ಮಲೆಗಳಲ್ಲಿ ಮದುಮಗಳು (Malegalalli Madumagalu)– ಕುವೆಂಪು
ಈ ಕಾದಂಬರಿ ಓದಿ ತುಂಬಾ ದಿನಗಳಾಗಿತ್ತು . ಆದರೆ ಇಷ್ಟು ಬ್ರಹತ ಆದ , ಎಣಿಸಲಾರದಷ್ಟು ಪಾತ್ರಗಳಿರುವ ಈ ಕಾದಂಬರಿಯ ಬಗ್ಗೆ ಹೇಗೆ ಶುರು ಮಾಡಬೇಕೆನ್ನುವುದೇ ತೋಚುತ್ತಿರಲಿಲ್ಲ. ಹಾಗಾಗಿಯೇ ಮದ್ಯದಲ್ಲಿ ‘ಮನೋಲಹರಿ‘ ಬರೆದೆ. ಅದನ್ನು ಬರೆದು ಎಷ್ಟೋ ದಿನಗಳು ಕಳೆದರೂ ‘ಮಲೆಗಳಲ್ಲಿ ಮದುಮಗಳು’ ಬಗ್ಗೆ ಬರೆಯಲು ಆಗಲೇ ಇಲ್ಲ . ಅಂತು ಇಂತೂ ಈ ಸಾರಿ ಬರೆದೇ ತೀರಬೇಕೆಂದು ತೀರ್ಮಾನಿಸಿ ಕೂತಾಗ ಹೊರಬಂದ ಈ ಬರಹ 🙂
ಶುರು ಮಾಡುವುದಕ್ಕಿಂತ ಮೊದಲು ಪಾತ್ರ ಪರಿಚಯ ಕೊಡಬಯಸುತ್ತೇನೆ ;
ಸಿಂಭಾವಿ
ಹೆಗ್ಗಡೆ — ಭರಮೈ ಹೆಗ್ಗಡೆ & ಹೆಂಡತಿ ಜಟ್ಟಮ್ಮ. ಭರಮೈ ಹೆಗ್ಗಡೆಯ ತಂಗಿ ಲಕ್ಕಮ್ಮ .
ಜೀತದಾಳುಗಳು – ಗುತ್ತಿ (ಗುತ್ತಿಯ ನಾಯಿ ಹುಲಿಯ ) & ಮಂಜ
ಸೀತೂರು — ತಿಮ್ಮನಾಯ್ಕ
ಲಕ್ಕುಂದ— ಸೇಸನಾಯ್ಕ (ತಿಮ್ಮನಾಯ್ಕನ ಭಾವ )
ಜೀತದಾಳುಗಳು — ರಂಗ & ಪುಟ್ಟ
ಮೇಗರವಳ್ಳಿ
ಸುಬ್ಬಣ್ಣ ಹೆಗ್ಗಡೆ — ಮಗ ತಿಮ್ಮಪ್ಪ ಹೆಗ್ಗಡೆ & ಮಗಳು ಮಂಜಮ್ಮ
ತಮ್ಮನ ಮಗ — ಶಂಕರ ಹೆಗ್ಗಡೆ
ಜೀತದಾಳುಗಳು — ಮಂಜ & ಸಿದ್ದಿ , ತಿಮ್ಮ & ಗಿಡ್ಡಿ, ಕುಲವಡಿ ಸಣ್ಣ , ಭೈರ
ಕಲ್ಲೂರು ಮಂಜಯ್ಯ ಜೋಯಿಸರು
ಹೂವಳ್ಳಿ
ವೆಂಕಣ್ಣ & ಮಗಳು ಚಿನ್ನಮ್ಮ
ಕೋಣುರು
ಗೌಡ — ರಂಗಪ್ಪ ಗೌಡ & ಹೆಂಡತಿ ಕಾಗಿನಹಳ್ಳಿ ಅಮ್ಮ ದಾನಮ್ಮ . ತಮ್ಮ ಮುಕುಂದಯ್ಯ
ಅನಂತಯ್ಯ ಐಗಳು
