ಗ್ರಹಣ(Grahana)– S . L ಭೈರಪ್ಪ
ಭೂಮಿ ಮತ್ತು ಚಂದ್ರರು ತಮ್ಮ ತಮ್ಮ ಪಥಗಳಲ್ಲಿ ಸುತ್ತುವಾಗಾ ಚಂದ್ರನು ಭೂಮಿ ಮತ್ತು ಸೂರ್ಯರ ಮಧ್ಯೆ ಬಂದು ಸೂರ್ಯನನ್ನು ಮರೆ ಮಾಡಿದರೆ ಅದಕ್ಕೆ ಸೂರ್ಯ ಗ್ರಹಣವೆಂದು ಹೆಸರು..
ಈ ಸಾಲುಗಳಿಂದ ಶುರುವಾಗುತ್ತದೆ ಗ್ರಹಣ ಕಾದಂಬರಿ. ನಮ್ಮ ಸಮಾಜದಲ್ಲಿ ಪೂರ್ವ ಕಾಲದಿಂದಲೂ ಗ್ರಹಣದ ಬಗ್ಗೆ ಅಪಾರವಾದ ನಂಬಿಕೆಯಿದೆ ಶೃದ್ದೆಯಿದೆ.
ನನ್ನ ಅಜ್ಜಿ ಗ್ರಹಣದ ದಿನ ಮನೆಯಲ್ಲಿನ ನೀರನ್ನೆಲ್ಲ ಖಾಲಿ ಮಾಡಿ ಪಾತ್ರೆಗಳನ್ನು ಬೋರಲು ಹಾಕುತ್ತಿದ್ದುಂಟು. ಇವಾಗೆಲ್ಲ ನಲ್ಲಿಗಳು ಪಟ್ಟಣಗಳಲ್ಲದೆ ಹಳ್ಳಿಗಳನ್ನೂ ಆವರಿಸಿಕೊಂಡು ಈ ಪದ್ಧತಿ ಕಡಿಮೆಯಾಗುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಗ್ರಹಣ ಹಿಡಿಯುವ ಮುನ್ನವೇ ಊಟ ಮಾಡಿ, ಗ್ರಹಣ ಮುಗಿದ ನಂತರ ಸ್ನಾನ, ನಂತರ ಅಮ್ಮನ ಅಡುಗೆಯ ನಂತರ ನಾವೆಲ್ಲಾ ಊಟ ಮಾಡಿ ಮಲಗುತ್ತಿದ್ದ ನೆನಪು. ಸ್ನೇಹಿತರ ಜೊತೆಗೆ binocular ಹಿಡಿದುಕೊಂಡು ಆಕಾಶದತ್ತ ನೋಡುತ್ತಾ ಕಣ್ಣಿಗೆ ಕಾಣಿಸಿದ (ಕೆಲವೊಮ್ಮೆ ಕಾಣಿಸದೆ ಇದ್ದರೂ) ಗ್ರಹಣವನ್ನು ನಮ್ಮ ನಮ್ಮ ಮಾತುಗಳಲ್ಲಿ ಅದ್ಭುತವಾಗಿ ವರ್ಣಿಸುತ್ತಿದ್ದ ನೆನಪು ಇನ್ನು ಹಸಿರಾಗಿದೆ.
ಭೈರಪ್ಪನವರ ಈ ಕಾದಂಬರಿಯಲ್ಲಿ ಗ್ರಹಣದ ಬಗೆಗಿನ ಅಂಧ ಶ್ರುದ್ದೆಗಳ ಮತ್ತು ವಿಜ್ಞಾನದ ತುಲನೆಯಿದೆ.
