ಮನೋಲಹರಿ (Manolahari) — C .N .ಮುಕ್ತಾ
ಸಂಸಾರದಲ್ಲಿ ಸಾಮರಸ್ಯವಿದ್ದಾಗ ಬದುಕು ನಂದನವಾಗುತ್ತದೆ.
ದಂಪತಿಗಳು ತಮ್ಮ ಜವಾಬ್ದಾರಿ ಅರಿತು ನಡೆದಾಗ ಮಾತ್ರ ಜೀವನ ಚಕ್ರ ಸುಲಲಿತವಾಗಿ ಉರುಳುತ್ತದೆ.
ಇತ್ತೀಚಿಗೆ ಎಲ್ಲರು love marriage ಗಳ ಮೊರೆ ಹೋಗುತ್ತಿರುವುದನ್ನು ನೋಡುತ್ತಿದ್ದೇವೆ. ನಿಜವಾದ ಪ್ರೀತಿಯಿಂದ ಪ್ರೀತಿಸಿ ಮದುವೆಯ ನಂತರ ಖುಷಿಯ ಜೀವನ ನಡೆಸುತ್ತಿರುವವರು ಒಂದು ಕಡೆಯಾದರೆ, ಆಕರ್ಷಣೆ ಬತ್ತಿದ ನಂತರ ನಿಜ ಸ್ವರೂಪ ಬಯಲಾಗಿ ಬೇರೆಯಾಗುತ್ತಿರುವವರು ಇನ್ನೊಂದು ಕಡೆ. Live-in-relationship ನಲ್ಲಿ ಸ್ವಲ್ಪ ದಿನಗಳ ಕಾಲ ಜೊತೆಯಲ್ಲಿ ಬದುಕಿ ನಂತರ ವೈಮನಸು ಬಂದು ಆತ್ಮಹತ್ಯೆ ಮಾಡಿಕೊಳ್ಳುವವರಿಗೆನು ಕಮ್ಮಿ ಇಲ್ಲ.
1997 ರ ಸಮಯದಲ್ಲಿ arranged ಮದುವೆಗಳೇ ಪ್ರಧಾನವಾಗಿದ್ದವು. ಆ ಸಮಯದಲ್ಲಿ ಸಿ.ಎನ್.ಮುಕ್ತ ಅವರು ಬರೆದ ಕಾದಂಬರಿ ‘ಮನೋಲಹರಿ‘.
ಅಮೃತಾ & ಮಂಜುಳಾ ಇಬ್ಬರು ಕಸಿನ್ಸ್. ಬಡತನದಲ್ಲಿ ಬೆಳೆದು ಮನಸಿನ ತುಂಬಾ ಆಸೆಗಳನ್ನು ತುಂಬಿಕೊಂಡಿರುವ ಅಮೃತಾ, ಚಿನ್ನದ ಚಮಚ ಬಾಯಿಗಿಟ್ಟುಕೊಂಡು ಬೆಳೆದ ಸದ್ಗುಣಗಳ ಗೊಂಬೆ ಮಂಜುಳಾ. ಅಮೃತಾಳ ತಂದೆ-ತಾಯಿ ತಮ್ಮ ಸ್ಥಿತಿಗತಿಗೆ ತಕ್ಕನಾದ ಹುಡುಗನನ್ನು ಆರಿಸಿ ಅವಳಿಗೆ ಮದುವೆ ಮಾಡುತ್ತಾರೆ. ಮೊದಲಿಗೆ ಖುಷಿಯಾಗಿಯೇ ಇದ್ದ ಅಮೃತ ಯಾವಾಗ ಮಂಜುಳಾ ಸಿರಿವಂತ ಹುಡುಗನನ್ನು ಮದುವೆ ಆಗುತ್ತಾಳೋ ಆಗ ತಾನು ಅವಳ ಹಾಗೆ ಬದುಕಬೇಕೆಂದು ಕನಸು ಕಾಣುತ್ತಾಳೆ. ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಅವಳು ಮನೆ-ಪಾಠ ಹೇಳಿ ಕೊಡಲು ಶುರು ಮಾಡುತ್ತಾಳೆ. ಪ್ರೀತಿಯಿಂದ ನೋಡಿಕೊಳ್ಳುವ ಗಂಡ, ಇವಳಿಗೆ ಮನೆಯಲ್ಲಿ ಒಂದು ಚಿಕ್ಕ ಕಡ್ಡಿಯನ್ನು ಎತ್ತಿಡಲು ಬಿಡದಂತೆ ನೋಡಿಕೊಳ್ಳುವ ಅತ್ತೆ, ಹೀಗೆ perfect ಜೀವನ ಅಮೃತಾಗೆ ಇದ್ದರೂ ದುಡ್ಡು ಮಾಡಬೇಕು, ಕಾರ್, ಬಂಗಲೆ ಕೊಂಡುಕೊಳ್ಳಬೇಕು ಎಂಬ ಹಂಬಲದಲ್ಲಿ ಎಲ್ಲವನ್ನು ಕಡೆಗಣಿಸುತ್ತಾಳೆ. ಪಾಠ ಹೇಳಿ ಕೊಡುವ ಆಕೆ ಒಂದೇ ಸಮನೆ ಟ್ಯೂಷನ್ ಬ್ಯಾಚ್ ಗಳು, ನಂತರ ಶಾಲೆ ಸಂಜೆ ಮತ್ತೆ ಟ್ಯೂಷನ್ ಹೀಗೆ ದಣಿದು ಬಸವಳಿದರೂ ನಿಲ್ಲಿಸುವುದಿಲ್ಲ. ಈ ಮಧ್ಯೆ ಅಮೃತಾಗೆ ಮಗು ಆಗಿರುತ್ತದೆ. ಅದಕ್ಕೂ ಸದಾ busy ಇರುವ ತಾಯಿ ಪ್ರೀತಿ ಸಿಗದೇ ಸದಾ ತಂದೆ ಅಜ್ಜಿ ಆಶ್ರಯದಲ್ಲಿ ಬೆಳೆಯುತ್ತಿರುತ್ತದೆ.
ಅಮೃತ ಯಾವ ಬದುಕಿನ ಕನಸು ಹೊತ್ತು ತನ್ನ ಅತ್ತೆ, ಗಂಡ, ಮಗುವನ್ನು ಅಲಕ್ಷಿಸಿ ಸುಂದರ ಬದುಕೆಂಬ ಭ್ರಮೆಗಾಗಿ ದುಡಿಯಿತ್ತಿದ್ದಳೋ, ಆ ಎಲ್ಲವು ಮಂಜುಳಾಳ ಬದುಕಿನಲ್ಲಿತ್ತು. ದೊಡ್ಡ ಮನೆ, ಸುತ್ತಾಡಲು ಕಾರ್, ಕೈಗೊಬ್ಬ ಕಾಲಿಗೊಬ್ಬ ಎಂಬಂತೆ ಆಳುಗಳು, ಒಡವೆಗಳು…. ಆದರೆ ಅವಳ ಬದುಕಿನ ದೊಡ್ಡ ಕೊರತೆ ಎಂದರೆ ಹಾದಿ ತಪ್ಪಿದ ಗಂಡ. ದಿನ ಬೆಳಗಾದರೆ ಹೊಸ ಸೆರಗನ್ನು ಹುಡುಕಿಕೊಂಡು ಹೋಗುವ ಗಂಡನಿಗೆ ಬೇಡವಾದ ಹೆಂಡತಿಯಾಗಿ ಪ್ರತಿ ದಿನವು ಕಣ್ಣೇರು ಸುರಿಸುತ್ತಿದ್ದಳು.
ಕಾಲ ಚಕ್ರ ತಿರುಗುತ್ತಲೇ ಇರುತ್ತದೆ. ಅಮೃತ ತನ್ನ ಗಂಡ ಅತ್ತೆಯನ್ನು ಕಡೆಗಣಿಸಿ ಮಗನನ್ನು ಉಂಡಾಡಿ ಗುಂಡನ ಹಾಗೆ ಬೆಳಸುತ್ತಾಳೆ. ಇತ್ತ ಮಂಜುಳಾಳ ಗಂಡ ಮಗಳು ಲಹರಿಯನ್ನು ತನ್ನಂತೆಯೇ ಸ್ವೆಚ್ಚಾಚಾರದಿಂದ ಬೆಳೆಸಿ ಅವಳಿಗೆ ಮದುವೆಯ ಮೇಲೆ ನಂಬಿಕೆ ಇಲ್ಲದಂತೆ ಮಾಡುತ್ತಾನೆ.