ಜೀತದಾಳುಗಳು — ಚೀಂಕ್ರ & ದೇಯಿ , ಪಿಜಣ & ಅಕಣಿ, ಐತ & ಪಿಂಚಲು , ಮೊದಂಕಿಲ & ಬಾಗಿ
ಬಾವಿಕೊಪ್ಪ
ನಾಗಯ್ಯ & ಹೆಂಡತಿ ನಾಗಕ್ಕ , ನಾಗತ್ತೆ (ನಾಗಯ್ಯನ ತಾಯಿ )
ಬೆಟ್ಟಳ್ಳಿ
ಸಣ್ಣ ಗೌಡ — ದೇವಯ್ಯ & ದೇವಮ್ಮ
ಅಂತಕ್ಕ & ಕಾವೇರಿ
ಜೀತದಾಳುಗಳು — ದೊಡ್ಡ ಬೀರ & ಸೇಸಿ (ತಿಮ್ಮಿ , ಸಣ್ಣ ಬೀರ , ಪುಟ್ಟ ಬೀರರ ತಂದೆ ತಾಯಿ ), ಬಚ್ಚ
(ಸೇಸಿಯ ಅಣ್ಣನ ಮಗ ಗುತ್ತಿ )
ತೀರ್ಥಹಳ್ಳಿ
ಪಾದ್ರಿ — ಜೀವರತ್ನಯ್ಯ
ಕಥೆ ;
ಹೀಗೆ ಸುಮಾರು ಪಾತ್ರಗಳಿಂದ ಕೂಡಿದ ಈ ಕಾದಂಬರಿ ಸಿಂಭಾವಿ ಗುತ್ತಿಯಿಂದ ಶುರುವಾಗುತ್ತದೆ . ಬೆಟ್ಟಳ್ಳಿಯಲ್ಲಿರುವ ತನ್ನ ಅತ್ತೆಯ ಮಗಳು ತಿಮ್ಮಿಯನ್ನು ಪ್ರೀತಿಸುತ್ತಿದ್ದ ಗುತ್ತಿ , ತಿಮ್ಮಿಯ ತಂದೆ ಅವಳನ್ನು ಅದೇ ಊರಿನ ಬಚ್ಚನಿಗೆ ಮದುವೆ ಮಾಡಿ ಕೊಡಲು ಮುಂದಾದಾಗ, ಅವಳನ್ನು ಓಡಿಸಿಕೊಂಡು ಬರುವ ಯೋಜನೆ ಹಾಕಿಕೊಂಡು ಸಿಂಭಾವಿಯಿಂದ ಬೆಟ್ಟಳ್ಳಿಗೆ ಪಯಣ ಬೆಳೆಸುತ್ತಾನೆ . ಜೊತೆಯಲ್ಲಿ ಅವನ ನಾಯಿ ಹುಲಿಯ ಕೂಡ .
ಸಿಂಭಾವಿಯಿಂದ ಹೊರಟು ಸೀತೂರು, ಮೇಗರವಳ್ಳಿ , ಹೂವಳ್ಳಿಯನ್ನು ದಾಟಿ ಬೆಟ್ಟಳ್ಳಿ ತಲುಪಬೇಕಾಗಿರುವುದರಿಂದ ಗುತ್ತಿಯದು ಸುದೀರ್ಘ ಪಯಣ . ಅವನ ಪಯಣದ ಜೊತೆ ಸಾಗುತ್ತದೆ ಕಾದಂಬರಿ. ಅವನು ಸೇರಿದ ಪ್ರತಿ ಊರಿನ ವಿವರಣೆಯಿದೆ, ಒಂದೊಂದು ಪಾತ್ರಕ್ಕೂ ಒಂದೊಂದು ಕತೆಯಿದೆ.. ಅತ್ಯದ್ಭುತ ಸಂಗತಿ ಎಂದರೆ ಈ ಎಲ್ಲ ಪಾತ್ರಗಳನ್ನು ಒಂದಕ್ಕೊಂದು ಜೋಡಿಸಿರುವ ಪರಿ . ಪ್ರತಿಯೊಂದು ಪಾತ್ರಕ್ಕೂ ಸಂಬಂಧವಿದೆ .
