ಬೆಸುಗೆ (Besuge) — ಅಶ್ವಿನಿ
ಮೊದಲು ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬರುತ್ತಿದ್ದ ಈ ಕಥೆ ನಂತರ ಕಾದಂಬರಿಯಾಗಿ ಪ್ರಕಟವಾಯಿತು. ನಂತರ ಬೆಸುಗೆ ಸಿನಿಮಾ ಆಗಿ ಭರ್ಜರಿ ಪ್ರದರ್ಶನ ಕೂಡ ಕಂಡಿದೆ.
ಅಶ್ವಿನಿಯವರ ಒಳ್ಳೆಯ ಕಾದಂಬರಿಗಳಲ್ಲಿ ಒಂದು.
ದಿಕ್ಕಿಲ್ಲದ ಅನಾಥ ಹೆಣ್ಣು ಸುಮಾ ಅನಂತರಾಯರ ಮನೆಯಲ್ಲಿ ನಾಗಲಕ್ಷ್ಮಿಯವರ ಸಹಾಯಕ್ಕೆಂದು ಮನೆಗೆಲಸ ಮಾಡಿಕೊಂಡು ತನ್ನ ಓದನ್ನು ಮುಂದುವರೆಸುತ್ತಾಳೆ.
ಕರುಣಾಳು ದಂಪತಿಗಳು ಅವಳನ್ನು ಮನೆಮಗಳ ಹಾಗೆ ಪ್ರೀತಿಯಿಂದ ಸಲಹುತ್ತಾರೆ. ತಾನು ವಿಧವೆ ಎಂಬ ಸತ್ಯವನ್ನು ಯಾರ ಮುಂದೆಯೂ ಹೇಳದೆ ಬಚ್ಚಿಡುತ್ತಾಳೆ ಸುಮಾ.
ವಿದೇಶದಲ್ಲಿರುವ ವೇಣು ಮಾಧವ ರಾಯರ ಏಕಮಾತ್ರ ಪ್ರೀತಿಯ ಪುತ್ರ. ನೋಟದಲ್ಲಿ, ಬುದ್ಧಿವಂತಿಕೆಯಲ್ಲಿ, ಸಜ್ಜನಿಕೆಯಲ್ಲಿ ಅಪ್ಪಟ ಅಪರಂಜಿ ಯುವಕ. ಚಿಕ್ಕಂದಿನಲ್ಲಿ ನೋಡಿದ ‘ಪುಟ್ಟಿ’ಯ ಹೊರತು ಇನ್ನ್ಯಾವ ಹೆಣ್ಣನ್ನು ಹಚ್ಚಿಕೊಳ್ಳಲಾರ.
ಒಂದಿನ ವೇಣು ಭಾರತಕ್ಕೆ ಬಂದಿಳಿಯುತ್ತಾನೆ, ಸುಮಳನ್ನು ಕಂಡು ಮಾರು ಹೋಗುತ್ತಾನೆ. ಸುಮನಿಗೂ ಇವನ ಮೇಲೆ ಒಲವಾದರೂ ತನ್ನ ಸ್ತಿತಿಗತಿ ತಿಳಿದು ಹಿಂದೆ ಸರಿಯುವ ಸೂಕ್ಷ್ಮಮತಿ. ಇದಲ್ಲದೆ ನಾಗಮ್ಮನವರಿಗೆ ತಮ್ಮ ಮಗ ಸುಮಳನ್ನು ಇಷ್ಟ ಪಡುವುದು ತಿಳಿದಿದ್ದರೂ ತಮ್ಮ ಘನತೆಗೆ ಸರಿ ಹೋಗುವ ಚಂಪಳ ಜೊತೆ ಅವನ ಮದುವೆ ಮಾಡಬೇಕೆಂಬ ಬಯಕೆ.
ಯಾವ ಪ್ರೀತಿ ಸುಮಾ ಮತ್ತು ವೇಣುರನ್ನು ಹತ್ತಿರಕ್ಕೆ ತರುತ್ತದೆ. ತಾನು ವಿಧವೆ ಅಂತ ಗೊತ್ತಿದ್ದರು ಸುಮಳೆಕೆ ವೇಣು ಪ್ರೀತಿ ಪಾಶದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾಳೆ. ಗೊತ್ತಾಗಬೇಕೆಂದರೆ ಈ ಕಾದಂಬರಿ ಹುಡುಕಿ ಓದಿ. 🙂
ನನ್ನ ಪ್ರಕಾರ ಮದುವೆ ಸ್ವರ್ಗ ನಿರ್ಧಾರಿತ ಅನ್ನುವುದು 100 ರಷ್ಟು ನಿಜ. ಎಲ್ಲೋ ಹುಟ್ಟಿ ಬೆಳೆಯುವ ಹೆಣ್ಣಿಗೆ ಇನ್ನೆಲ್ಲೋ ಹುಟ್ಟಿ ಬೆಳೆಯುವ ಗಂಡಿನ ಜೊತೆಗೆ ಮದುವೆ ಆಗಿ ಇಡಿ ಜೀವನ ಪೂರ್ತಿ ಅವರೊಂದಿಗೆ ಬಾಳಬೇಕಾಗಿರುವುದು ಸಾಮಾನ್ಯ ಸಂಗತಿಯೇನಲ್ಲ. ಆ ಒಲವಿನ ಕೊಂಡಿ ಜನ್ಮ ಜನ್ಮಗಳಿಗು ಬೆಸೆದುಕೊಂಡಿರುತ್ತದೆ ಎಂಬುದು ನಿಜ.
ಪ್ರೀತಿ ಎನ್ನುವುದು ದೈವ ನಿಶ್ಚಯ ಎಂದು ಮಾತ್ರ ಹೇಳಬಲ್ಲೆ 🙂
ಚೆನ್ನಾಗಿದೆ 🙂 ಕವಿತೆಗಳನ್ನೂ post ಮಾಡೋಕೆ ಆರಂಭಿಸಿ 🙂
ಮಧು ಕನ್ನಡ ಕಾದಂಬರಿಗಳ ಪರಿಚಯ ಮಾಡಿ ಕೊಡುವ ಸಣ್ಣ ಪ್ರಯತ್ನ ನನ್ನದು. ಮುಂದೊಂದು ದಿನ ಕವಿತೆಗಳನ್ನು Post ಮಾಡುತ್ತೇನೆ. ಸಲಹೆಗಾಗಿ ಧನ್ಯವಾದ 🙂