ಹೀಗೆ ಸಾಗುತ್ತದೆ ಕಾದಂಬರಿ …. ಮುಕ್ತಾರವರು ಮುಕ್ತವಾಗಿ ಕಥೆಗೆ happy ending ಕೊಟ್ಟಿದ್ದಾರೆ 🙂
ಈ ಕಾದಂಬರಿಯಿಂದ ಕಲಿಯುವ ಪಾಠವೆಂದರೆ ನಮ್ಮಲ್ಲಿ ಬಹುತೇಕರು ಜೀವನದಲ್ಲಿ ಇರುವುದೆಲ್ಲವನ್ನು ಕಡೆಗಣಿಸಿ ಇನ್ನ್ಯಾರನ್ನೋ ನೋಡಿ ಅವರ ಜೀವನದ ಕನಸು ಕಾಣುತ್ತೇವೆ, ಹಂಬಲಿಸುತ್ತೇವೆ. ಈ ಸೃಷ್ಟಿಯಲ್ಲಿ ಯಾರೂ ಪರಿಪೂರ್ಣರಲ್ಲ, ಎಲ್ಲರಿಗು ಒಂದಲ್ಲ ಒಂದು ಕೊರತೆ ಇದ್ದೇ ಇರುತ್ತದೆ. ಆದರೆ ಕೊರತೆಗಳನ್ನು ಹಿಂದಕ್ಕೆ ಹಾಕಿ ನಮಗೆ ಸಿಕ್ಕಿರುವುದೆನ್ನಲ್ಲ ಮುಂದಕ್ಕೆ ಹಾಕಿದರೆ ಆ ಕೊರತೆ ಶೂನ್ಯವಾಗಿ ಕಾಣಿಸುತ್ತದೆ ಅಲ್ವೇ? ಕಾರ್ ಇದ್ದೋನು ಹೆಲಿಕ್ಯಾಪ್ಟರ್ ಕನಸು ಕಾಣುತ್ತಾನೆ. ಬೈಕ್ ಓಡಿಸಿ ದಣಿದಿರುವವನು ಕಾರಿನ ಕನಸಿನಲ್ಲಿರುತ್ತಾನೆ. ಇನ್ನು ಕಾರು, ಬೈಕು ಯಾವುದು ಇಲ್ಲದೇ ನಡೆದುಕೊಂಡು ಓಡಾಡುವವನು at least ಒಂದು ಬೈಕ್ ಇರಬೇಕಿತ್ತು ಎಂದುಕೊಳ್ಳುತ್ತಾನೆ. ಆದರೆ ಕಾಲೇ ಇಲ್ಲದಿರೋನು….?
‘ಇರುವುದೆಲ್ಲವ ಬಿಟ್ಟು ಇರುದುದೆಡೆಗೆ ತುಡಿವುದೇ ಜೀವನ’ ಎಂದು ಅರ್ಥಪೂರ್ಣವಾಗಿ ಬರೆದಿದ್ದಾರೆ ನಮ್ಮ ಕವಿಗಳು.
‘ಪಾಲಿಗೆ ಬಂದದ್ದು ಪಂಚಾಮೃತ’ ಎಂದುಕೊಂಡು ಬಾಳಿದರೆ ಬಾಳು ಸುಂದರ ಸರಿಗಮ 🙂
ಅಂತ್ಯದ ಎರಡು ಪ್ಯಾರ ಹೆಚ್ಚು ಇಷ್ಟವಾಯ್ತು. ಸರಳ ಸತ್ಯವಾದರೂ ಅದನ್ನು ಅರಿತೂ ಮನಗಾಣದವರೆ ಹೆಚ್ಚು ಈ ಕಾಲದಲ್ಲಿ. ??
ಸತ್ಯ ಸರಳವಾಗೇ ಇರುತ್ತೆ. ಆದರೆ ಜಟಿಲವಾದ ಸುಳ್ಳು ನಮಗೆ ಸಿಹಿಯಾಗಿ ತೋರುತ್ತೆ ಅಲ್ಲವೇ 🙂
ನಿಮ್ಮ ಮಾತು ನಿಜ – ಸರಳ ಸತ್ಯಗಳನ್ನು (ಅದರ ಸರಳತೆಯ ಕಾರಣಕ್ಕೆ) ಒಪ್ಪದೆ ಸಂಕೀರ್ಣತೆಯ ಬೆನ್ನಟ್ಟಿ ದಿಕ್ಕೆಟ್ಟು ಕಳುವಾಗುವುದು ನಿಜವೇನೆ. ಚೋದ್ಯವೆಂದರೆ ನಿಸರ್ಗದ ನಿಯಮಗಳೆಲ್ಲ ಸರಳತೆಯ ಆಧಾರದ ಮೇಲೆ ರೂಪುಗೊಂಡಂತವು – ಅದು ಗೊತ್ತಿದ್ದೂ ನಮ್ಮ ವರ್ತನೆ ಮಾತ್ರ ಅದರ ತದ್ವಿರುದ್ದ. ಎಂತಹ ವಿಪರ್ಯಾಸ ನೋಡಿ ?
ಸಂಕೀರ್ಣತೆಯ ಬೆನ್ನಟ್ಟಿ ದಿಕ್ಕೆಟ್ಟು ಕಳುವಾಗುವುದು– Very true 🙂