ಹಾಗೆ 19 ನೆ ಶತಮಾನದಲ್ಲಿ ನಡೆಯುತ್ತಿದ್ದ ಜಾತಿ ಮತಾಂತರಗಳನ್ನು ಕಥೆ ಒಳಗೊಂಡಿದೆ . ಕ್ರೈಸ್ಟ್ ಮತದ ಪ್ರಚಾರ ಮಾಡುವ ಪಾದ್ರಿ ಜೀವರತ್ನಯ್ಯ , ಕ್ರೈಸ್ಟ್ ಮತಕ್ಕೆ ಸೇರಬೇಕೆಂದು ಹಂಬಲಿಸುವ ದೇವಯ್ಯ ಹೀಗೆ ಮನುಷ್ಯರ ಮತ್ತು ಮನಸಿನ ನಡುವಿನ ಜಾತಿಯ ಬಗೆಗಿನ ತಿಕ್ಕಾಟಗಳನ್ನು ತೋರಿಸಿದ್ದಾರೆ . Crop ಗೆ ‘ಕಿರಾಪು’, ‘bicycle’ ಗೆ ‘ಬಿಸುಕಲ್ಲು ‘ ಎಂದೆಲ್ಲ ಉಚ್ಚರಿಸುತ್ತಿದ್ದ ಕಾಲವದು .
ಇಷ್ಟೆಲ್ಲಾ ಪಾತ್ರಗಳಲ್ಲಿ ಅತಿ ಮುಖ್ಯವಾದುವು ಎಂದರೆ ಗುತ್ತಿ , ಚಿನ್ನಮ್ಮ & ಮುಕುಂದಯ್ಯ , ಐತ & ಪಿಂಚಲು . ಕೊಣುರಿನ ಮುಕುಂದಯ್ಯನಿಗೆ ತನ್ನ ಅಕ್ಕನ ಮಗಳು ಚಿನ್ನಮ್ಮನ ಜೊತೆ ಬಾಲ್ಯದಿಂದಲೂ ಗೆಳೆತನ . ಅದೇ ಗೆಳೆತನ ಪ್ರೀತಿಯಾಗಿ ಬದಲಾಗಿರುತ್ತದೆ ದೊಡ್ಡವರಾದ ಮೇಲೆ . ಆದರೆ ಹೂವಳ್ಳಿ ವೆಂಕಣ್ಣ ತನ್ನ ಮಗಳನ್ನು ತಿಮ್ಮಪ್ಪ ಹೆಗ್ಗಡೆಗೆ ಕೊಡುವ ಸಂಚು ಮಾಡಿದಾಗ ಇವರೆಲ್ಲರೂ ಸೇರಿಕೊಂಡು ಚಿನ್ನಮ್ಮನನ್ನು ಓಡಿಸಿಕೊಂಡು ಬರುವ ಯೋಜನೆ ಹಾಕಿಕೊಳ್ಳುತ್ತಾರೆ . ಹೀಗೆ ಕತೆಯ ಉದ್ದಗಲಕ್ಕೂ ಗುತ್ತಿ & ತಿಮ್ಮಿ , ಚಿನ್ನಮ್ಮ & ಮುಕುಂದಯ್ಯ ಇವರ ಪರಿ ಪಾಟಲುಗಳು, ಯೋಜನೆಗಳು , ಸ್ತಾನಮಾನಗಳನ್ನು ಮೀರಿ ಒಬ್ಬರಿಗೊಬ್ಬರು ಸಹಾಯ ಮಾಡುವ ಮನಸುಗಳ ಚಿತ್ರಣವಿದೆ .ಎರಡು ಸನ್ನಿವೇಶಗಳಲ್ಲೂ ಮದುಮಗಳು ಭಯಂಕರವಾದ ಕಾಡನ್ನು ದಾಟಿಕೊಂಡು ಬರುವುದರಿಂದ ಈ ಕಾದಂಬರಿಗೆ ‘ಮಲೆಗಳಲ್ಲಿ ಮದುಮಗಳು ‘ ಎಂಬ ಶೀರ್ಷಿಕೆ ಕೊಟ್ಟಿರಬಹುದೆಂದು ನನ್ನ ಊಹೆ .
