Author: Sanjota
ಅಮ್ಮನಿಗೊಂದು ಪತ್ರ
ಅಮ್ಮಾ, ಇಷ್ಟೊತ್ತಿಗೆ ನೀ ಬಹುಶಃ ಮಲಗಿರಬಹುದು. ಅದ್ಯಾಕೋ ಗೊತ್ತಿಲ್ಲ ತುಂಬಾ ನೆನಪಾಗುತ್ತಿದ್ದೀಯಾ.. ಏನೇನೋ ಹೇಳಬೇಕೆಂದುಕೊಂಡು ಪತ್ರ ಬರೆಯಲು ಕೂತರೆ ಅಕ್ಷರಗಳೇ ಸಿಗದೇ ಮನಸು ಒದ್ದಾಡುತ್ತಿದೆ. ನೀನಿಲ್ಲಿದ್ದಿದ್ದರೆ ನಿನ್ನ ಅಪ್ಪಿಕೊಂಡು ಬಿಡುತ್ತಿದ್ದೆ. ನಾನೇನು ಹೇಳದೆ ನಿನಗೆಲ್ಲವೂ ಅರ್ಥವಾಗಿ ಬಿಡುತ್ತಿತ್ತು. ಅದ್ಹೇಗೆ ನಿನಗೆ ನನ್ನ ಬಗ್ಗೆ ನನಗಿಂತಲೂ ಚೆನ್ನಾಗಿ ಗೊತ್ತಮ್ಮಾ?...