ಒಂದು ದಿನ ‘ಜನ ಸೇವೆಯೇ ಈಶ ಸೇವೆ’ ಎಂದುಕೊಂಡ ಒಬ್ಬ ಹೆಸರಿಲ್ಲದ ವ್ಯಕ್ತಿ ಹಿಮಗಿರಿಗೆ ನದಿಯ ತಟದ ಮೇಲೆ ಬಂದಿಳಿಯುತ್ತಾನೆ. ಮಠ, ದೇವರು, ವಿಗ್ರಹಗಳ ಬಗ್ಗೆ ಅಪಾರ ನಂಬಿಕೆಯಿರಿಸಿಕೊಂಡ ಊರ ಜನರು ಈ ವ್ಯಕ್ತಿಯ ತೇಜಸ್ಸು, ಕಣ್ಣುಗಳಲ್ಲಿನ ಹೊಳಪನ್ನು ನೋಡಿ ಸ್ವಾಮಿ ಎಂದು ಕೂಗಲು ಶುರು ಮಾಡುತ್ತಾರೆ. ಪುಣ್ಯಕ್ಷೇತ್ರ ಎಂದು ಕರೆಯಿಸಿಕೊಳ್ಳುವ ಹಿಮಗಿರಿ ಮಠ 5 ತಲೆಮಾರುಗಳಿಂದ ಜೀರ್ಣೋದ್ಧಾರವಾಗದೆ ಪಾಳು ಬಿದ್ದಿರುತ್ತದೆ. ಹೊಸದಾಗಿ ಬಂದ ವ್ಯಕ್ತಿಗೆ ತನ್ನನ್ನು ಸ್ವಾಮಿ ಅಂತಲೂ, ಮಠದ ಉದ್ಧಾರಕ ಎಂತಲೂ ಕರೆಯಿಸಿಕೊಳ್ಳುವ ಇಚ್ಚೆಯಿಲ್ಲದಿದ್ದರು ಜನರ ನಂಬಿಕೆಯನ್ನೇ ಬಂಡವಾಳವನ್ನಾಗಿಸಿ ಹಿಮಗಿರಿಯ ಸುತ್ತಲಿನ ಪ್ರದೇಶಗಳಲ್ಲಿ ಶಾಲೆಗಳನ್ನು ತೆರೆಯುತ್ತಾನೆ. ಇದಕ್ಕಾಗಿ ಸುತ್ತ ಮುತ್ತ ಹಳ್ಳಿಗಳಿಂದ ಸ್ವಾಮಿಗಳ ಹೆಸರಿನಲ್ಲಿ ಚಂದ ಎತ್ತುತ್ತಾರೆ. 20 ವರ್ಷಗಳ ಸುಧೀರ್ಘ ಕಾಲಮಾನದಲ್ಲಿ ಸ್ವಾಮಿಯ ಮುಂದಾಳತ್ವದಲ್ಲಿ ಊರಿನಲ್ಲಿ ಆಸ್ಪತ್ರೆ college ಗಳು ತೆರೆಯುತ್ತವೆ.
ಆದರೆ ಒಂದು ದಿನ ಸ್ವಾಮಿಗೆ ಇದ್ದಕ್ಕಿದ್ದಂತೆ ಗೃಹಸ್ಥನಾಗುವ ಮನಸಾಗಿ ಆಸ್ಪತ್ರೆಯ doctor ಸರೋಜಳ ಜೊತೆ ಮದುವೆಯಾಗುವ ವರ್ತಮಾನವನ್ನು ಊರಿನ ಮುಂದಿಡುತ್ತಾರೆ. ಇಡಿ ಊರಿಗೆ ಊರೇ ಬೆಚ್ಚಿ ಬೀಳುತ್ತದೆ.
ಸ್ವಾಮಿಗಳಿಗೆ ಗ್ರಹಣ ಹಿಡಿದುಕೊಂಡಿದೆ ಎಂಬ ಅನುಮಾನ ಎಲ್ಲರನ್ನು ಕಾಡುತ್ತದೆ. ಅಷ್ಟೊಂದು ಆತ್ಮಬಲವುಳ್ಳ ವ್ಯಕ್ತಿ ಒಮ್ಮೆಲೇ ಹೇಗೆ ನಡೆ ನುಡಿಗಳಲ್ಲಿ ಬದಲಾಗುತ್ತಾನೆ ಎಂಬ ಅನುಮಾನ ಓದುಗರನ್ನು ಕಾಡುತ್ತದೆ. ಸ್ವಾಮಿಯ ನಿರ್ಧಾರ ಸರಿ ಎನ್ನಿಸಿದರೂ ತಪ್ಪು ಸರಿಗಳ ಊರ ಜನರ ನಂಬಿಕೆಗಳು, ಬ್ರಹ್ಮಚರ್ಯ, ಗ್ರಹಸ್ತ , ವಾನಪ್ರಸ್ತ, ಸನ್ಯಾಸ ಈ 4 ಆಶ್ರಮಗಳಲ್ಲಿ ಸನ್ಯಾಸಕ್ಕೆ ಬಂದವನು ಹೇಗೆ ಮರಳಿ ಗೃಹಸ್ತ್ಶ್ರಮಕ್ಕೆ ಹೋಗುತ್ತಾನೆ ಎಂಬ ಗೊಂದಲ ಉಂಟಾಗುತ್ತದೆ.
ಸೌರಮಂಡಲದಲ್ಲಿ ಹೇಗೆ ಗ್ರಹಗಳಿಗೆ ಗ್ರಹಣ ಹಿಡಿದಿರುತ್ತದೆಯೋ ಹಾಗೆಯೇ ನಮ್ಮ ಬದುಕಿನಲ್ಲಿಯೂ ಕೆಲವೊಮ್ಮೆ ಮನಸುಗಳಿಗೆ ಮನುಷ್ಯರಿಗೆ ಗೃಹಣ ಹಿಡಿಯುತ್ತದೆ ಎಂಬುದನ್ನು ಭೈರಪ್ಪನವರು ತುಲನಾತ್ಮಕ ರೀತಿಯಲ್ಲಿ ಬರೆದಿದ್ದಾರೆ.
