ ವಿಷಯದಲ್ಲಿ ಯಾರು ಸುಖಿಗಳಲ್ಲ ಆದರೆ ಇರುವುದನ್ನು ಖುಷಿಯಿಂದ ಅನುಭವಿಸಬೇಕು ಎನ್ನುವ ನೀತಿ ಪಾಠವಿದೆ.
ಸಖಿ ತಂದೆ ತಾಯಿಗಳನ್ನು ನೋಡುತ್ತಾಳಾ ಅಥವಾ ಪುನಃ ರೂಥ್ ಆಗಿ ಅಮೆರಿಕಾಗೆ ಮರಳುತ್ತಾಳಾ ಎನ್ನುವುದೇ ಕಥೆಯ ಕೊನೆ.
ಬಿಡುವಿದ್ದಾಗ ಓದಿ ನಿಮ್ಮ ಅಭಿಪ್ರಾಯ ತಿಳಿಸಿ.
ಜನನಿ ಜನ್ಮಭೂಮಿ ನನ್ನ ಅಚ್ಚುಮೆಚ್ಚಿನ ಕಾದಂಬರಿಗಳಲ್ಲೊಂದು 🙂 ಫೇಸ್ಬುಕ್ ಪೇಜೊಂದರಿಂದ ಡೌನ್ಲೋಡ್ ಮಾಡಿ ಓದಿದ್ದು. ನನಗೆ ನೆನಪಿರುವಂತೆ ಅದು ಸಾಯಿಸುತೆಯವರ ಕಾದಂಬರಿ … ನೀವು ತ್ರಿವೇಣಿಯವರ ಕಾದಂಬರಿ ಅಂತ ಉಲ್ಲೇಖಿಸಿರೋದ್ರಿಂದ , ನಿಮ್ಮ ಬಳಿ ಪುಸ್ತಕ ಇದ್ರೆ ದಯವಿಟ್ಟು ಇದು ಯಾರ ಕಾದಂಬರಿ ಅಂತ ತಿಳಿಸ್ತೀರ?Just for clarification 🙂 Bdw, ಸಖಿಯನ್ನ ನೆನಪಿಸಿದ್ದಕ್ಕಾಗಿ ಧನ್ಯವಾದ. Nicely written .
Thanks for your comment Madhu:) ಈ ಕಾದಂಬರಿ ನಾನು ಬಹಳ ಹಿಂದೆ ಓದಿದ್ದು. ಬ್ಲಾಗ್ ಬರೆಯುವಾಗ ಒಂದಷ್ಟು ಕಾದಂಬರಿಗಳು ಮನಸಲ್ಲಿ ಮೂಡಿ ಈ ಕಾದಂಬರಿಯೊಂದಿಗೆ ಶುರು ಮಾಡುವ ಮನಸಾಯಿತು.ಅದೇ ಗೊಂದಲದಲ್ಲಿ ಸಾಯಿಸುತೆ ಬದಲು ತ್ರೀವೇಣಿ ಅಂತ ತಪ್ಪಾಗಿ ಬರೆದಿದ್ದು. ಪ್ರಮಾದಕ್ಕಾಗಿ ಕ್ಷಮೆ ಇರಲಿ & ಸರಿ ಮಾಡಿಸಿದ್ದಕ್ಕಾಗಿ ಅನಂತ ಧನ್ಯವಾದಗಳು.
ಕ್ಷಮೆ ಬಹಳ ದೊಡ್ಡ ಪದ! ನಾನೂ ಬಹಳ ಹಿಂದೆ ಓದಿದ್ದು ಈ ಕಾದಂಬರಿಯನ್ನ… ನಾನೇ ತಪ್ಪಾಗಿ, ತ್ರಿವೇಣಿಯವರ ಕಾದಂಬರಿಯನ್ನ ಸಾಯಿಸುತೆಯವರದ್ದು ಅಂತ ಭಾವಿಸದ್ನೇನೊ ಎಂದೆನಿಸಿ clarification ಕೇಳಿದ್ದು ಅಷ್ಟೆ. ಒಂದಿಬ್ಬರು ಸ್ನೇಹಿತರಿಗೆ ಇದು ಸಾಯಿಸುತೆಯವರ ಕಾದಂಬರಿ ಅಂತ ಹೇಳಿ, ಕಾದಂಬರಿ ಓದಲು ಹೇಳಿದ್ದೆ. ಆ ಕಾರಣಕ್ಕೆ ಕೇಳಿದ್ದು ಅಷ್ಟೆ 🙂 ‘ಸಂಜೋತ’ , ಅಪರೂಪ ಮತ್ತು ಅಂದದ ಹೆಸರು. ನಿಮ್ಮ ಬ್ಲಾಗಿಂಗ್ ಪಯಣ ಕೂಡ ಸುಂದರವಾಗಿರಲಿ 🙂 ಪ್ರತಿಕ್ರಿಯೆಗೆ ಧನ್ಯವಾದ 🙂
Thanku So Much! 🙂