ಕುವೆಂಪು ಖಜಾನೆಯೊಳಗಿಂದ ಓದಲೇಬೇಕಾದ ಕಾದಂಬರಿ 🙂
***********************************************
‘Malegalli Madumagalu’ means ‘Bride in mountains’. Novel is enriched with number of characters. This is the story revolves around Malenadu during 19th century.
Before going into brief story, i would like to explain about each & every character.
Simbhavi
Heggade– Bharamai heggade & Wife Jattamma. Lakkamma, sister of Bharamai heggade.
Slaves- Gutti(‘Huliya’, Gutti’s Dog) & Manja
Seeturu— Timmanayka
Lakkunda— Sesanayka
Jeetadalugalu– Ranga & Putta
Megaravalli
Subbanna Heggade– Son Timmappa heggade & daughter Manjamma
Subbanna heggade’s Brother son– Shankar heggade
Slaves– Manja & Siddi, Timma & Giddi, Kulavadi Sanna, Bhaira
Kalluru Manjayya Officiant
Huvalli
Venkanna & Daughter Chinnamma
Konuru
Gowda– Rangappa gowda & wife kaaginahalli Daanamma. Brother Mukundayya
Anantayya Aigalu
Slaves– Cheenkra & Deyi, Pijana & Akani, Ita & pinchalu, Modankil & baagi
Baavikoppa
Naagayya & wife naagakka, naagatte (naagayya’s Mother)
Bettalli
Gowda– Devayya & Devamma
Antakka & kaveri
Slaves– Dodd beera & Sesi (Timmi, Sanna beera, putta beera’s parents) , Bachcha
Teerthahalli
Father– Jeevaratnayya
Story begins with Gutti, who loves Bettalli Timmi. Since Timmi’s father was planning to marry his daughter with bachcha with the influence of Bettalli heggade, Gutti plans to get Timmi from Bettalli. Gutti’s journey starts from Simbhavi to Seeturu to Megaravalli to Huvalli and then finally ends in Bettalli and thus the story!
Along with Gutti, even Mukundayya who loves Huvalli chinnamma from his childhood was planning to run away with her. These 2 stories continues through out the novel and Ita & Pinchalu helps these guys to succeed in their plan. Even though there were lot of fights happening because of caste, people were boycotting for converting as Christ but there will not be any caste or status or place difference between Gutti, Chinnamma & Mukundayya, Ita & Pinchalu. They help each other and achieve what they wanted in their life. Very simple story but the way Kuvempu elaborated,interlinked between each and every character is awesome!!.
I can say one of the must read novel from Kuvempu 🙂
i hope you given your opinion than vimarshe madam, any have nice to recal……
ನಿಜ. ಇಂತಹ ಮಹಾನ ಕಾದಂಬರಿಗಳನ್ನು ವಿಮರ್ಶೆ ಮಾಡುವಷ್ಟು ದೊಡ್ದವಳಲ್ಲ ನಾನು. 🙂 ನನ್ನ opinions share ಮಾಡಿದ್ದಷ್ಟೇ..