ಗ್ರಹಣ ಬಿಡುವವರೆಗೂ ಕಾಯ್ದರೆ ಎಲ್ಲವು ಒಳಿತಾಗುತ್ತದೆ 🙂
**********************************************************************
An eclipse takes place when one heavenly body such as a moon or planet moves into the shadow of another heavenly body.
There are two types of eclipses on Earth: an eclipse of the moon and an eclipse of the sun.
We all have read this in our school, colleges and many times have experienced as well. In this novel Bhairappa starts with the day of ‘ECLIPSE’ and explains the consequences between myth beliefs and real scientific facts.
Place Himagiri is well known for its temple (Matha) associated with the River Himavati. 5 generation back there lived Swamiji who left this place saying ‘During 5th generation from now, one person comes from Himalaya and becomes Lord of this temple’. With this belief Himagiri people will be waiting for that person.
one day a person with brightness & spark in his eyes comes to Himagiri. People belives that he is the one for whom they were awaiting from long. So they name him as ‘Swamiji’ and request him to be the Lord of Himagiri Temple. But he believes in ‘Work is Worship’ and refuses to take all the rewards given. But later he agrees to call himself as Swamiji but never believe in ‘Matha'(Temple) & worshiping statues. He opens many schools, colleges, hospitals in surrounding village hence tries to vanish myth beliefs that people are following so far by making them educated. He works for the village for continuous 20 years.
Swami never thought himself as Sanyasi/Swami. Hence one day he declares in front of people of the village that he decided to get marry. People will be shocked and thinks that eclipse has affected him mentally. People strongly believe that out of 4 ages(Brahmacharya, Gruhasta, vaanaprasta, Sanyasa) if someone takes Sanyasa he cannot step back himself. They worshiped swamiji like god hence donated their money for the construction of schools & colleges etc. This decision threatens them and they try to stop Swamiji.
You should read novel to know whether swamiji was really affected by Eclipse or was it his strong decision to move on in life 🙂
Please read and comment here to share opinions. 🙂
You seem have read a lot of books!ಕುತೂಹಲಕ್ಕಾಗಿ ಕೇಳ್ತಿದ್ದೀನಿ… ಅಂದಾಜು ಎಷ್ಟು ಪುಸ್ತಕಗಳನ್ನ ಓದಿದ್ದೀರ ಮತ್ತೆ ಪುಸ್ತಕ ಓದುವ ಹವ್ಯಾಸ ಆರಂಭವಾಗಿದ್ದು ಯಾವಾಗ?
*to have
😀 I remember during my 7th class i listed out novels which i have read.. it was around 70 😛 (Though now i don’t remember any of them). My mom used to hide novels from me but still i keep them inside text book n read 😀 This is how it started. But after that due to studies i stopped reading. Now it started again. ಕಾದಂಬರಿ ಹಿಡಿದರೆ ಮುಗಿಸುವವರೆಗೂ ಊಟ ತಿಂಡಿ ಯಾವುದು ಬೇಡ ನನಗೆ 🙂
ಅಯ್ಯಪ್ಪ! 7th stdಗಾಗ್ಲೆ 70 books ಓದಿದ್ರ! ಭಯಂಕರ ಪುಸ್ತಕ ಪ್ರೇಮಿ ನೀವು 😉 Very nice 🙂 25 ವರ್ಷ ಆದ್ರೂ ಎಲ್ಲಾ ಸೇರಿ 75 books ಓದಿಲ್ಲ ನಾನು 🙁 You inpire me to read more 🙂 will try to read atleast 2 books per month 🙂
And ನನ್ನ ಪ್ರತಿ Post ಓದ್ತಾ ಇರೋದಕ್ಕೆ ತುಂಬಾ Thanks :*.. ಬರೆದಿದ್ದನ್ನು ಯಾರಾದರು ಓದ್ತಾರೆ ಅಂತ ಗೊತ್ತಾದ್ರೆ ತುಂಬಾ ಖುಷಿ ಆಗತ್ತೆ 🙂
ಆವಾಗ ಅಸ್ಟೊಂದು ಓದ್ತಿದ್ದೆ. ಈಗಾ ಹುಚ್ಚು ಬಿಟ್ಟಿದೆ ಅಂತಾನೆ ಹೇಳಬಹುದು. 😀 Inspiration ಅಂತೆಲ್ಲ ಏನಿಲ್ಲ ಮಧು.. ನಾನು recent ಆಗಿ ಡಿಸೈಡ್ ಮಾಡಿದ್ದು ಇನ್ನ್ಮೇಲೆ ಜಾಸ್ತಿ ಓದಬೇಕು ಅಂತ 🙂
ಈ ಬರವಣಿಗೆ ಅನ್ನೋ ಅದ್ಭುತ ಕಲೆಯ ಮಾಯೆನೇ ಹಾಗೆ, ಅಪರಿಚಿತರ ನಡುವೆ ಹೇಗೋ ಒಂದು ಬಂಧ ಬೆಸೆದುಬಿಡತ್ತೆ 🙂
You write well :* Now that you have started giving english translation also. Very good move 🙂 keep it up 🙂
Thanks Madhu 🙂