ಬಿದಿಗೆ ಚಂದ್ರಮ ಡೊಂಕು — M.K.ಇಂದಿರಾ
ಒಂದು ಸುಶೀಲ, ಸಜ್ಜನಿಕೆಯ ಹೆಣ್ಣಿನ ಕಥೆಯ simple ಕಾದಂಬರಿ. ಮುಖ್ಯ ಪಾತ್ರದಲ್ಲಿ ನಾಯಕಿ ಬೃಂದಾ ಮನಸನ್ನು ಆವರಿಸಿಕೊಳ್ಳುತ್ತಾಳೆ ಕಥೆಯ ಉದ್ದಗಲಕ್ಕೂ.
ಬ್ರಂದಾಳ ತಂದೆ ಸೀತಾರಾಮಯ್ಯನವರು ದಾಯದಿಗಳ ಮೋಸಕ್ಕೆ ಬಲಿಯಾಗಿ ಇದ್ದ ಬದ್ದ ಆಸ್ತಿಯನ್ನೆಲ್ಲ ಕಳೆದುಕೊಂಡು ಕಡು ಬಡತನದಲ್ಲಿರುತ್ತಾರೆ. ಸಾಲದ್ದಕ್ಕೆ ಮನೆ ತುಂಬಾ ಮಕ್ಕಳು… ಮಕ್ಕಳ ಓದು, ಹೊಟ್ಟೆ ಬಟ್ಟೆ ಎಲ್ಲದಕ್ಕೂ ಅವರ ಚಿಕ್ಕ ಸಂಪಾದನೆ ಅಡಿಗೆ ಕೆಲಸ!!
ಹೆಂಡತಿ ತುಂಗಾಬಾಯಿ ಚಟ್ನಿ ಪುಡಿಗಳನ್ನು ಮಾರಿ ಗಂಡನಿಗೆ ಕೈಲಾದಷ್ಟು ಸಹಾಯ ಮಾಡುವ ಸಾಧ್ವಿ. ಇದೆಲ್ಲವನ್ನು ನೋಡುತ್ತಾ ಬೆಳೆದ ಬೃಂದಾ ಅತಿ ಸೂಕ್ಷ್ಮ ಮನಸಿನ ಹೆಣ್ಣು. ತಾನು ಕೂಡ ತಂದೆಗೆ ಸಹಾಯ ಮಾಡಲು ಓದನ್ನು ನಿಲ್ಲಿಸಿ ನರ್ಸರಿ ಶಾಲೆಯಲ್ಲಿ teacher ಆಗಿ ಕೆಲಸಕ್ಕೆ ಸೇರುತ್ತಾಳೆ. ಆದರೆ ಅದು ಕೂಡ ಅಲ್ಪ ಸಂಪಾದನೆಯೇ.
ನೀಳ ಜಡೆಯ, ಗೌರವರ್ಣದ ಬೃಂದಾ ಬಡತನದ ಬೇಗೆಯಲ್ಲಿದ್ದರೂ ತನ್ನ ರೂಪದಿಂದ ಗುಣ ಸ್ವಭಾವಗಳಿಂದ ಎಲ್ಲರನ್ನು ಆಕರ್ಷಿಸುವ ವ್ಯಕ್ತಿತ್ವ ಹೊಂದಿದವಳು. ಒಂದು ದಿನ ಅವಳ ಪಾಲಿಗೆ ಅದೃಷ್ಟ ದೇವತೆಯಾಗಿ ಸೀತಾಬಾಯಿ ಮದುವೆ ಮಂಟಪದಲ್ಲಿ ಸಿಗುತ್ತಾರೆ. ಅಗಾಧ ಸಿರಿವಂತಿಕೆಯ ಸೀತಾಬಾಯಿ ಸುದಾಮನಂತಿದ್ದ ಬೃಂದಾಳ ಬಾಳಲ್ಲಿ ಕೃಷ್ಣನಂತೆ ಒಲಿಯುತ್ತಾರೆ. ಅವಳ ರೂಪ ಸ್ವಭಾವಕ್ಕೆ ಮಾರು ಹೋಗಿ ಅವಳನ್ನು ತಮ್ಮ ಏಕೈಕ ಸುಪುತ್ರ ವಸಂತನಿಗೆ ತಂದುಕೊಳ್ಳುವ ಆಸೆ ಅವರದು. ಬೃಂದಾ ಕೂಡ ಇದರಿಂದ ತನ್ನ ತವರು ಮನೆಗೆ ಆರ್ಥಿಕವಾಗಿ ಸಹಾಯವಾಗಬಹುದು ಎಂದುಕೊಂಡು ಅದೇ ಶರತ್ತನ್ನು ಸೀತಾಬಾಯಿಯವರ ಮುಂದಿತ್ತು ಮುದುವೆಗೆ ಒಪ್ಪಿಕೊಳ್ಳುತ್ತಾಳೆ.
ಬಿದಿಗೆ ಚಂದ್ರಮ ಡೊಂಕಾದರೆ
ಬೆಳದಿಂಗಳು ಡೊಂಕೆ
ಕಬ್ಬಿನ ಗೆಣೆ ಡೊಂಕಾದರೆ
ಸಿಹಿ ಡೊಂಕೆ …..
ಇವು ವಸಂತ ಬರೆದಿರುವ ಅರ್ಥಭರಿತ ಸಾಲುಗಳು. ನಿಜ ಜೀವನದಲ್ಲೂ ಅಷ್ಟೇ. ನಾವುಗಳು ಯಾವಾಗಲು ಬಾಹ್ಯ ರೂಪವನ್ನು ನೋಡಿ ಮರುಳಾಗುತ್ತೆವೆಯೇ ಹೊರತು ಹೃದಯ ಸಿರಿವಂತಿಕೆಯನ್ನು ನೋಡುವುದಿಲ್ಲ. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಬೃಂದಾ ಮತ್ತು ಗೋದಾವರಿ ಗುಣದಲ್ಲಿ ತದ್ವಿರುದ್ದ.
ಅಗಾಧ ಸಿರಿವಂತರಾದರೂ ಸೀತಾಬಾಯಿ ಏಕೆ ಬೃಂದಾಳನ್ನು ಸೊಸೆಯಾಗಿ ತಂದುಕೊಳ್ಳುತ್ತಾರೆ. ತುಂಬಾ ಓದಿದ ವಸಂತನೇಕೆ ಕಡಿಮೆ ಓದಿದ ಬೃಂದಾಳನ್ನು ಮದುವೆಯಾಗಲು ಒಪ್ಪುತ್ತಾನೆ. ಬೃಂದಾಳ ತಂಗಿ ಗೋದಾವರಿಗೆ ಅಕ್ಕ & ಭಾವನ ಮೇಲೆ ತಿರಸ್ಕಾರವಿರಬೇಕಾದರೆ ವಸಂತನಿಗಿದ್ದ ಊನವಾದರೂ ಏನು. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಬೇಕಾದಲ್ಲಿ ಕಾದಂಬರಿಯನ್ನು ಓದಿ.